ಬೆಂಗಳೂರು : ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಚೇರಿ ಅಧೀಕ್ಷಕರಾದ ಭ್ರಷ್ಟ ಮಂಜುನಾಥ ಸಿ.ಎನ್ ಅವರಿಗೆ ಸಂಕಷ್ಟ ಎದುರಾಗಿದೆ. KREISನ ಭ್ರಷ್ಟ ಸೂಪರಿಂಟೆಡ್ ಮಂಜುನಾಥ್ ಸಿ.ಎನ್ ವಿರುದ್ಧ ದಿಟ್ಟ ಕ್ರಮಕ್ಕೆ ಖಡಕ್ IAS ಅಧಿಕಾರಿ ಮಣಿವಣ್ಣನ್ ಆದೇಶ ನೀಡಿದ್ದಾರೆ.
ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಂಜುನಾಥ ಸಿ.ಎನ್ ವಿರುದ್ಧ ಹಲವು ಭ್ರಷ್ಟಾಚಾರದ ದೂರುಗಳು ಬಂದಿದ್ದು, ಅಲ್ಲದೆ ಮಾಧ್ಯಮಗಳಲ್ಲೂ ಕೂಡ ಇವರ ಕುರಿತು ಸುದ್ದಿ ಭಿತ್ತರವಾಗಿರುವ ಹಿನ್ನೆಲೆಯಲ್ಲಿ ಇಲಾಖೆ ವಿಚಾರಣೆ ನಡೆಸಲು ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಯನ್ನು ನೇಮಿಸಲು ಸರ್ಕಾರವು ತೀರ್ಮಾನಿಸಿದೆ.
ಭ್ರಷ್ಟ ಅಧಿಕಾರಿ ಮಂಜುನಾಥ ಸಿ.ಎನ್ ವಿರುದ್ಧ ನಿವೃತ್ತ ನ್ಯಾಯಾಧೀಶರನ್ನು ವಿಚಾರಣಾಧಿಕಾರಿಯನ್ನಾಗಿ ಹಾಗೂ ವಿಚಾರಣಾಧಿಕಾರಿಗೆ ಸಹಕರಿಸಲು/ಮಂಡನೆ ಮಾಡುವ ಸಲುವಾಗಿ ಶ್ರೀ ಪುರುಷೋತ್ತಮ್ ಎಸ್. ಉಪ ನಿರ್ದೇಶಕರು(ಶಿಕ್ಷಣ), ಆಯುಕ್ತರ ಕಛೇರಿ, ಸಮಾಜ ಕಲ್ಯಾಣ ಇಲಾಖೆ ಇವರನ್ನು ನೇಮಿಸಿ ಸರ್ಕಾರ ಆದೇಶಿಸಿದೆ.
ಭ್ರಷ್ಟ ಅಧಿಕಾರಿ ಮಂಜುನಾಥ ಸಿ.ಎನ್ ವಿರುದ್ಧ ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತ ದೃಷ್ಟಿಯಿಂದ ಸೂಕ್ತ ತನಿಖೆ ನಡೆಸಿ ಅಗತ್ಯ ಕ್ರಮ ಜರುಗಿಸಬೇಕಾಗಿರುವ ಹಿನ್ನೆಲೆಯಲ್ಲಿ, ಅಲ್ಲದೆ ಇವರು ಸೇವೆಗೆ ಸೇರಿದಾಗಿನಿಂದಲೂ ಸಂಘದ ಕೇಂದ್ರ ಕಚೇರಿಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಇವರ ವಿರುದ್ಧದ ದೂರಿನ ಕುರಿತು ನ್ಯಾಯಯುತವಾದ ಮತ್ತು ಪಾರದರ್ಶಕವಾಗಿ ವಿಚಾರಣೆ ನಡೆಸಬೇಕಾಗಿರುವ ಹಿನ್ನೆಲೆಯಲ್ಲಿ ಇವರನ್ನು ಬೆಂಗಳೂರಿನ ಕೇಂದ್ರ ಕಚೇರಿಯಿಂದ (ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ಹೊರತು ಪಡಿಸಿ) ಬೇರೆ ಜಿಲ್ಲೆಯ ವಸತಿ ಶಾಲೆಗೆ ಕೂಡಲೇ ವರ್ಗಾಯಿಸಲು ಅಗತ್ಯ ಕ್ರಮ ವಹಿಸುವುದು, ಕ್ರಮವಹಿಸಿರುವ ಬಗ್ಗೆ ಇಂದೇ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿದೆ.
ಹಲವು ಭ್ರಷ್ಟಾಚಾರದ ದೂರುಗಳು ಬಂದ ಹಿನ್ನೆಲೆಯಲ್ಲಿ KREISನ ಭ್ರಷ್ಟ ಸೂಪರಿಂಟೆಡ್ ಮಂಜುನಾಥ್ ಸಿ.ಎನ್ ವಿರುದ್ಧ ಕಾನೂನು ಕ್ರಮಕ್ಕೆ ಖಡಕ್ IAS ಅಧಿಕಾರಿ ಮಣಿವಣ್ಣನ್ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ : ಸಾಹಸ ಸಿಂಹ ಡಾ. ವಿಷ್ಣುವರ್ಧನ್ 75ನೇ ಜನ್ಮದಿನದ ಸಂಭ್ರಮ.. ಡಾ. ವಿಷ್ಣು ಸೇನಾ ಸಮಿತಿಯಿಂದ ‘ಯಜಮಾನರ ಅಮೃತ ಮಹೋತ್ಸವ’ಕ್ಕೆ ನಿರ್ಧಾರ!
