ದೆಹಲಿ : ಅಹಮದಾಬಾದ್ ಏರ್ ಇಂಡಿಯಾ ವಿಮಾನ ದುರಂತ ಸಂಭವಿಸಿದ ಬಳಿಕ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಏರ್ ಇಂಡಿಯಾದ ಮೂವರು ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆದೇಶಿಸಿದೆ. ವಿಮಾನ ಸಿಬ್ಬಂದಿಯ ಶೆಡ್ಯೂಲ್ಗೆ ಸಂಬಂಧಿಸಿದಂತೆ ಗಂಭೀರ ಮತ್ತು ಪುನರಾವರ್ತಿತ ನಿಯಮ ಉಲಂಘನೆಗಾಗಿ ಮೂವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆದೇಶಿಸಿದೆ.
ಹೆಸರು ಬಹಿರಂಗಪಡಿಸದ ಮೂವರು ಅಧಿಕಾರಿಗಳ ವಿರುದ್ಧ ವಿಳಂಬ ಮಾಡದೇ ಆಂತರಿಕ ತನಿಖೆ ನಡೆಸಬೇಕು. ಒಂದು ವೇಳೆ ವಿಫಲವಾದರೆ ವಿಮಾನಯಾನ ಸಂಸ್ಥೆಯು ತನ್ನ ಕಾರ್ಯಾಚರಣೆಯ ಅನುಮತಿಯನ್ನು ಕಳೆದುಕೊಳ್ಳುವ ಸಾಧ್ಯತೆ ಸೇರಿದಂತೆ ಕಠಿಣ ಕ್ರಮಕ್ಕೆ ಕಾರಣವಾಗಬಹದು ಎಂದು ಎಚ್ಚರಿಕೆ ನೀಡಿದೆ.
ವಿಮಾನಯಾನ ಸಂಸ್ಥೆಯ ದೇಶೀಯ ಮತ್ತು ಅಂತರರಾಷ್ಟ್ರೀಯ ಜಾಲದಾದ್ಯಂತ ಸಿಬ್ಬಂದಿ ನಿಯೋಜನೆಯನ್ನು ಮೇಲ್ವಿಚಾರಣೆ ಮಾಡುವ ಏರ್ ಇಂಡಿಯಾದ ಇಂಟಿಗ್ರೇಟೆಡ್ ಆಪರೇಷನ್ಸ್ ಕಂಟ್ರೋಲ್ ಸೆಂಟರ್ (ಐಒಸಿಸಿ) ಲೆಕ್ಕಪರಿಶೋಧನೆಯ ಬಳಿಕ ಡಿಜಿಸಿಎ ಈ ಕ್ರಮಕ್ಕೆ ಮುಂದಾಗಿದೆ.
ನಿಯಂತ್ರಕ ಹೊರಡಿಸಿದ ಶೋಕಾಸ್ ನೋಟಿಸ್ ಪ್ರಕಾರ, ಮೇ 16 ಮತ್ತು ಮೇ 17 ರಂದು ಬೆಂಗಳೂರಿನಿಂದ ಲಂಡನ್ ಹೀಥ್ರೂಗೆ ಏರ್ ಇಂಡಿಯಾ ನಿರ್ವಹಿಸುವ ಎರಡು ವಿಮಾನಗಳು – ಎಐ 133 – ಗರಿಷ್ಠ ಹಾರಾಟದ ಕರ್ತವ್ಯ ಸಮಯ ಮಿತಿ 10 ಗಂಟೆಗಳನ್ನು ಮೀರಿತ್ತು ಎಂದು ತಿಳಿಸಿದೆ. ಶೋಕಾಸ್ ನೋಟಿಸ್‌ನಲ್ಲಿ ಹಲವಾರು ಪ್ರಶ್ನೆಗಳನ್ನು ಕೇಳಲಾಗಿತದ್ದು 7 ದಿನಗಳ ಒಳಗಡೆ ಉತ್ತರಿಸಬೇಕೆಂದು ಏರ್ ಇಂಡಿಯಾಗೆ ಸೂಚಿಸಿದೆ.
ಇದನ್ನೂ ಓದಿ : ವಾಹನವನ್ನು ಸೈಡಿಗೆ ಹಾಕುವ ವಿಚಾರ : ಎರಡು ಗುಂಪುಗಳ ಮಧ್ಯೆ ನಡುಬೀದಿಯಲ್ಲಿ ಮಾರಾಮಾರಿ!
