ಅಮೆರಿಕಾ ದಾಳಿ ಬಳಿಕವೂ ಇರಾನ್, ಇಸ್ರೇಲ್ ಮೇಲಿನ ದಾಳಿ ಮುಂದುವರಿಸಿದೆ. ಇರಾನ್‌ನ 10ಕ್ಕೂ ಹೆಚ್ಚು ಸ್ಥಳಗಳ ಮೇಲೆ 30ಕ್ಕೂ ಅಧಿಕ ಖಂಡಾಂತರ ಕ್ಷಿಪಣಿಗಳಿಂದ ದಾಳಿ ನಡೆಸಿದೆ. ಟೆಲ್ ಅವೀವ್, ಹೈಫಾ ನಗರ ಸೇರಿ ಹಲವೆಡೆ ಕ್ಷಿಪಣಿ ದಾಳಿ ನಡೆಸಿದೆ.
ಇರಾನ್‌ನ ಮಿಸೈಲ್‌ಗಳು ನಗರಕ್ಕೆ ಅಪ್ಪಳಿಸುತ್ತಿದ್ದಂತೆ ಇಸ್ರೇಲ್‌ನ ಕೆಲವು ಭಾಗಗಳಲ್ಲಿ ಸೈರನ್ ಮೊಳಗಿದೆ. ನಾಗರಿಕರನ್ನ ಸುರಕ್ಷಿತ ಸ್ಥಳಗಳು ಮತ್ತು ಬಂಕರ್‌ಗಳಿಗೆ ಸ್ಥಳಾಂತರಿಸಲಾಗಿದೆ. ಮುಂದಿನ ಸೂಚನೆ ಬರುವವರೆಗೂ ಬಂಕರ್‌ಗಳಿಂದ ಆಚೆ ಬರದಂತೆ ಸೂಚಿಸಲಾಗಿದೆ. ನಾಗರಿಕೆನ್ನು ಗುರಿಯಾಗಿಸಿ ಇರಾನ್ ನಡೆಸಿದ ಈ ದಾಳಿಯಲ್ಲಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಅಮೆರಿಕ ದಾಳಿಗೂ ಜಗ್ಗದ ಇರಾನ್, ಇಸ್ರೇಲ್‌ನ ಹೈಫಾ ನಗರ, ರಾಜಧಾನಿ ಟೆಲ್ ಅವೀವ್, ಜೆರುಸಲೆಂ ಸೇರಿದಂತೆ 10ಕ್ಕೂ ಹೆಚ್ಚು ನಗರಗಳ ಮೇಲೆ ಮಿಸೈಲ್ ಮಳೆ ಸುರಿಸಿದೆ. ಇದರಿಂದ ಇಸ್ರೇಲ್ನಲ್ಲಿ ಹಲವು ಕಟ್ಟಡಗಳಿಗೆ ಹಾನಿಯಾಗಿದ್ದು, ಹತ್ತಾರು ಮಂದಿಗೆ ಗಾಯಗಳಾಗಿದೆ. ಇದಕ್ಕೆ ಪ್ರತಿರೋಧ ತೋರಿದ ಇಸ್ರೇಲ್ ಮತ್ತೆ ದಾಳಿ ನಡೆಸಲು ಸಜ್ಜಾಗುತ್ತಿದೆ.
ಇದನ್ನೂ ಓದಿ : ಡಿಕೆ ಶಿವಕುಮಾರ್ ಬರೀ ಸಿಎಂ ಆಗುವ ಕನಸು ಕಾಣಬೇಕಷ್ಟೇ – ಹೆಚ್ಡಿಕೆ ಟಾಂಗ್!
