ಇತ್ತೀಚಿನ ದಿನಗಳಲ್ಲಿ ಕೆಲವೊಂದು ಸಿನಿಮಾಗಳು ತನ್ನ ವಿಶಿಷ್ಟ ಟೈಟಲ್ ಮೂಲಕವೇ ಸಿನಿರಸಿಕರನ್ನ ಆಕರ್ಷಿಸುತ್ತಿವೆ. ಅಂಥಾ ಚಿತ್ರಗಳಲ್ಲಿ ಕಾಲವೇ ಮೋಸಗಾರ ಕೂಡ ಒಂದು. ರೊಮ್ಯಾಂಟಿಕ್ ಕಾಮಿಡಿ, ಆಕ್ಷನ್, ಎಂಟರ್ಟೈನರ್ ಕಥಾಹಂದರ ಒಳಗೊಂಡ ಈ ಚಿತ್ರಕ್ಕೆ ಸಂಜಯ್ ಎಸ್. ಪುರಾಣಿಕ್ ಅವರು ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಕಾಲವೇ ಮೋಸಗಾರ ಚಿತ್ರವು ಜೂನ್ 20ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಈ ಸಿನಿಮಾ ವಿಭಿನ್ನವಾಗಿದೆ.

ಆ್ಯಕ್ಷನ್-ಥ್ರಿಲ್ಲರ್ ಲವ್ ಸ್ಟೋರಿ ಮೂಲಕ ಸಿನಿರಸಿಕರ ಮನ ಗೆದ್ದಿರುವ ಕಾಲವೇ ಮೋಸಗಾರ ಚಿತ್ರದಲ್ಲಿ ಭರತ್ ಸಾಗರ್ ಹಾಗೂ ಯಶಸ್ವಿನಿ ರವೀಂದ್ರ ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಭರತ್ ಸಾಗರ್-ಯಶಸ್ವಿನಿ ರವೀಂದ್ರ ಆ್ಯಕ್ಷನ್ಗೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ.

ವಸ್ಪಂದನ ಪ್ರೊಡಕ್ಷನ್ಸ್ ಪ್ರೈ.ಲಿ. ಅಡಿಯಲ್ಲಿ ರಜತ್ ದುರ್ಗೋಜಿ ಸಾಳುಂಕೆ ಅವರ ನಿರ್ಮಾಣವಾಗಿರುವ ಈ ಚಿತ್ರದ ಹಾಡುಗಳಿಗೆ ಕೆ.ಲೋಕೇಶ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಸಿನಿಮಾಗೆ ಈಗ ವಸಿಷ್ಠ ಸಿಂಹ ಅವರ ಸಾಥ್ ಸಿಕ್ಕಿದೆ. ಸಿನಿಮಾದ ಟ್ರೈಲರ್ ನೋಡಿ ಖುಷಿಯಾಗಿರೋ ವಸಿಸ್ಠ ಸಿಂಹ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಅಂದ್ಹಾಗೆ, ಕಾಲವೇ ಮೋಸಗಾರ ಚಿತ್ರವನ್ನ ಸಂಜಯ್ ವದತ್ ನಿರ್ದೇಶನ ಮಾಡಿದ್ದಾರೆ. ರಜತ್ ದುರ್ಗೊಜಿ ಕೊಂಡೇಲಾ ಬಂಡವಾಳ ಹಾಕಿದ್ದು, ಕೆ ಲೋಕೇಶ್ ಸಂಗೀತ ನೀಡಿದ್ದಾರೆ. ರಾಜ್ಯಾದ್ಯಂತ ಬಿಡುಗಡೆಯಾಗಿರುವ ಕಾಲವೇ ಮೋಸಗಾರ ಸಿನಿಮಾ ಸಖತ್ ಸೌಂಡ್ ಮಾಡ್ತಾಯಿದೆ.

ಇದನ್ನೂ ಓದಿ : ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾಗಿ ಹತ್ತೇ ದಿನಕ್ಕೆ ಹತ್ಯೆಯಾದ ವಿವಾಹಿತ ಮಹಿಳೆ – ಕೊಲೆಗೈದು ಚಿನ್ನಾಭರಣ ದೋಚಿದ ಯುವಕ!







