ಇನ್‌ಸ್ಟಾಗ್ರಾಮ್​​ನಲ್ಲಿ ಪರಿಚಯವಾಗಿ ಹತ್ತೇ ದಿನಕ್ಕೆ ಹತ್ಯೆಯಾದ ವಿವಾಹಿತ ಮಹಿಳೆ – ಕೊಲೆಗೈದು ಚಿನ್ನಾಭರಣ ದೋಚಿದ ಯುವಕ!

ಮಂಡ್ಯ : ಇನ್ಸ್ಟಾಗ್ರಾಮ್​ನಲ್ಲಿ ಪರಿಚಯವಾದ ಯುವಕನೊಬ್ಬ ವಿವಾಹಿತ ಮಹಿಳೆಯನ್ನು ಕೊಲೆ ಮಾಡಿ ಶವವನ್ನು ತನ್ನ ಜಮೀನಿನಲ್ಲಿ ಬಚ್ಚಿಟ್ಟಿದ್ದ ಘಟನೆ ಮಂಡ್ಯದ ಕೆ.ಆರ್. ಪೇಟೆ ತಾಲ್ಲೂಕಿನ ಕರೋಟಿ ಗ್ರಾಮದಲ್ಲಿ ನಡೆದಿದೆ.

ಪುನೀತ್ ಹಾಗೂ ವಿವಾಹಿತ ಮಹಿಳೆ ಪ್ರೀತಿ ಇಬ್ಬರು ಇನ್‌ಸ್ಟಾಗ್ರಾಮ್​​ನಲ್ಲಿ ಇತ್ತೀಚೆಗೆ ಪರಿಚಯವಾಗಿದ್ದಾರೆ. ಗಂಡ, ಮಕ್ಕಳಿದ್ದರೂ ಪ್ರೀತಿ, ಪುನೀತ್​ನನ್ನ ಲವ್​ ಮಾಡಿದ್ದಾರೆ. ಪರಿಚಯವಾಗಿ ಹತ್ತು ದಿನ ಪ್ರೀತಿ, ಪ್ರೇಮ ಎಂದು ಸುತ್ತಾಡಿದ್ದಾರೆ.

ಕಳೆದ ಭಾನುವಾರ ಇಬ್ಬರು ಒಟ್ಟಿಗೆ ಕಾರಿನಲ್ಲಿ ಮೈಸೂರು, ಮಂಡ್ಯ ಪ್ರವಾಸಿ ಸ್ಥಳಗಳನ್ನು ಸುತ್ತಾಡಿ ಫುಲ್​ ಎಂಜಾಯ್‌ ಮಾಡಿದ್ದಾರೆ. ಬಳಿಕ ಕೆ.ಆರ್.ಪೇಟೆಯ ಕತ್ತರಘಟ್ಟ ಅರಣ್ಯ ಪ್ರದೇಶದಲ್ಲಿ ಇಬ್ಬರ ನಡುವೆ ಜಗಳ ನಡೆದಿದ್ದು, ಅಲ್ಲೇ ಮಹಿಳೆ ಪ್ರೀತಿಯನ್ನ ಕೊಲೆ ಮಾಡಿದ ಪುನೀತ್​, ಮೈಮೆಲಿದ್ದ ಚಿನ್ನಾಭರಣ ದೋಚಿದ್ದಾನೆ. ಬಳಿಕ ಕರೋಟಿ ಗ್ರಾಮದ ತನ್ನ ಜಮೀನಿನಲ್ಲಿ ಶವ ಬಿಚ್ಚಿಟ್ಟಿದ್ದಾನೆ. ಪ್ರಿಯತಮೆ ಫೋನ್​​ಗೆ ಬಂದ ಕಾಲ್​ನಿಂದಲೇ ಐನಾತಿ ಸಿಕ್ಕಿಬಿದಿದ್ದಾನೆ. ಈ ಸಂಬಂಧ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : `ಮಹಾವತಾರ ಸಿನಿಮಾಟಿಕ್ ಯೂನಿವರ್ಸ್’ ಅನಾವರಣ – ಒಂದೇ ಸಲ 7 ಸಿನಿಮಾ ಅನೌನ್ಸ್ ಮಾಡಿದ ಹೊಂಬಾಳೆ ಫಿಲ್ಮ್ಸ್!

Btv Kannada
Author: Btv Kannada

Read More