ರೈಲು ಪ್ರಯಾಣಿಕರಿಗೆ ದರ ಏರಿಕೆ ಬಿಸಿ – ಜುಲೈ 1ರಿಂದ ಟಿಕೆಟ್ ಬೆಲೆ ಹೆಚ್ಚಳ!

ನವದೆಹಲಿ : ಬಹಳ ವರ್ಷಗಳ ಬಳಿಕ ದೇಶದಲ್ಲಿ ರೈಲ್ವೆ ಟಿಕೆಟ್ ದರ ಏರಿಕೆಗೆ ತೀರ್ಮಾನ ಕೈಗೊಳ್ಳಲಾಗಿದೆ. ದೇಶದಲ್ಲಿ ನಿತ್ಯ 2 ಕೋಟಿಗೂ ಅಧಿಕ ಜನರು ರೈಲಿನಲ್ಲಿ ಪ್ರಯಾಣ ಮಾಡ್ತಾರೆ. ಇಂದಿಗೂ ಭಾರತದಲ್ಲಿ ಬಡವರು, ಮಧ್ಯಮ ವರ್ಗದ ಜನರು ಸಂಚಾರಕ್ಕೆ ರೈಲುಗಳನ್ನೇ ಅವಲಂಬಿಸಿದ್ದಾರೆ.

ಇದೀಗ ದೇಶದಲ್ಲಿ ಜುಲೈ 1, 2025ರಿಂದ ಟಿಕೆಟ್ ದರ ಏರಿಕೆ ಜಾರಿಯಾಗಲಿದೆ. ಸ್ಪಲ್ಪ ಪ್ರಮಾಣದಲ್ಲಿ ಮಾತ್ರವೇ ರೈಲ್ವೆ ಟಿಕೆಟ್ ದರ ಏರಿಕೆ ಮಾಡಲಾಗುತ್ತಿದೆ. ಸಾಮಾನ್ಯವಾಗಿ ರೈಲ್ವೆ ಬಜೆಟ್, ಸಾಮಾನ್ಯ ಬಜೆಟ್​ನಲ್ಲಿ ರೈಲ್ವೆ ಟಿಕೆಟ್ ದರ ಏರಿಕೆ ತೀರ್ಮಾನವನ್ನು ಪ್ರಕಟಿಸಲಾಗುತ್ತಿತ್ತು. ಆದ್ರೆ, ಈಗ ಕೇಂದ್ರದ ಸಾಮಾನ್ಯ ಬಜೆಟ್ ಬಳಿಕ ಜುಲೈ ತಿಂಗಳ ಒಂದರಿಂದ ರೈಲ್ವೆ ಟಿಕೆಟ್ ದರವನ್ನು ಕಡಿಮೆ ಪ್ರಮಾಣದಲ್ಲಿ ಏರಿಕೆ ಮಾಡುತ್ತಿರುವುದು ವಿಶೇಷ.

ನಾನ್ ಎಸಿ ಮೇಲ್, ಎಕ್ಸಪ್ರೆಸ್ ಟ್ರೇನ್​ಗಳಲ್ಲಿ 1 ಕಿಮೀಗೆ 1 ಪೈಸೆ ಟಿಕೆಟ್ ದರ ಏರಿಕೆ ಮಾಡಲಾಗುತ್ತಿದೆ ಎಂದು ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ. ಎಸಿ ಕ್ಲಾಸ್​ಗಳಿಗೆ ಪ್ರತಿ ಕೀ.ಮಿ.ಗೆ 2 ಪೈಸೆ ಟಿಕೆಟ್ ದರ ಏರಿಕೆ ಮಾಡಲಾಗುತ್ತಿದೆ.

ಸಬ್ ಅರ್ಬನ್ ರೈಲ್ವೆಗಳಲ್ಲಿ ಟಿಕೆಟ್ ದರ ಏರಿಕೆ ಇಲ್ಲ. 500 ಕಿ.ಮೀ.ವರೆಗೂ ಸೆಕೆಂಡ್ ಕ್ಲಾಸ್ ಟ್ರೇನ್ ಬೋಗಿಗಳಲ್ಲೂ ಟಿಕೆಟ್ ದರ ಏರಿಕೆ ಇಲ್ಲ. 500 ಕಿ.ಮೀ.ಗಿಂತ ಹೆಚ್ಚಿನ ದೂರ ಪ್ರಯಾಣಕ್ಕೆ ಪ್ರತಿ ಕಿಮೀಗೆ ಅರ್ಧ ಪೈಸೆ ದರ ಏರಿಕೆ ಮಾಡಲಾಗುತ್ತಿದೆ. ಪ್ರತಿ ತಿಂಗಳ ಸೀಸನ್ ಟಿಕೆಟ್ ದರದಲ್ಲೂ ಏರಿಕೆ ಇಲ್ಲ. ಈ ರೀತಿಯಾಗಿ ರೈಲ್ವೆ ಇಲಾಖೆ ದರ ಏರಿಕೆಗೆ ತೀರ್ಮಾನ ಕೈಗೊಂಡಿದ್ದು, ಇದನ್ನು ಒಂದೆರೆಡು ದಿನದಲ್ಲಿ ಅಧಿಕೃತವಾಗಿ ಪ್ರಕಟಿಸಲಿದೆ.

ಇದನ್ನೂ ಓದಿ : ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಕೆ – ತುಮಕೂರು ಡಿಸಿ ಕಚೇರಿಯಲ್ಲಿದ್ದ ವಿಎ ಭಾನುಪ್ರಕಾಶ್ ಸಸ್ಪೆಂಡ್!

Btv Kannada
Author: Btv Kannada

Read More