ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧಕ್ಕೆ ಅಮೆರಿಕ ಎಂಟ್ರಿ ಕೊಟ್ಟಿದ್ದು, ತಡರಾತ್ರಿ ಇರಾನ್‌ನ ಮೂರು ಪರಮಾಣು ತಾಣಗಳಾದ ಫೋರ್ಡೋ, ನಟಾಂಜ್, ಎಸ್ಪಹಾನ್ ಮೇಲೆ ಅಮೆರಿಕ ದಾಳಿ ಮಾಡಿದೆ. ಈ ದಾಳಿ ಸಂಪೂರ್ಣ ಯಶಸ್ವಿಯಾಗಿದೆ ಎಂದು ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಹಿತಿ ನೀಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಈಗ ಅಮೆರಿಕದ ಎಲ್ಲಾ ವಿಮಾನಗಳು ಇರಾನ್‌ನ ವಾಯುಪ್ರದೇಶ ತೊರೆದು ಸುರಕ್ಷಿತವಾಗಿ ವಾಪಸ್ ಆಗ್ತಿವೆ. ಹೆಚ್ಚಿನ ಬಾಂಬ್‌ಗಳನ್ನು ಫೋರ್ಡೊ ಎಂಬಲ್ಲಿ ಬೀಳಿಸಲಾಗಿದೆ. ನಮ್ಮ ವೀರ ಯೋಧರಿಗೆ ಅಭಿನಂದನೆಗಳು. ಜಗತ್ತಿನ ಬೇರೆ ಯಾವುದೇ ಸೈನ್ಯವು ಇದನ್ನು ಮಾಡಲು ಸಾಧ್ಯವಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಅಮೆರಿಕ ದಾಳಿಯ ಬಗ್ಗೆ ಇರಾನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಜಗತ್ತಿನ ಅತ್ಯಂತ ಪ್ರಬಲ ಸೇನೆ, ಶಸ್ತ್ರಾಸ್ತ್ರಗಳನ್ನ ಹೊಂದಿರುವ ಅಮೆರಿಕ ಇದೀಗ ಇರಾನ್ ಮೇಲೆ ರಾತ್ರೋರಾತ್ರಿ ದಾಳಿ ಮಾಡುವ ಮೂಲಕ ಮೂರು ಪರಮಾಣು ಕೇಂದ್ರಗಳನ್ನು ಉಡೀಸ್ ಮಾಡಿದೆ. ಇರಾನ್‌ನ ಮೂರು ಪರಮಾಣು ತಾಣಗಳ ಮೇಲೆ ಅಮೆರಿಕ ದಾಳಿ ಮೂಲಕ ಇರಾನ್‌ನೊಂದಿಗೆ ಯುದ್ಧಕ್ಕೆ ಇಳಿದಿದ್ದು, ಈ ದಾಳಿಯನ್ನು ಇರಾನ್‌ನ ಪರಮಾಣು ಪ್ರಾಜೆಕ್ಟ್ ಕೊನೆಗೊಳಿಸಲು ಬಯಸುತ್ತಿರುವ ಇಸ್ರೇಲ್‌ಗೆ ಅಮೆರಿಕ ಸಹಾಯ ಮಾಡಿದೆ.
ಇದನ್ನೂ ಓದಿ : ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕಂಬವನ್ನೂ 50 ಅಡಿ ಎಳೆದೊಯ್ದ ಕಾರು!
