ಬೆಂಗಳೂರು : ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಪ್ರಮುಖವಾಗಿ ಬೆಂಗಳೂರಿನ ನೂರು ಕೋಟಿ ಸರದಾರ ಬಿಬಿಎಂಪಿ ಗೋವಿಂದರಾಜ ನಗರ ಎಕ್ಸಿಕ್ಯೂಟಿವ್ ಇಂಜಿನಿಯರ್ ಪ್ರಕಾಶ್ ಮನೆ ಮೇಲೆ ‘ಲೋಕಾ’ ಅಧಿಕಾರಿಗಳು ಬೆಳ್ಳಂಬೆಳಗ್ಗೆ ರೇಡ್ ಮಾಡಿದ್ದಾರೆ.

ಭ್ರಷ್ಟ ಎಕ್ಸಿಕ್ಯೂಟಿವ್ ಇಂಜಿನಿಯರ್ ಪ್ರಕಾಶ್, ಕಳೆದ ಎರಡು ವರ್ಷಗಳ ಅವಧಿಯಲ್ಲಿಯೇ ಐವತ್ತು ಕೋಟಿಗೂ ಹೆಚ್ಚು ಲೂಟಿ ಹೊಡೆದಿದ್ದ ಆರೋಪ ಎದುರಿಸುತ್ತಿದ್ದಾರೆ. ಅತ್ಯಂತ ಬಲಶಾಲಿ, ಪ್ರಭಾವಶಾಲಿ ಆಗಿರುವ ಪ್ರಕಾಶ್, ನಕಲಿ ಕಾಮಗಾರಿ, ನಕಲಿ ಬಿಲ್, ಕಂಟ್ರಾಕ್ಟರ್ಗಳಿಂದ 20% ವಸೂಲಿ ಹೀಗೆ ಹಲವಾರು ಆರೋಪಗಳು ಪ್ರಕಾಶ್ ಮೇಲಿದೆ.
ಪ್ರಕಾಶ್ ಕೋಟಿ ಕೋಟಿ ಲೂಟಿ ಹೊಡೆದಿರುವ ಬಗ್ಗೆ ಲೋಕಾಯುಕ್ತದಲ್ಲಿ ನೂರಕ್ಕೂ ಹೆಚ್ಚು ದೂರು ದಾಖಲಾಗಿತ್ತು. ಆದ್ರೆ ಪ್ರಕಾಶ್ ಲೋಕಾಯುಕ್ತಕ್ಕೆ ಲಂಚ ಕೊಟ್ಟು ತನ್ನ ಮೇಲೆ ರೇಡ್ ಆಗದ ಹಾಗೆ ನೋಡಿಕೊಂಡಿದ್ದ.
ಇತ್ತೀಚೆಗೆ ಲೋಕಾಯುಕ್ತ ಹಗರಣದಲ್ಲಿ ಈತನ ಬಂಡವಾಳವೆಲ್ಲ ಬಯಲಿಗೆ ಬಂದಿತ್ತು. ಹಿಂದೆ ಇದ್ದ ಎಸ್.ಪಿ ಶ್ರೀನಾಥ್ ಜೋಶಿಗೆ ಅತೀ ಹತ್ತಿರವಾಗಿದ್ದ ಪ್ರಕಾಶ್, ಪ್ರತಿ ತಿಂಗಳು ಮಾಮೂಲಿ ಕೊಡುತ್ತಿದ್ದ. ಲೋಕಾಯುಕ್ತದಲ್ಲಿ ಆರೋಪ ಕೇಳಿ ಬಂದ ಕೂಡಲೇ ಲೋಕಾಯುಕ್ತ ಡಿವೈಎಸ್ಪಿ ಗಿರೀಶ್ ನೇತೃತ್ವದಲ್ಲಿ ಭ್ರಷ್ಟ ಎಕ್ಸಿಕ್ಯೂಟಿವ್ ಇಂಜಿನಿಯರ್ ಪ್ರಕಾಶ್ ಮನೆ ಮೇಲೆ ರೇಡ್ ಮಾಡಲಾಗಿದೆ.

ರೇಡ್ ವೇಳೆ ಸುಮಾರು 50 ಕೋಟಿಯಷ್ಟು ಆಸ್ತಿ ದೊರೆತಿರುವ ಮಾಹಿತಿ ಲಭ್ಯವಾಗಿದೆ. ಇಷ್ಟು ಮಾತ್ರವಲ್ಲದೆ ಬೆಂಗಳೂರಿನ ಐದು ಕಡೆಗಳಲ್ಲಿ 40ಕ್ಕೂ ಹೆಚ್ಚು ಲೋಕಾಯುಕ್ತ ಪೊಲೀಸರು ರೇಡ್ ಮಾಡಿ ದಾಖಲೆಗಳ ಪರೀಶೀಲನೆಯಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ : ಯುದ್ಧ ಇನ್ನೂ ನಿಂತಿಲ್ಲ – ದೊಡ್ಡಣ್ಣ ಡೊನಾಲ್ಡ್ ಟ್ರಂಪ್ಗೆ ಗುಮ್ಮಿದ ಇರಾನ್!
