ಸಾಂಬಾರ್ ಮಾಡುವ ವಿಚಾರಕ್ಕೆ‌ ಸ್ನೇಹಿತರ ನಡುವೆ ಡಿಶುಂ ಡಿಶುಂ – ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯ!

ಬೆಂಗಳೂರು : ಸಾಂಬಾರ್​ ಮಾಡುವ ವಿಚಾರಕ್ಕೆ ಸ್ನೇಹಿತರ ನಡುವೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ ತಲಘಟ್ಟಪುರದಲ್ಲಿ ನಡೆದಿದೆ. ನೇಪಾಳ ಮೂಲದ ಬಹದ್ದೂರ್ ಕೊಲೆಯಾದ ವ್ಯಕ್ತಿ. ಮಹೇಂದ್ರ ಕೊಲೆ ಮಾಡಿದ ಆರೋಪಿ.

ನಿನ್ನೆ ರಾತ್ರಿ ಬಹದ್ದೂರ್ ಮತ್ತು ಮಹೇಂದ್ರ ನಡುವೆ ಸಾಂಬಾರ್ ಮಾಡುವ ವಿಚಾರಕ್ಕೆ ರೂಂನಲ್ಲಿ ಗಲಾಟೆ ಶುರುವಾಗಿದೆ. ಗಲಾಟೆ ತಾರಕಕ್ಕೇರಿದ್ದು ಬಹದ್ದೂರ್​ ಮೇಲೆ ಮಹೇಂದ್ರ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಕೊಲೆಯಾದ ಬಹದ್ದೂರ್ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದನು. ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದ.

ಘಟನಾ ಸ್ಥಳಕ್ಕೆ ತಲಘಟ್ಟಪುರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಮಹೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ : ಕೃಷ್ಣಮೂರ್ತಿ, ನಿಖಿಲ್​, ವಿನಯ್ ಓಪನ್ ಆಗಿ ಕಾಸ್ ಕೇಳ್ತಾರೆ – ಬೆಂಗಳೂರು ನಗರ ಡಿಸಿಗೆ ನೂರು ವಕೀಲರ ದೂರು!

Btv Kannada
Author: Btv Kannada

Read More