ಬೆಂಗಳೂರು : ವಸತಿ ಯೋಜನೆ ಅಡಿ ಮನೆ ಹಂಚಿಕೆಗೆ ಲಂಚ ಪಡೆದ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಇದೀಗ ರಾಜ್ಯಪಾಲ ಥಾವರ್ ಚೆಂದ ಗೆಹ್ಲೊಟ್ ಅವರಿಗೆ ದೂರು ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ವಸತಿ ಸಚಿವರು, ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ ನೀಡುವಂತೆ ರಾಜ್ಯಪಾಲರಿಗೆ ದಿನೇಶ್ ಕಲ್ಲಹಳ್ಳಿ ಮನವಿ ಮಾಡಿದ್ದಾರೆ. ಆಳಂದ್ ಶಾಸಕ ಬಿ.ಆರ್ ಪಾಟೀಲ್ ಹೇಳಿಕೆಯಿಂದ ಸರ್ಕಾರದ ಭ್ರಷ್ಟಾಚಾರ ಹೊರಬಂದಿದೆ. ಬಡವರಿಗೆ ಹಂಚುವ ಮನೆಗಳಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ.
ಬಿ.ಆರ್ ಪಾಟೀಲ್ ಅಧಿಕೃತ ಹೇಳಿಕೆಯನ್ನು ಆಧಾರವಾಗಿ ಪರಿಗಣಿಸಿ. ಕೇವಲ ಒಂದು ಇಲಾಖೆ ಅಥವಾ ನಿರ್ದಿಷ್ಟ ಅಧಿಕಾರಿಗಳ ವೈಫಲ್ಯವಲ್ಲ ಇದು ಸರ್ಕಾರದ ಆಡಳಿತಾತ್ಮಕ ವೈಫಲ್ಯ. ಹಾಗಾಗಿ ಈ ಒಂದು ಭ್ರಷ್ಟಾಚಾರದಲ್ಲಿ ತೊಡಗಿರುವ ಎಲ್ಲಾ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಎಂದು ದಿನೇಶ್ ದೂರು ನೀಡಿದ್ದಾರೆ.
ಇನ್ನು, ಈ ಸಂದರ್ಭದಲ್ಲಿ ನ್ಯಾಯ ಸಮ್ಮತ ಮತ್ತು ನಿಷ್ಪಕ್ಷಪಾತ ತನಿಖೆ ಅಗತ್ಯವಿದೆ ಎಂದು ಬಿ.ಆರ್ ಪಾಟೀಲ್ ಹೇಳಿಕೆ ಆಡಿಯೋ ಸಮೇತ ದಿನೇಶ್ ಕಲಹಳ್ಳಿ ರಾಜಪಾಲರಿಗೆ ದೂರು ನೀಡಿದ್ದಾರೆ. ಸಂಬಂಧಪಟ್ಟ ಸಚಿವರು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಇಂದು ಸಿಎಂ ಸಿದ್ದು ದೆಹಲಿಗೆ ದೌಡು, ವರಿಷ್ಠರ ಜೊತೆ ಮೀಟಿಂಗ್ – ಪರಿಷತ್ನ 4 ಸ್ಥಾನಗಳಿಗೆ ಒಪ್ಪಿಗೆ ಸಾಧ್ಯತೆ!
