ಲೀಡ್ಸ್ : 5 ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಪ್ರವಾಸ ಮಾಡಿರುವ ಟೀಂ ಇಂಡಿಯಾ ಸೋಲಿನೊಂದಿಗೆ ಸರಣಿ ಆರಂಭಿಸಿದೆ. ಲೀಡ್ಸ್‌ನಲ್ಲಿ ನಡೆದ ಉಭಯ ತಂಡಗಳ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವಿಗೆ 371 ರನ್‌ಗಳ ಗುರಿ ಬೆನ್ನಟ್ಟಿದ ಆತಿಥೇಯ ಇಂಗ್ಲೆಂಡ್ ತಂಡ 5 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿದೆ.
ಇಂಗ್ಲೆಂಡ್ ದಾಖಲೆ ರನ್ ಚೇಸ್ : 371 ರನ್‌ಗಳ ಗುರಿ ಬೆನ್ನಟ್ಟಿ ಗೆದ್ದ ಇಂಗ್ಲೆಂಡ್ ಲೀಡ್ಸ್ ಟೆಸ್ಟ್‌ನಲ್ಲಿ ಇತಿಹಾಸ ಸೃಷ್ಟಿಸಿದೆ. ಲೀಡ್ಸ್ ಮೈದಾನದಲ್ಲಿ ಅತೀ ಹೆಚ್ಚು ರನ್ ಬೆನ್ನಟ್ಟಿದ ದಾಖಲೆಯನ್ನು ಇಂಗ್ಲೆಂಡ್ ನಿರ್ಮಿಸಿದೆ. ಇಂಗ್ಲೆಂಡ್ ತಂಡದ ಗೆಲುವಿನ ಶ್ರೇಯ ಆರಂಭಿಕ ಬೆನ್ ಡಕೆಟ್ಗೆ ಸಲ್ಲುತ್ತದೆ. ಮೊದಲ ಇನ್ನಿಂಗ್ಸ್‌ನಲ್ಲಿ 62 ರನ್‌ಗಳ ಇನ್ನಿಂಗ್ಸ್ ಆಡಿದ್ದ ಡಕೆಟ್, ಎರಡನೇ ಇನ್ನಿಂಗ್ಸ್‌ನಲ್ಲಿ 137 ರನ್‌ಗಳ ಗೆಲುವಿನ ಇನ್ನಿಂಗ್ಸ್ ಆಡಿ ಮಿಂಚಿದ್ದಾರೆ.
ಇದರೊಂದಿಗೆ ಇಂಗ್ಲೆಂಡ್ ಐದು ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ. ವಾಸ್ತವವಾಗಿ ಟೀಂ ಇಂಡಿಯಾದ ಈ ಸೋಲಿಗೆ ಆಟಗಾರರ ಕಳಪೆ ಫೀಲ್ಡಿಂಗ್ ಹಾಗೂ ಜಸ್ಪ್ರೀತ್ ಬುಮ್ರಾರನ್ನು ಹೊರತುಪಡಿಸಿ ತಂಡದ ಉಳಿದ ಬೌಲರ್ಗಳ ಕಳಪೆ ಬೌಲಿಂಗ್ ಪ್ರಮುಖ ಕಾರಣವಾಗಿತ್ತು. ನಾಚಿಕೆಗೇಡಿನ ಸಂಗತಿಯೆಂದರೆ ಟೆಸ್ಟ್ ಪಂದ್ಯವೊಂದರಲ್ಲಿ ಐದು ಶತಕಗಳನ್ನು ಬಾರಿಸಿಯೂ ಸೋಲಿಗೆ ಕೊರಳ್ಳೊಡಿದ ತಂಡವೆಂಬ ಹೀನಾಯ ದಾಖಲೆಗೆ ಟೀಂ ಇಂಡಿಯಾ ಕೊರಳೊಡ್ಡಿದೆ.
ಇದನ್ನೂ ಓದಿ : ರೈಲು ಪ್ರಯಾಣಿಕರಿಗೆ ದರ ಏರಿಕೆ ಬಿಸಿ – ಜುಲೈ 1ರಿಂದ ಟಿಕೆಟ್ ಬೆಲೆ ಹೆಚ್ಚಳ!
