ಬೆಂಗಳೂರು : ವಿಶ್ವ ತೊನ್ನು ರೋಗ ದಿನದ ಅಂಗವಾಗಿ ರಾಜಾಜಿನಗರ ESIC ಆಸ್ಪತ್ರೆಯ ಆವರಣದಲ್ಲಿ ಜನಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ವೇಳೆ ವೈದ್ಯಕೀಯ ವಿದ್ಯಾರ್ಥಿಗಳಿಂದ ತೊನ್ನು ರೋಗದ ಬಗ್ಗೆ ಕಿರು ನಾಟಕ ಪ್ರದರ್ಶನವನ್ನು ನಡೆಸಲಾಯಿತು.

ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು, ರೋಗಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ESIC ಆಸ್ಪತ್ರೆಯ ಡೀನ್ ಡಾ ಸಂಧ್ಯಾ ಆರ್, ವೈಧ್ಯಕೀಯ ಅಧೀಕ್ಷಕರಾದ ಡಾ ಸಿ. ಜಿ ಎಸ್ ಪ್ರಸಾದ್, ನಿರ್ದೇಶಕರಾದ ಮೆರಿಲ್ ಜಾರ್ಜ್, ಚರ್ಮ ರೋಗ ವಿಭಾಗದ ಡಾ ಗಿರೀಶ್ ಎಂ. ಎಸ್,ಡಾ ರಘುನಾಥ್,ಡಾ ರಾಜೇಶ್,ಡಾ ಚೇತನ್, ಡಾ ವಿಜಯ ಲಕ್ಷ್ಮೀ, ಡಾ ವಿದ್ಯಾ ಶ್ರೀ, ಡಾ ಆಕಾಶ್, ಡಾ ತಾನ್ಯ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ : `ಮಹಾವತಾರ ಸಿನಿಮಾಟಿಕ್ ಯೂನಿವರ್ಸ್’ ಅನಾವರಣ – ಒಂದೇ ಸಲ 7 ಸಿನಿಮಾ ಅನೌನ್ಸ್ ಮಾಡಿದ ಹೊಂಬಾಳೆ ಫಿಲ್ಮ್ಸ್!
Author: Btv Kannada
Post Views: 331







