ಬೆಂಗಳೂರು : ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಪ್ರಮುಖವಾಗಿ ಬೆಂಗಳೂರಿನ ನೂರು ಕೋಟಿ ಸರದಾರ ಬಿಬಿಎಂಪಿ ಗೋವಿಂದರಾಜ ನಗರ ಎಕ್ಸಿಕ್ಯೂಟಿವ್ ಇಂಜಿನಿಯರ್ ಪ್ರಕಾಶ್ ಮನೆ ಮೇಲೆ ‘ಲೋಕಾ’ ಅಧಿಕಾರಿಗಳು ಬೆಳ್ಳಂಬೆಳಗ್ಗೆ ರೇಡ್ ಮಾಡಿದ್ದಾರೆ.

ಲಂಚ.. ಲಂಚ.. ಲಂಚ.. ಎಲ್ಲಿ ನೋಡಿದ್ರೂ ಲಂಚ..ಈ ಸರ್ಕಾರ ಅಧಿಕಾರಿಗಳಿಗೆ ಪ್ರತಿ ತಿಂಗಳು ಸಂಬಳ ಜೊತೆ ಹಲವು ಸೌಲಭ್ಯ ನೀಡಿದ್ರೂ ತಮ್ಮ ಲಂಚಕೋರತನ ಮಾತ್ರ ಬಿಡಲ್ಲ. ಲಕ್ಷ, ಕೋಟಿ ಲೆಕ್ಕದಲ್ಲಿ ವಸೂಲಿ ಮಾಡುವ ಅಧಿಕಾರಿಗಳು ತಮ್ಮದೇ ಅಕ್ರಮ ಸಂಪತ್ತಿನ ಕೋಟೆ ನಿರ್ಮಾಣ ಮಾಡಿಕೊಂಡಿರ್ತಾರೆ. ಇದೀಗ ಎಕ್ಸಿಕ್ಯೂಟಿವ್ ಇಂಜಿನಿಯರ್ ಪ್ರಕಾಶ್ ಭ್ರಷ್ಟಾಚಾರ ಬಟಾ ಬಯಲಾಗಿದೆ.

BBMP ಗೋವಿಂದರಾಜ ನಗರ ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್ ಪ್ರಕಾಶ್ ಪ್ರತಿ ಕಾಮಗಾರಿಯಲ್ಲೂ ಶೇ 20ರಷ್ಟು ಕಮಿಷನ್ ಪಡೆಯುತ್ತಾನೆ. ಇದರಲ್ಲಿ ಶೇ 10ರಷ್ಟು ಕಮಿಷನ್ ಲೋಕಾಯುಕ್ತಕ್ಕೆ ಕೊಡಬೇಕು ಅಂತ ಪ್ರಕಾಶ್ ಕಾಂಟ್ರ್ಯಾಕ್ಟರ್ಗಳಿಗೆ ಓಪನ್ ಆಗಿ ಹೇಳಿ ಹಣ ವಸೂಲಿ ಮಾಡ್ತಾನೆ. ಈ ಹಿಂದಿನ ಲೋಕಾ SP ಶ್ರೀನಾಥ್ಗೆ ಪ್ರಕಾಶ್ 10 % ಕಮಿಷನ್ ಕೊಡ್ತಿದ್ದ. ಗೋವಿಂದರಾಜ ನಗರ ವಿಭಾಗದಲ್ಲಿ ನಕಲಿ ಕಾಮಗಾರಿಗಳದ್ದೇ ಹಾವಳಿ. ಎಕ್ಸಿಕ್ಯೂಟಿವ್ ಇಂಜಿನಿಯರ್ ಪ್ರಕಾಶ್ ಅಧೀನದಲ್ಲಿ ನಕಲಿ ಕಾಮಗಾರಿ ನಡೆಯುತ್ತಿದೆ. ನಕಲಿ ಬಿಲ್, ನಕಲಿ ಕಾಮಗಾರಿಗಳ ಮೂಲಕ ಎಕ್ಸಿಕ್ಯೂಟಿವ್ ಇಂಜಿನಿಯರ್ ಪ್ರಕಾಶ್ ಕೋಟಿ ಕೋಟಿ ಲೂಟಿ ಮಾಡ್ತಿದ್ದ. ಇದೀಗ ಪ್ರಕಾಶ್ ಅಧೀನದಲ್ಲಿ ನಕಲಿ ಕಾಮಗಾರಿ ಮಾಡ್ತಿದ್ದ ಗುತ್ತಿಗೆದಾರರಿಗೆ ಸಂಕಷ್ಟ ಎದುರಾಗಿದೆ. ನಕಲಿ ಬಿಲ್, ನಕಲಿ ಕಾಮಗಾರಿ ಮಾಡ್ತಿದ್ದ ಕಾಂಟ್ರ್ಯಾಕ್ಟರ್ಗಳಿಗೆ ಆಪತ್ತು ಶುರುವಾಗಿದ್ದು, 1 ವಾರದಲ್ಲೇ ಲೂಟಿಕೋರ ಕಾಂಟ್ರ್ಯಾಕ್ಟರ್ಗಳ ಮೇಲೆ ಲೋಕಾಯುಕ್ತ ರೇಡ್ ಮಾಡುವ ಸಾಧ್ಯತೆಯಿದೆ.

100 ಕೋಟಿ ಸರದಾರ ಪ್ರಕಾಶ್ ಸಂಪತ್ತಿನ ಕೋಟೆ ಇಂಚಿಂಚೂ ಬಯಲಾಗಿದ್ದು, ಪ್ರಕಾಶ್ ಬೆಂಗಳೂರಿನ ಪ್ರತಿಷ್ಠಿತ ಏರಿಯಾದಲ್ಲಿ ಮನೆಗಳನ್ನು ಹೊಂದಿದ್ದಾನೆ. ಹಾಗೆಯೇ ಆರ್.ಆರ್. ನಗರದಲ್ಲಿ ಬೃಹತ್ ಬಂಗಲೆ ಇದ್ದು, ತಾನು ವಾಸಿಸಲು 1 ಬಂಗಲೆ, ಮತ್ತೊಂದು ಮನೆ ಬಾಡಿಗೆಗೆ ನೀಡಿದ್ದಾನೆ. ಇನ್ನು ಬೇನಾಮಿ ಹೆಸರಲ್ಲಿ ಭ್ರಷ್ಟ ಇಂಜಿನಿಯರ್ ಪ್ರಕಾಶ್ ಬೆಂಗಳೂರಲ್ಲಿ 12 ಸೈಟ್ ಹೊಂದಿದ್ದಾನೆ. ಅಷ್ಟೇ ಅಲ್ಲದೆ ಪ್ರಕಾಶ್ಗೆ ಕುಣಿಗಲ್ ಬಳಿ ಬರೋಬ್ಬರಿ 7 ಎಕರೆ ವ್ಯಾಪ್ತಿಯಲ್ಲಿ ಬೃಹತ್ ಫಾರ್ಮ್ಹೌಸ್ ಇದೆ. ಈ ಫಾರ್ಮ್ಹೌಸ್ನ್ನು
25 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾನೆ. ವೀಕೆಂಡ್ನಲ್ಲಿ ಕಾಂಟ್ರ್ಯಾಕ್ಟರ್ಗಳು ಇದೇ ಫಾರ್ಮ್ಹೌಸ್ನಲ್ಲಿ ಫುಲ್ ಪಾರ್ಟಿ, ಮೋಜು ಮಸ್ತಿ ಆಯೋಜನೆ ಮಾಡ್ತಾರೆ.
ಪ್ರಕಾಶ್ ಬೇನಾಮಿ ಹೆಸರಲ್ಲಿ, ಕುಟುಂಬಸ್ಥರು, ಸಂಬಂಧಿಗಳ ಹೆಸರಲ್ಲಿ ಆಸ್ತಿ ಖರೀದಿ ಮಾಡಿದ್ದಾನೆ. ಲೋಕಾಯುಕ್ತ ಹೆಸರಲ್ಲಿ ನಿಂಗಪ್ಪನ ಆತ್ಮೀಯ ಪ್ರಕಾಶ್ ಕೋಟಿ ಕೋಟಿ ವಸೂಲಿ ಮಾಡಿದ್ದ. ನಿಂಗಪ್ಪ ಸಿಕ್ಕಿಬಿದ್ದ ಬಳಿಕ ಭ್ರಷ್ಟ ಇಂಜಿನಿಯರ್ ಪ್ರಕಾಶ್ ಕೋಟಿ ಕೋಟಿ ಹಣ ರಾತ್ರೋರಾತ್ರಿ ಸಾಗಾಟ ಮಾಡಿದ್ದಾನೆ.

ಭ್ರಷ್ಟ ಇಂಜಿನಿಯರ್ ಪ್ರಕಾಶ್ ಮನೆಯಲ್ಲಿ ಕೋಟಿ ಕೋಟಿ ಸಂಪತ್ತು ಪತ್ತೆ : ಲೋಕಾಯುಕ್ತ DySP ಗಿರೀಶ್ ನೇತೃತ್ವದಲ್ಲಿ ಪ್ರಕಾಶ್ ಮೇಲೆ ದಾಳಿ ನಡೆಸಿದ್ದು, ‘ಸಿರಿವಂತ’ ಇಂಜಿನಿಯರ್ ಪ್ರಕಾಶ್ ಮೇಲಿನ ದಾಳಿಯಲ್ಲಿ ಅಕ್ರಮ ಸಂಪತ್ತುಗಳು ಸಿಕ್ಕಿದೆ. ಎಕ್ಸಿಕ್ಯೂಟಿವ್ ಇಂಜಿನಿಯರ್ ಮನೆಯಲ್ಲಿ 500 ರೇಷ್ಮೆ ಸೀರೆಗಳು ಪತ್ತೆಯಾಗಿದೆ. ರೇಷ್ಮೆ ಸೀರೆಗಳ ಒಂದೊಂದರ ಬೆಲೆ ಲಕ್ಷಕ್ಕೂ ಮೀರಿ ಇರುವ ಸಂಪತ್ತು. ಇನ್ನು 10 ಸಾವಿರದಿಂದ 15 ಸಾವಿರ ಬೆಲೆ ಬಾಳುವ 100 ಟೀ-ಶರ್ಟ್ಗಳು ಸಿಕ್ಕಿದೆ. ಪತ್ನಿ ಶ್ವೇತಾ ಹೆಸರಲ್ಲಿ ಪ್ರಕಾಶ್ 1 ಬೇನಾಮಿ ಕಂಪನಿ ಹೊಂದಿದ್ದು, ಸುಳ್ಳು ಲೆಕ್ಕ ತೋರಿಸೋಕೆ ಪತ್ನಿ ಶ್ವೇತಾ ಒಂದು ಕಂಪನಿ ತೆರೆದಿದ್ದಾರೆ.
ಲೋಕಾ ದಾಳಿ ವೇಳೆ ಇಂಜಿನಿಯರ್ ಪ್ರಕಾಶ್ ಮನೆಯಲ್ಲಿ 300 ಗ್ರಾಂ ಚಿನ್ನಾಭರಣ, 5 ಕೆಜಿ ಬೆಳ್ಳಿ ಸಾಮಾಗ್ರಿಗಳು, 25 ಲಕ್ಷ ಹಣ ಲಭಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಪ್ರಕಾಶ್ 50ಕ್ಕೂ ಹೆಚ್ಚು ಬೆಲೆಬಾಳುವ ವಾಚ್ಗಳನ್ನ ಇಟ್ಟುಕೊಂಡಿದ್ದಾನೆ. ಪತ್ನಿ ಶ್ವೇತಾ ಬಸವನಗುಡಿಯಲ್ಲಿ ಇಂಟೀರಿಯರ್, ಆರ್ಕಿಟೆಕ್ಟ್ ಕಂಪನಿ ನಡೆಸ್ತಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಬಸವನಗುಡಿ ಭಾಗದಲ್ಲೂ ದಾಳಿ ನಡೆಸಿದ್ದಾರೆ. 2010ರ ಬ್ಯಾಚ್ನ ಪ್ರಕಾಶ್ ಕೇವಲ 15 ವರ್ಷದಲ್ಲಿ ಇಷ್ಟೊಂದು ಸಂಪತ್ತನ್ನು ಕೊಳ್ಳೆ ಹೊಡೆದಿದ್ದಾನೆ. ಪ್ರಕಾಶ್ ಮೇಲೆ ಒಟ್ಟು15 ಲೋಕಾಯುಕ್ತ ಅಧಿಕಾರಿಗಳ ತಂಡದಿಂದ ಪರಿಶೀಲನೆ ನಡೆದಿದೆ.
ಇದನ್ನೂ ಓದಿ : ‘ಜಸ್ಟ್ ಮ್ಯಾರೀಡ್’ ಚಿತ್ರದ ‘ಶಿಶುಪಾಲ’ ಪಾತ್ರದಲ್ಲಿ ದಕ್ಷಿಣ ಭಾರತದ ಹೆಸರಾಂತ ನಟ ಶ್ರೀಮನ್ – ಪೋಸ್ಟರ್ ರಿಲೀಸ್!
