ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ವಸತಿ ಇಲಾಖೆಯ ಹಗರಣ ಭಾರೀ ಸದ್ದು ಮಾಡಿದ್ದು, ಈ ಹಗರಣದಲ್ಲಿ ಸಿಕ್ಕಿ ಬಿದ್ದಿರೋ ಸಚಿವ ಜಮೀರ್ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಹಣ ಕೊಟ್ಟರಷ್ಟೇ ಮನೆ ಭಾಗ್ಯ ಹಗರಣದ ಬಳಿಕ ಸಚಿವ ಜಮೀರ್ ಮತ್ತೊಂದು ಸ್ಕ್ಯಾಮ್ ಬೆಳಕಿಗೆ ಬಂದಿದೆ.
ರಾಜ್ಯದ ವಸತಿ ಮತ್ತು ವಕ್ಸ್ ಖಾತೆಗಳ ಸಚಿವ ಜಮೀರ್ ಅಹಮದ್ ಅವರು ಪ್ರತಿನಿಧಿಸುತ್ತಿರುವ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 47 ಕಾಮಗಾರಿಗಳನ್ನು ನಯಾಪೈಸೆಯಷ್ಟೂ ಸಹ ನಿರ್ವಹಿಸದೆಯೇ ಎರಡೆರಡು ಸಲ ಹಣ ಬಿಡುಗಡೆ ಮಾಡಿಸಿಕೊಂಡಿರುವ ಬೃಹತ್ ಹಗರಣ ಬೆಳಕಿಗೆ ಬಂದಿದೆ. ಚಾಮರಾಜಪೇಟೆ ಕ್ಷೇತ್ರದಲ್ಲಿ ರಸ್ತೆ, ಚರಂಡಿ ಸೇರಿ ಯಾವುದೇ ಕಾಮಗಾರಿ ಮಾಡದೇ ಜಮೀರ್ ಅಹಮದ್ 55 ಕೋಟಿ ಲೂಟಿ ಮಾಡಿದ್ದಾರೆ. ವಸತಿ ಹಗರಣ ಬಳಿಕ ಕಾಮಗಾರಿ ಮಾಡದೇ 55 ಲೂಟಿ ಮಾಡಿರೋ ಆರೋಪ ಕೇಳಿಬಂದಿದೆ.
ಸಚಿವ ಜಮೀರ್ ಮೂಗಿನಡಿಯಲ್ಲಿ ಬಹುದೊಡ್ಡ ಹಗರಣ ನಡೆದಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಕೆಲಸ ಮಾಡಿಸದೇ ನಕಲಿ ಬಿಲ್ ಸೃಷ್ಟಿಸಿ ಲೂಟಿ ಮಾಡಿದ್ದಾರೆ. ವಸತಿ ಹಗರಣ ಆಯ್ತು.. ಈಗ ಕಾಮಗಾರಿ ಮಾಡದೇ 55.32 ಕೋಟಿ ದರೋಡೆ ಮಾಡಿದ್ದಾರೆ. ದೊಡ್ಡವರಿಗೆ ಕಮಿಷನ್ ಕೊಟ್ಟು ಕಾಮಗಾರಿಗಳ ನಕಲಿ ಬಿಲ್ಗೆ ಅನುಮೋದನೆ ಸಿಕ್ಕಿದ್ದು, BTVಯು ಸಚಿವ ಜಮೀರ್ ಪ್ರತಿನಿಧಿಸೋ ಚಾಮರಾಜಪೇಟೆಯ ಕರ್ಮಕಾಂಡವನ್ನು ಬಟಾ ಬಯಲು ಮಾಡಿದೆ. ಚಾಮರಾಜಪೇಟೆಯಲ್ಲಿ 47 ಕಾಮಗಾರಿಗಳಿಗೆ ಎರಡೆರಡು ಬಾರಿ ಹಣ ರಿಲೀಸ್ ಮಾಡಿಸಿಕೊಂಡು ಲೂಟಿ ಮಾಡಿದ್ದು, ಈ ಹಗರಣದಲ್ಲಿ ಅಧಿಕಾರಿಗಳು, ಇಂಜಿನಿಯರ್ಗಳು, ಕಾಂಟ್ರ್ಯಾಕ್ಟರ್ಗಳು ಭಾಗಿಯಾಗಿದ್ದಾರೆ.
ಈ ಹಗರಣದಲ್ಲಿ 12 ಜನ ಅಧಿಕಾರಿಗಳು, ಇಂಜಿನಿಯರ್ಗಳು, 19 ಗುತ್ತಿಗೆದಾರರ ಹೆಸರು ಬೆಳಕಿಗೆ ಬಂದಿದೆ. ಚಾಮರಾಜಪೇಟೆಯಲ್ಲಿ ಕಾರ್ಯ ನಿರ್ವಹಿಸುವ ಇಂಜಿನಿಯರ್ M.S ಮಹೇಶ್, ರಾಧಾಕೃಷ್ಣ, ತಿಮ್ಮರಸು, ಭಾಸ್ಕರ್ ರೆಡ್ಡಿ, ಸಂಗೀತಾ.R, ಸತೀಶ್ ಕುಮಾರ್.ಎ, ಸೈಯ್ಯದ್ ಸಮರ್, ಗಿರಿಧರ್ ಹೆಚ್.ಆರ್, ಅರುಣ್ ಕುಮಾರ್.ಎಂ, ಸೌಮ್ಯ, ಸಿ.ಆರ್,
ರಘು.ಜಿ, ಶ್ರೀನಿವಾಸ ರಾಜು.ಟಿ ಸೇರಿ 12 ಮಂದಿ ಇಂಜಿನಿಯರ್ಗಳು ಭಾಗಿಯಾಗಿದ್ದಾರೆ. ಇನ್ನು ಕಾಂಟ್ರ್ಯಾಕ್ಟರ್ಗಳಾದ ಹೇಮಂತ್ ಕುಮಾರ್, ಗಂಗಮುತ್ತಯ್ಯ, ಜಯರಾಜ್,
ಮಲ್ಲಿಕಾರ್ಜುನ ಸ್ವಾಮಿ, ಪ್ರಭು, ಆರ್ಯ & ಕೋ, ರಾಜೇಂದ್ರ, ಚೇತನ್.ಎಂ, ರವಿಕುಮಾರ್ ಸೇರಿ 19 ಗುತ್ತಿಗೆದಾರರು ಹಗರಣದಲ್ಲಿ ಭಾಗಿಯಾಗಿರೋ ಆರೋಪ ಕೇಳಿಬಂದಿದೆ.
55.32 ಕೋಟಿ ಹಗರಣ ಬಗ್ಗೆ N.R ರಮೇಶ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ನಯಾಪೈಸೆ ಕೆಲಸ ಮಾಡದೇ ಲೂಟಿ ಮಾಡಿರುವ ಬಗ್ಗೆ ದಾಖಲೆಗಳ ಸಮೇತ ಇಂಜಿನಿಯರ್ಗಳು, ಗುತ್ತಿಗೆದಾರರ ಹೆಸರು ಸಮೇತ ಲೋಕಾಯುಕ್ತಕ್ಕೆ ದೂರು ನೀಡಿದ್ದು, ಇದೀಗ ಜಮೀರ್ ಕ್ಷೇತ್ರದಲ್ಲಿ ಲೂಟಿ ಮಾಡಿರೋ ಇಂಜಿನಿಯರ್ಗಳು, ಗುತ್ತಿಗೆದಾರರಿಗೆ ಸಂಕಷ್ಟ ಎದುರಾಗಿದೆ. 12 ಇಂಜಿನಿಯರ್ಗಳು, 19 ಕಾಂಟ್ರ್ಯಾಕ್ಟರ್ಗಳ ಮೇಲೂ ಕೇಸ್ ದಾಖಲಾಗಲಿದೆ. ನುಂಗಬಾಕರರ ಮೇಲೆ FIR ಆಗೋದು ಫಿಕ್ಸ್ ಆಗಿದ್ದು, ಜೊತೆಗೆ ಜೈಲು ಸೇರುವ ಸಾಧ್ಯತೆಯಿದೆ. ಕೋಟಿ ಕೋಟಿ ಹಗರಣ ಹಿನ್ನೆಲೆ EDಯಲ್ಲೂ ದೂರು ದಾಖಲಾಗುವುದು ಕನ್ಫರ್ಮ್ ಆಗಿದ್ದು, ಇನ್ನು ಸಚಿವ ಜಮೀರ್, 19 ಇಂಜಿನಿಯರ್ಗಳು ಹಾಗೂ ಆರು ಮಂದಿ ಕಾಂಟ್ರಾಕ್ಟರ್ಗಳಿಗೆ ED ತನಿಖೆ ಸಂಕಷ್ಟ ಎದುರಾಗಲಿದೆ.
ಇದನ್ನೂ ಓದಿ : ಸ್ಟಾರ್ಟ್‌ಅಪ್ ಉದ್ಯಮಿ, ಯುವ ರಾಜಕಾರಣಿ ಅನಿಲ್ ಶೆಟ್ಟಿ ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ!
