ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಸ್ವಪಕ್ಷದ ಶಾಸಕರುಗಳ ಅಸಮಾಧಾನ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇತ್ತೀಚೆಗೆ ಹಿರಿಯ ಶಾಸಕ ಬಿಆರ್ ಪಾಟೀಲ್ ವಸತಿ ಇಲಾಖೆಯಲ್ಲಿನ ಭ್ರಷ್ಟಾಚಾರದ ಕುರಿತು ಮಾತನಾಡಿದ್ದ ಆಡಿಯೋ ವೈರಲ್ ಆಗಿತ್ತು. ಅದಾದ ಬಳಿಕ ಇನ್ನೋರ್ವ ಶಾಸಕ ರಾಜು ಕಾಗೆ ಕೂಡ ಅದಕ್ಕಿಂತ ಅಪ್ಪನ ಪರಿಸ್ತಿತಿ ಇದೆ, ನಾನು ರಾಜೀನಾಮೆ ಕೊಡಲು ಸಿದ್ದನಿದ್ದೇನೆ ಎನ್ನುವ ಹೇಳಿಕೆ ನೀಡಿದ್ದರು. ಸದ್ಯ ಈ ಇಬ್ಬರ ಬಳಿಕ ಇನ್ನೋರ್ವ ಕಾಂಗ್ರೆಸ್ ಶಾಸಕ ಎನ್ ವೈ ಗೋಪಾಲಕೃಷ್ಣ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತಮಾಡುವಾಗ ಮೊಳಕಾಲ್ಮೂರು ಕ್ಷೇತ್ರದ ಕಾಂಗ್ರೆಸ್ ಶಾಸಕ, ಎನ್ ವೈ ಗೋಪಾಲಕೃಷ್ಣ ಅಸಮಾಧಾನ ವ್ಯಕ್ತಪಡಿಸಿರುವ ವಿಡಿಯೋ ವೈರಲ್ ಆಗಿದೆ. ಖಾಸಗಿ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡುವಾಗ, ನಾನು ಎಂಎಲ್‌ಎ ಆಗಿ ನಮ್ಮ ಗ್ರಾಮದಲ್ಲಿ ಒಂದು ಚರಂಡಿ, ರಸ್ತೆ ಮಾಡಲು ಆಗ್ತಿಲ್ಲ. ಒಂದೊಳ್ಳೆ ಶಾಲೆ ಕಟ್ಟಲು ಆಗ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಮುಂದುವರೆದು ನಮ್ಮಂತ ಏನೂ ಇಲ್ಲದ ಕ್ಷೇತ್ರದಲ್ಲಿ ಕಂಪನಿ ಆರಂಭಿಸುತ್ತಿರೋದೇ ನಮ್ಮ ಪುಣ್ಯ ಎಂದು ಬೇಸರ ಹೊರಹಾಕಿದ್ದಾರೆ.
ರಾಜು ಕಾಗೆ ಹೇಳಿದ್ದೇನು? ಐನಾಪುರ ಪಟ್ಟಣದಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾಗವಾಡ ಶಾಸಕ ರಾಜು ಕಾಗೆ ಅವರು, ನಮ್ಮ ಸರ್ಕಾರದಲ್ಲಿ ಯಾವುದೇ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆಡಳಿತ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಬಿ.ಆರ್.ಪಾಟೀಲ್ ಹೇಳಿದ್ದು ಸುಳ್ಳಲ್ಲ, ನಿಜಾನೆ ಇದೆ. ಅವರು ಹೇಳಿದ್ದ ಅಪ್ಪನ ಹಾಗಾಗಿದೆ ನನ್ನ ಪರಿಸ್ಥಿತಿ ಎಂದಿದದ್ದರು.
ರಾಜೀನಾಮೆ ಕೊಟ್ಟರೂ ಅಶ್ಚರ್ಯ ಇಲ್ಲ : 25 ಕೋಟಿ ಅನುದಾನ ನೀಡಿ 2 ವರ್ಷ ಕಳೆದರೂ ವರ್ಕ್ ಆರ್ಡರ್ ಇಲ್ಲ. ಅಂದ್ರೆ ಏನರ್ಥ? ಇದರಿಂದ ನನ್ನ ಮನಸ್ಸಿಗೆ ಸಾಕಷ್ಟು ನೋವಾಗಿದೆ. ನಾನು ಸಹ ರಾಜೀನಾಮೆ ನೀಡುವ ಪರಿಸ್ಥಿತಿ ಬಂದಿದೆ. ಎರಡು ದಿನದಲ್ಲಿ ಮುಖ್ಯಮಂತ್ರಿಗೆ ರಾಜೀನಾಮೆ ಕೊಟ್ಟರು ಆಶ್ಚರ್ಯವಿಲ್ಲ ಎಂದು ಬೇಸರ ಹೊರಹಾಕಿದ್ದರು.
ಬಿಆರ್ ಪಾಟೀಲ್ ಮತ್ತೊಂದು ಆರೋಪ? ನನ್ನ ಕ್ಷೇತ್ರಕ್ಕೆ ಮೈನಾರಿಟಿ ಫಂಡಲ್ಲಿ 17 ಕೋಟಿ ರೂಪಾಯಿ ಹಣ ಬಂದಿದೆ. ಕಾಮಗಾರಿ ಸಹ ಶುರುವಾಗಿದೆ. ಆದರೆ ಗುದ್ದಲಿ ಪೂಜೆಗೆ ನನ್ನ ಕರೆದಿಲ್ಲ, ಇಲ್ಲಿ ಸ್ಪಷ್ಟವಾಗಿ ಶಿಷ್ಠಾಚಾರದ ಉಲ್ಲಂಘನೆಯಾಗಿದೆ ಎಂದು ಹೇಳಿದ್ದು, ಒಬ್ಬ ಶಾಸಕನಾಗಿ ಹಣ ಬಂದಿರುವುದು ಕೆಲಸ ಶುರುವಾಗಿರುವುದು ನನಗೆ ಗೊತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ : ಕಾರು ಓವರ್ ಟೇಕ್ ವಿಚಾರಕ್ಕೆ ಕಿರಿಕ್ – ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಹಾಗೂ ಬೆಂಬಲಿಗರಿಂದ ಗೂಂಡಾಗಿರಿ ಆರೋಪ!
