ಕೃಷ್ಣಮೂರ್ತಿ, ನಿಖಿಲ್​, ವಿನಯ್ ಓಪನ್ ಆಗಿ ಕಾಸ್ ಕೇಳ್ತಾರೆ – ಬೆಂಗಳೂರು ನಗರ ಡಿಸಿಗೆ ನೂರು ವಕೀಲರ ದೂರು!

ಬೆಂಗಳೂರು : ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿಗಳ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೃಷ್ಣಮೂರ್ತಿ, ನಿಖಿಲ್‌ ಕುಮಾ‌ರ್ ಹಾಗೂ ಬೆಂಗಳೂರು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿನಯ್ ಅವರು ಲಂಚ ಪಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಇದೀಗ ವಕೀಲರ ವೃಂದ ಬೆಂಗಳೂರು ನಗರ ಡಿಸಿಗೆ ದೂರು ನೀಡಿದ್ದು, ಭ್ರಷ್ಟ ಸಿಬ್ಬಂದಿಗಳನ್ನು ಕೂಡಲೇ ವರ್ಗಾವಣೆ ಮಾಡುವಂತೆ ಮನವಿ ಮಾಡಿದ್ದಾರೆ.

ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿಗಳ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೃಷ್ಣಮೂರ್ತಿ, ನಿಖಿಲ್‌ ಕುಮಾ‌ರ್ ಹಾಗೂ ಬೆಂಗಳೂರು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿನಯ್ ಅವರು ವಕೀಲರುಗಳ ಹತ್ತಿರ ದಾವೆಗಳಿಗೆ ಆದೇಶ ಮಾಡಿಸಲು ಹಣವನ್ನು ಕೇಳುತ್ತಾರೆ. ಹಣ ಕೊಡದೇ ಇರುವ ವಕೀಲರುಗಳ ದಾವೆಗಳನ್ನು ಆದೇಶ ಮಾಡದೆ ಇರುವುದು ಮತ್ತು ಹಲವಾರು ಬ್ರೋಕರ್‌ಗಳನ್ನು ಇಟ್ಟುಕೊಂಡು ಹಣವನ್ನು ವಸೂಲಿ ಮಾಡುತ್ತಾರೆ. ಹಿಂದೆ ಇದ್ದಂತಹ ಉಪವಿಭಾಗಾಧಿಕಾರಿಗಳ ಆದೇಶ ಮಾಡಿ ಗಣಕೀಕೃತ ಹೆಬ್ಬೆಟ್ಟು ಗುರ್ತು ನೀಡದೇ ಹೋಗಿದ್ದು, ಆ ಆದೇಶಗಳು ಕಕ್ಷಿದಾರರಿಗೆ ಖಾತೆಗಳು ಆಗಿರುವುದಿಲ್ಲ. ಇದನ್ನು ಪ್ರಶ್ನಿಸಿದರೆ ಹಣವನ್ನು ಕೇಳುತ್ತಾರೆ.

ಹಣ ಕೊಟ್ಟವರ ಕೆಲಸವನ್ನು ಮಾಡಿಕೊಡುತ್ತಾರೆ. ಇಂತಹ ಕೆಲಸವನ್ನು ಮಾಡುತ್ತಿರುವ ನಿಖಿಲ್‌ಕುಮಾರ್, ಕೃಷ್ಣಮೂರ್ತಿ ಎಂಬುವವರು ಮ್ಯಾಜಿಸ್ಟ್ರೇಟ್ ಕೋರ್ಟ್ ವಕೀಲರಾದ ಎಸ್. ಆರ್. ಹರ್ಷವರ್ಧನ್ ಹಾಗೂ ಕೆ.ಎನ್ ಶಶಿಧರ್ ಉಪವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಜಾನುವಾರುಗಳನ್ನು ಬಿಡುಗಡೆಗೊಳಿಸಲು ಹಾಗೂ ವಾಹನ KA-01-AP-7362 ಬಿಡುಗಡೆಗೊಳಿಸಲು ಕೋರಿದ್ದರು. ಇದಕ್ಕೆ ಮಾನ್ಯ ಉಪವಿಭಾಗಾಧಿಕಾರಿಗಳವರು ಸಮ್ಮತಿ ನೀಡಿದ್ದರು. ದಿನಾಂಕ 19-06-2025ರಂದು ಅರ್ಜಿದಾರ ವಕೀಲರಾದ ಶಶಿಧರ್ ಹಾಗೂ ಹರ್ಷವರ್ಧನ್‌ಗೆ ಹಾಗೂ ಹಿರಿಯ ವಕೀಲರಾದ ಹೊನ್ನಪ್ಪನವರಿಗೆ ದಿನಾಂಕ 20-06-2025 ರಂದು ಆದೇಶ ಮಾಡಿಕೊಡುವುದಾಗಿ ತಿಳಿಸಿದ್ದರು.

ನಂತರ ದಿನಾಂಕ 21-06-2025ರಂದು ಉಪವಿಭಾಗಾಧಿಕಾರಿಗಳನ್ನು ಸಂಪರ್ಕಿಸಲು ಹೋದಾಗ ಒಂದು 20 ನಿಮಿಷ ಬಿಟ್ಟು ಬನ್ನಿ ಆದೇಶವನ್ನು ಸಹಿ ಮಾಡುವುದಾಗಿ ತಿಳಿಸಿದ್ದರು. ಬಳಿಕ ಉಪವಿಭಾಗಾಧಿಕಾರಿಗಳವರು ಕಛೇರಿಯಿಂದ ಹೊರಟು ಹೋಗಿದ್ದು, ಈ ವೇಳೆ ಕೃಷ್ಣಮೂರ್ತಿಯವರನ್ನು ಅರ್ಜಿದಾರರು ಶಶಿಧರ್ ಹಾಗೂ ಹರ್ಷವರ್ಧನ್‌ಗೆ ಹಾಗೂ ಹಿರಿಯ ವಕೀಲರಾದ ಹೊನ್ನಪ್ಪನವರು ಭೇಟಿ ಮಾಡಿ ಏತಕ್ಕೋಸ್ಕರ ಆದೇಶದ ಸಹಿ ಮಾಡಿಸಿಲ್ಲ ಎಂದು ಕೇಳಿದ್ದಕ್ಕೆ ಕೃಷ್ಣಮೂರ್ತಿ 1,00,000 ರೂ. ಗಳನ್ನು ಕೊಡಬೇಕಾಗುತ್ತದೆ. 50 ಜಾನುವಾರುಗಳು ಇರುವುದರಿಂದ ಹಣವನ್ನು ಕೊಡುವಂತೆ ಉಪವಿಭಾಗಾಧಿಕಾರಿಗಳು ಹೇಳಿದ್ದಾರೆಂದು ಹೇಳುತ್ತಾನೆ. ನಂತರ ಕೊನೆಪಕ್ಷ 50,000 ರೂ. ನೀಡುವಂತೆ ಕೇಳಿದ್ದಾನೆ.

ನಾವು ಕೊಡುವುದಕ್ಕೆ ಆಗುವುದಿಲ್ಲ ಎಂದು ಹೇಳಿದಾಗ 1 ಗಂಟೆ ಕಾಲ ಬಿಟ್ಟು ಬನ್ನಿ ನಾನು ಉಪವಿಭಾಗಾಧಿಕಾರಿಗಳನ್ನು ಪೋನಿನಲ್ಲಿ ಸಂಪರ್ಕಿಸಿ ಇವತ್ತೇ ಸಹಿ ಮಾಡಿಕೊಡುವಂತೆ ತಮಗೆ ತಿಳಿಸುತ್ತೇನೆಂದು ಹೇಳಿದ. ನಂತರ ಸುಮಾರು 1 -30 ಗಂಟೆ ಸಮಯದಲ್ಲಿ ಹಿರಿಯ ವಕೀಲರು ಚಂದ್ರಶೇಖರ್‌ರೆಡ್ಡಿ, ಹಿರಿಯ ವಕೀಲರಾದ ಹೊನ್ನಪ್ಪನವರು ಬಂದು ಕೃಷ್ಣಮೂರ್ತಿರವರೇ ನಾವು ಒಂದು ವಾರದಿಂದ ಉಪವಿಭಾಗಾಧಿಕಾರಿಗಳವರಲ್ಲಿ ಶುಕ್ರವಾರದಂದು ಮನವಿ ಮಾಡಿದಾಗ ನಿಮ್ಮ ಫೈಲ್‌ನ್ನು ಮನೆಗೆ ತೆಗೆದುಕೊಂಡು ಹೋಗಿ ಪರಿಶೀಲನೆ ಮಾಡಿ ಶನಿವಾರದಂದು ಕೃಷ್ಣಮೂರ್ತಿ ಹತ್ತಿರ ಕೊಟ್ಟಿರುತ್ತೇನೆ ತೆಗೆದುಕೊಳ್ಳಿ ಎಂದು ತಿಳಿಸಿದರು. ನೀನು ಈಗ ಹಣವನ್ನು ಕೊಡುವಂತೆ ಕೇಳುತ್ತಿರುವುದು ಸರಿಯೇ ಎಂದು ಹೊನ್ನಪ್ಪನವರು ಪ್ರಶ್ನಿಸಿದಾಗ ನಿಮಗೆ ಮೀಟರ್ ಇದ್ದರೆ ಹೋಗಿ ಉಪವಿಭಾಗಾಧಿಕಾರಿಗಳ ಹತ್ತಿರ ಹಾಗೂ ಜಿಲ್ಲಾಧಿಕಾರಿಗಳನ್ನು ಕೇಳಿ ಎಂದು ಹೇಳಿದ್ದಾರೆ. 

ಹಿರಿಯ ವಕೀಲರುಗಳಿಗೆ ಈ ರೀತಿ ಅಸಂಬದ್ಧ ಶಬ್ದಗಳನ್ನು ಉಪಯೋಗಿಸಿರುತಕ್ಕಂತಹ ಕೃಷ್ಣಮೂರ್ತಿಯವರನ್ನು ಈ ತಕ್ಷಣದಿಂದ ವಜಾಗೊಳಿಸುವಂತೆ ಹಾಗೂ నిಖಿಲ್ ಕುಮಾರ್ ಹಾಗೂ ವಿನಯ್ ಎಂಬುವವರನ್ನು ಬೇರೆ ಕಡೆ ವರ್ಗಾವಣೆ ಮಾಡುವಂತೆ ಹಾಗೂ ಉಪವಿಭಾಗಾಧಿಕಾರಿಗಳವರ ಕಛೇರಿಯ ರೆಕಾರ್ಡ್ ರೂಂನಲ್ಲಿ ಆದೇಶದ ಕಡತಗಳನ್ನು ದೃಢೀಕರಣ ಪತ್ರಗಳನ್ನು ಜೂನಿಯರ್ ಹಾಗೂ ಹಿರಿಯ ವಕೀಲರುಗಳು ಅರ್ಜಿ ಸಲ್ಲಿಸಿ, ಒಂದು ತಿಂಗಳೂ ಕಳೆದರೂ ಸಹ ದೃಢೀಕೃತ ಪತ್ರಗಳನ್ನು ಸರಿಯಾದ ಸಮಯಕ್ಕೆ ಲಭ್ಯವಾಗುತ್ತಿಲ್ಲ ಹಾಗೂ ದೃಢೀಕರಣ ಪತ್ರವನ್ನು ತೆಗೆದುಕೊಳ್ಳಲು ಇದರ ಗುಮಾಸ್ತನ ಹೆಸರು ನಿಖಿಲ್ ಕುಮಾರ್ ಆಗಿರುತ್ತಾರೆ. ಹಾಗೂ ಈತನು ಸಾವಿರಾರು ರೂಪಾಯಿ ನೀಡಿದಲ್ಲಿ ಮಾತ್ರ ದೃಢೀಕೃತ ನಕಲುಗಳನ್ನು ವಿತರಿಸಿರುವುದಾಗಿ ಹೇಳಿದ್ದಾರೆ. ಈ ಎಲ್ಲಾ ಅಂಶಗಳನ್ನು ಗಮನಿಸಿ ಸಾರ್ವಜನಿಕರಿಗೆ ಹಾಗೂ ವಕೀಲರಿಗೆ ನೀಡುತ್ತಿರುವ ಕಿರುಕುಳವನ್ನು ತಪ್ಪಿಸಿ, ಕೆಳವರ್ಗದ ಸಿಬ್ಬಂದಿಗೆ ಕೆಳವರ್ಗದವರೆ ಸೂಕ್ತ ತಿಳುವಳಿಕೆ ನೀಡಬೇಕೆಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಾಲಯಕ್ಕೆ ರಕ್ಷಿತ್‌ ಶೆಟ್ಟಿ ಭೇಟಿ – ಮುಷ್ಟಿ ಕಾಣಿಕೆ ಅರ್ಪಿಸಿದ ಸಿಂಪಲ್‌ ಸ್ಟಾರ್‌!

 

 

Btv Kannada
Author: Btv Kannada

Read More