ಬೆಂಗಳೂರು : ಬೆಂಗಳೂರಿನ ಬನಶಂಕರಿ 2ನೇ ಹಂತದಲ್ಲಿರುವ ಪಿಜಿ ಮಾಲೀಕ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ಸದ್ಯ ಕಾಮುಕ ಪಿಜಿ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ರವಿತೇಜ ರೆಡ್ಡಿ ಬಂಧಿತ ಪಿಜಿ ಮಾಲೀಕ.
ಬನಶಂಕರಿ 2ನೇ ಹಂತದಲ್ಲಿರುವ ಲೇಡಿಸ್ ಪಿಜಿಯಲ್ಲಿ ಈ ಘಟನೆ ನಡೆದಿದೆ. ಇತ್ತೀಚೆಗೆ ಪಿಜಿಯಲ್ಲಿ ಬೇರೆ ಯುವತಿಯ ಉಂಗುರು ಕಳವಾಗಿತ್ತು. ಈ ಬಗ್ಗೆ ಪಿಜಿಯಲ್ಲಿದ್ದ ಎಲ್ಲಾ ಯುವತಿಯರನ್ನ ರವಿತೇಜ ವಿಚಾರಿಸ್ತಿದ್ದ.
ಅದೇ ರೀತಿ ವಾರದ ಹಿಂದಷ್ಟೇ ಪಿಜಿಗೆ ಬಂದಿದ್ದ ಯುವತಿಯನ್ನು ವಿಚಾರಣೆ ಎಂದು ಹೇಳಿ ರೂಮಿಗೆ ಕರೆದಿದ್ದ. ರೂಮಿಗೆ ಬಂದ ಯುವತಿ ಜೊತೆ ರವಿತೇಜ ಅಸಭ್ಯ ವರ್ತಿಸಿದ್ದು, ಯುವತಿಯ ದೇಹ ಮುಟ್ಟಿ ತೀರ ಕಿರುಕುಳ ನೀಡಿದ್ದಾನೆ. ಈ ವೇಳೆ ಯುವತಿ ಶೌಚಾಲಯಕ್ಕೆ ಓಡಿಹೋದ್ರು ಬಿಡದೇ ರವಿತೇಜ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ. ಯುವತಿಯನ್ನ ಹಿಡಿದುಕೊಂಡು ಲೈಂಗಿಕ ಕ್ರಿಯೆಗೆ ಯತ್ನಿಸಿದ ಆರೋಪ ಕೇಳಿಬಂದಿದೆ.
ಯುವತಿ ಪ್ರತಿರೋಧ ತೋರಿದಾಗ ಯಾರಿಗೂ ಹೇಳದಂತೆ ಬೆದರಿಕೆ ಕೂಡ ಹಾಕಿದ್ದಾನೆ ಎನ್ನಲಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಯುವತಿ ಈ ಬಗ್ಗೆ ದೂರು ನೀಡಿದ್ದು, ದೂರನ್ನು ಆಧರಿಸಿ ಮೈಕೋ ಲೇಔಟ್ ಠಾಣೆ ಪೊಲೀಸರು ರವಿತೇಜನನ್ನು ಬಂಧಿಸಿದ್ದಾರೆ.
