ಬೆಂಗಳೂರು : ಅಕ್ರಮ ಸೀಟ್ ಬ್ಲಾಕಿಂಗ್ ದಂಧೆ ನಡೆಯುತ್ತಿರುವ ಆರೋಪ ಕೇಳಿಬಂದ ಹಿನ್ನಲೆ ಬೆಂಗಳೂರು ಸೇರಿ ರಾಜ್ಯದ 18 ಕಡೆ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ.
ಅಕ್ರಮ ಸೀಟ್ ಬ್ಲಾಕಿಂಗ್ ದಂಧೆ ನಡೆಸಿದ ಆರೋಪ ಹೊತ್ತಿರುವ ಬೆಂಗಳೂರಿನ BMS ಕಾಲೇಜಿನ ಮೇಲೂ ED ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇತ್ತೀಚೆಗೆ ಬಿಟಿವಿ BMS ಅಕ್ರಮ ಸಿಟ್ ಬ್ಲಾಕಿಂಗ್ ದಂಧೆ ಬಗ್ಗೆ ಸುದ್ದಿ ಪ್ರಸಾರ ಪ್ರಸಾರ ಮಾಡಿತ್ತು.
ಈ ಹಿಂದೆ ಹನುಮಂತ ನಗರ ಪೋಲೀಸ್ ಠಾಣೆಯಲ್ಲಿ BMS ಕಾಲೇಜಿನ ಟ್ರಸ್ಟಿ ರಾಗಿಣಿ ನಾರಯಣ ವಿರುದ್ದ ಪ್ರಕರಣ ದಾಖಲಾಗಿತ್ತು. ರಮೇಶ್ ನಾಯಕ್ ಎಂಬುವರು ಕಾಲೇಜಿನ ಅಕ್ರಮ ಸೀಟ್ ಬ್ಲಾಕಿಂಗ್ ಬಗ್ಗೆ ದೂರು ನೀಡಿದ್ದರು. ಈ ಬಗ್ಗೆ ಬಿಟವಿಯೂ ನಿರಂತರವಾಗಿ ಏಪ್ರಿಲ್ 7ರಂದು ಸುದ್ದಿ ಪ್ರಸಾರ ಮಾಡಿತ್ತು. 2021-22ರಲ್ಲಿ ಅಕ್ರಮ ಸೀಟ್ ಬ್ಲಾಕಿಂಗ್ ದಂಧೆ ನಡೆದಿ ಎಐಸಿಟಿಇ ಮತ್ತು ಯುಜಿಸಿ ನಿಯಮ ಉಲ್ಲಂಘಿಸಿ ಅಕ್ರಮ ಸೀಟ್ ಹಂಚಿಕೆ ಮಾಡಲಾಗಿತ್ತು.

ಇದೇ ರೀತಿ ರಾಜ್ಯ ವಿವಿಧ ಖಾಸಗಿ ಕಾಲೇಜುಗಳು ಕೋಟ್ಯಾಂತರ ರೂಪಾಯಿ ಹಣವನ್ನು ಸಂಗ್ರಹ ಮಾಡಿದ್ದು, ಮೇರಿಟ್ ಆಧಾರದ ಮೇಲೆ ಸೀಟ್ ಹಂಚಿಕೆ ಮಾಡದೆ ಏಜೆಂಟ್ಗಳ ಮೂಲಕ ಸೀಟ್ ಹಂಚಿಕೆ ಮಾಡಿ ಅಕ್ರಮ ಎಸಗಿರುವ ಆರೋಪಗಳು ಕೇಳಿಬಂದಿದೆ. ಈ ಸಂಬಂಧ ಇದೀಗ ರಾಜ್ಯದ 18 ಕಡೆ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಮೇಲೆ ED ದಾಳಿ ನಡೆಸಿದೆ. ಇನ್ನು ಮಲ್ಲೇಶ್ವರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪ್ರಕರಣಗಳ ಸಂಬಂಧ ಸಹ ಇಡಿ ದಾಳಿ ಮಾಡಿದ್ದು, ಪರಿಶೀಲನೆ ನಡೆಸುತ್ತಿದೆ.
ಇದನ್ನೂ ಓದಿ : ಲೋಕಾಯುಕ್ತ ರೇಡ್ : ಭ್ರಷ್ಟ ಅಧಿಕಾರಿಗಳ ಮನೆಯಲ್ಲಿ ಕೆಜಿಗಟ್ಟಲೇ ಚಿನ್ನ-ಬೆಳ್ಳಿ, ಕಂತೆ-ಕಂತೆ ಹಣ, ಅಪಾರ ಪ್ರಮಾಣದ ಆಸ್ತಿ ಪತ್ತೆ!
