ಅಮರಾವತಿ : ಆಂಧ್ರಪ್ರದೇಶದಲ್ಲಿ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಬೃಹತ್ ರ‍್ಯಾಲಿ ನಡೆಸುವ ವೇಳೆ ಭಾರೀ ಅವಘಡ ಸಂಭವಿಸಿದೆ. ಜಗನ್ ತೆರಳುತ್ತಿದ್ದ ಕಾರಿನ ಚಕ್ರಕ್ಕೆ ಸಿಲುಕಿ ವ್ಯಕ್ತಿಯೋರ್ವ ಮೃತಪಟ್ಟಿದ್ದಾನೆ.
ಪಲ್ನಾಡು ಜಿಲ್ಲೆಗೆ ಭೇಟಿ ನೀಡುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಗುಂಟೂರು ಜಿಲ್ಲೆಯ ಎಟುಕುರು ಬಳಿಯ ಲಾಲ್‌ಪುರಂ ಹೆದ್ದಾರಿಯಲ್ಲಿ ವೈಎಸ್‌ಆರ್‌ಸಿಪಿ ಆಯೋಜಿಸಿದ್ದ ರ್ಯಾಲಿ ವೇಳೆ ಜಗನ್ ಪ್ರಯಾಣಿಸುತ್ತಿದ್ದ ಕಾರು ವ್ಯಕ್ತಿ ಮೇಲೆ ಹರಿದಿದ್ದು, ವ್ಯಕ್ತಿ ಸ್ಥಳದಲ್ ಮೃತಪಟ್ಟಿದ್ದಾನೆ. ವೈಎಸ್‌ಆರ್‌ಸಿಪಿ ಪಕ್ಷದ ಕಟ್ಟಾ ಬೆಂಬಲಿಗ ಚೀಲಿ ಸಿಂಗಯ್ಯ (54) ಮೃತ ದುರ್ವೈವಿ.
ಜೂನ್ 18ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಘಟನೆಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಕ್ರೋಶ ವ್ಯಕ್ತವಾಗುತ್ತಿವೆ. ಬೃಹತ್ ರ‍್ಯಾಲಿ ವೇಳೆ ಜಗನ್ ನೋಡಲು ಬಂದ ವೇಳೆ ನೂಕು ನುಗ್ಗಲು ತಳ್ಳಾಟವಾಗಿ ಸಿಂಗಯ್ಯ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಕಾರು ಚಾಲಕನಿಗೆ ಕಾಣದೇ ಸಿಂಗಯ್ಯ ಮೇಲೆ ಕಾರು ಹರಿಸಿದ್ದಾನೆ. ಕೂಡಲೇ ಕಾರು ನಿಲ್ಲಿಸಿದರೂ ತಲೆಗೆ ಗಂಭೀರ ಗಾಯವಾಗಿದ್ದರಿಂದ ಇಂದು ಸಿಂಗಯ್ಯ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ದಿಗ್ಗಜ ಕಲಾವಿದರ ಅಭಿಮಾನಿಗಳಿಂದ ಫಸ್ಟ್ ಡೇ ಫಸ್ಟ್ ಶೋ ಟ್ರೇಲರ್ ರಿಲೀಸ್ – ಇದು ಕನ್ನಡ ಚಿತ್ರರಂಗದ ಸುತ್ತ ಸಾಗುವ ಸಿನಿಮಾ!
