ತುಮಕೂರು : ತುಮಕೂರು ಜಿಲ್ಲೆಯಲ್ಲಿ ಬಹು ದೊಡ್ಡ ಲ್ಯಾಂಡ್ ಸ್ಕ್ಯಾಮ್ ನಡೆದಿದ್ದು, ಸೋಲಾರ್ ಪಾರ್ಕ್ ನಿರ್ಮಾಣಕ್ಕೆ 40 ಎಕರೆ ಸರ್ಕಾರಿ ಜಮೀನನ್ನು ಅಕ್ರಮವಾಗಿ ಮಂಜೂರು ಮಾಡಲಾಗಿದೆ. ಏಷಿಯನ್ ಫ್ಯಾಬ್ ಟೆಕ್ ಕಂಪನಿಯ ಡೈರೆಕ್ಟರ್ ಹಾಗೂ ಪ್ರಭಾವಿ ಶಾಸಕನ ಪುತ್ರ ಪವನ್ ಎಂಬಾತನಿಂದ ಲ್ಯಾಂಡ್ ಮಾಫಿಯಾ ನಡೆದಿದೆ. ಈ ಹಗರಣವನ್ನ ದೊಡ್ಡ ದೊಡ್ಡವರೆಲ್ಲಾ ಸೇರಿ ಮುಚ್ಚಿ ಹಾಕ್ತಿದ್ದಾರೆ.
ಹೌದು.. ಪ್ರಭಾವಿ ಶಾಸಕರ ಪುತ್ರ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲು ಸರ್ಕಾರಿ ಜಮೀನಿಗೆ ಕನ್ನ ಹಾಕಿದ್ದು, 40 ಎಕರೆ ಸರ್ಕಾರಿ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಲೂಟಿ ಮಾಡಿದ್ದಾರೆ. ಇದು ತುಮಕೂರು ಜಿಲ್ಲೆಯಲ್ಲಿ ನಡೆದಿರುವ ಬಹುದೊಡ್ಡ ಲ್ಯಾಂಡ್ ಮಾಫಿಯಾವಾಗಿದ್ದು, 40 ಎಕರೆ ಜಮೀನು ಕನ್ವರ್ಷನ್ ಕೂಡ ಮಾಡಲಾಗಿದೆ. 40 ಎಕರೆ ಜಮೀನು ಪರಿವರ್ತನೆ ಆಗಿದ್ದು ಹಣ ಕೂಡ ಪಾವತಿಸಲಾಗಿದೆ. ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಕೋಟಿ ಕೋಟಿ ಹಣ ವಿನಿಯೋಜನೆಯಾಗಿದೆ.
ತುಮಕೂರು DC ಶುಭಕಲ್ಯಾಣ್ ಅವರ ಡಿಜಿಟಲ್ ಸಹಿಯನ್ನು ನಕಲು ಮಾಡಿ ಖದೀಮರು 40 ಎಕರೆಗೆ ಕನ್ನ ಹಾಕಿದ್ದಾರೆ. ಭೂ ಮಾಫಿಯಾ ಮಾಸ್ಟರ್ ಮೈಂಡ್ ಶಾಸಕರೊಬ್ಬರ ಪುತ್ರ ಕೆ.ಪಿ ಪವನ್ ನೇತೃತ್ವದಲ್ಲಿ ಸೋಲಾರ್ ಪಾರ್ಕ್ ಲ್ಯಾಂಡ್ ಮಾಫಿಯಾ ನಡೆದಿದೆ. ಕೆ.ಪಿ ಪವನ್ ಒಡೆತನದ Asian Fab Tech ಕಂಪನಿಗೆ ಮಧುಗಿರಿ ತಾಲೂಕು ತುಮ್ಮಲು ಗ್ರಾಮದಲ್ಲಿರುವ 40 ಎಕರೆ ಸರ್ಕಾರಿ ಜಮೀನನ್ನು ಪರಭಾರೆ ಮಾಡಲಾಗಿದೆ. ಗೋಪಾಲಗೌಡ ಬಿನ್ CN ಸುಬ್ಬೇಗೌಡ ಅವರಿಂದ Asian Fab Tech ಕಂಪನಿಗೆ ಭೂಮಿಯನ್ನು ಪರಭಾರೆ ಮಾಡಿಕೊಂಡಿದ್ದು, ಸರ್ವೇ ನಂಬರ್ 20, 22, 23, 27, 40 ಸೇರಿ ಒಟ್ಟು 40 ಎಕರೆ ಕನ್ವರ್ಷನ್ ಮಾಡಲಾಗಿದೆ.
ಸೋಲಾರ್ ಪ್ಲಾಂಟ್ ನಿರ್ಮಾಣ ಉದ್ದೇಶಕ್ಕಾಗಿ MLA ಪುತ್ರ ಕೆ.ಪಿ ಪವನ್ ಲ್ಯಾಂಡ್ ಕನ್ವರ್ಷನ್ ಮಾಡಿಕೊಂಡಿದ್ದು, 40 ಎಕರೆ ಹಗರಣ ಹೊರ ಬರ್ತಿದ್ದಂತೆ ಅಧಿಕಾರಿಗಳಿಗೆ ಸಂಕಷ್ಟ ಎದುರಾಗಿದೆ. ತುಮಕೂರು ಡಿಸಿ ಕಚೇರಿಯಲ್ಲಿದ್ದ VA ಭಾನುಪ್ರಕಾಶ್ನ್ನು ಅಮಾನತು ಮಾಡಲಾಗಿದೆ. ಭಾನುಪ್ರಕಾಶ್ ಸಸ್ಪೆಂಡ್ ಮಾಡಿ ಜಿಲ್ಲಾಧಿಕಾರಿ ಶುಭಕಲ್ಯಾಣ್ ಆದೇಶ ಹೊರಡಿಸಿದ್ದಾರೆ. ಆದರೆ ಇಷ್ಟು ದೊಡ್ಡ ಹಗರಣ ನಡೆದ್ರೂ ಇನ್ನೂ FIR ದಾಖಲಾಗಿಲ್ಲ. ತುಮಕೂರು ಜಿಲ್ಲಾಧಿಕಾರಿಗಳ ಡಿಜಿಟಲ್ ಸಹಿ ಹೇಗೆ ನಕಲಿ ಮಾಡಿದ್ರು? ಜಮೀನು ಶಿಫಾರಸ್ಸು ಸರಿಯಾಗಿ ಮಾಡದಿದ್ರೂ ಅನುಮೋದನೆ ಹೇಗೆ ಆಯ್ತು? 40 ಎಕರೆ ಜಮೀನು ಹಗರಣದಲ್ಲಿ ಸಣ್ಣವರು ಮಾತ್ರ ಶಾಮೀಲು ಆದ್ರಾ? ದೊಡ್ಡ ದೊಡ್ಡವರು ಯಾಕೆ ಈ ಹಗರಣ ಬಗ್ಗೆ ಕ್ರಮ ಕೈಗೊಂಡಿಲ್ಲ? ಅನ್ನೋ ಪ್ರಶ್ನೆ ಇದೀಗ ಹುಟ್ಟಿಕೊಂಡಿದೆ.
ರಾಜ್ಯದೆಲ್ಲೆಡೆ Asian Fab Tech ಮಾಡಿರೋ ಸೋಲಾರ್ ಪಾರ್ಕ್ ತನಿಖೆ ಮಾಡಿಸಿ. ತುಮಕೂರು, ಚಿಕ್ಕಬಳ್ಳಾಪುರ, KGF ಸೇರಿ ಹಲವೆಡೆ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲಾಗಿದೆ. ರಾಜ್ಯದಲ್ಲಿ ಎಲ್ಲೆಲ್ಲಿ ಸೋಲಾರ್ ಪಾರ್ಕ್ ಮಾಡಿದೆ ಅಲ್ಲೆಲ್ಲಾ ತನಿಖೆ ಮಾಡಿಸಿ. FIR ಆಗಿ ಪ್ರಭಾವಿ ಶಾಸಕರ ಪುತ್ರ ಅರೆಸ್ಟ್ ಆಗುವವರೆಗೂ BTV ಬಿಡಲ್ಲ.
ಇದನ್ನೂ ಓದಿ : ಕಬಿನಿಯಲ್ಲಿ ಹ್ಯಾಟ್ರಿಕ್ ಹೀರೋ ರೌಂಡ್ಸ್ – ಕಾಡಿನ ಮಕ್ಕಳೊಂದಿಗೆ ಬೆರೆತ ಶಿವಣ್ಣ ದಂಪತಿ!
