ರಾಯಚೂರು : ನಡುರಸ್ತೆಯಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡು ಕಾರು ಸುಟ್ಟು ಕರಕಲಾಗಿರುವ ಘಟನೆ ರಾಯಚೂರಿನ ದೇವದುರ್ಗ ತಾಲೂಕಿನ ಗಬ್ಬೂರಿನಲ್ಲಿ ನಡೆದಿದೆ. ಅದೃಷ್ಟವಶಾತ್ ಕಾರು ಚಾಲಕ ದಯಾನಂದ್ ಪಾಟೀಲ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಿರೆಬೂದೂರಿನಿಂದ ರಾಯಚೂರಿಗೆ ಹೋಗುತ್ತಿದ್ದಾಗ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಕಾರಿನಲ್ಲಿ ಯಾರೂ ಇಲ್ಲದ ಹಿನ್ನೆಲೆ ಭಾರೀ ಅನಾಹುತವೊಂದು ತಪ್ಪಿದೆ. ಮಾರ್ಗಮಧ್ಯೆ ಗಬ್ಬೂರಿನಲ್ಲಿ ಎಳೆನೀರು ಕುಡಿಯಲು ಕಾರಿನಿಂದ ಇಳಿದಿದ್ದರು. ಈ ವೇಳೆ ನೋಡನೋಡುತ್ತಲೇ ಇಂಜಿನ್‌ನಿಂದ ದಟ್ಟ ಹೊಗೆ ಆವರಿಸಿ, ಬಳಿಕ ಬೆಂಕಿ ಹೊತ್ತಿಕೊಂಡಿದೆ.
ಬೆಂಕಿಯಿಂದಾಗಿ ಹೆದ್ದಾರಿಯಲ್ಲಿ ದಟ್ಟ ಹೊಗೆ ಆವರಿಸಿತ್ತು. ಕೂಡಲೇ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ, ಬೆಂಕಿ ನಂದಿಸಿದ್ದಾರೆ. ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಬಹುಭಾಷಾ ನಟ ಪ್ರಕಾಶ್ ರಾಜ್ ನೇತೃತ್ವದಲ್ಲಿ “ನಿರ್ದಿಗಂತದ ಹರ್ಷ ಎರಡನೇ ವರ್ಷ”ದ ಸಂಭ್ರಮ – ಸಾಹಿತಿ ಜಯಂತ ಕಾಯ್ಕಿಣಿ ಸೇರಿ ಹಲವರು ಭಾಗಿ!

Author: Btv Kannada
Post Views: 263