ಇನ್ಸ್​​ಪೆಕ್ಟರ್​​ ಕೆ.ಕೆ ರಘು ಮುಂದಾಳತ್ವದಲ್ಲೇ ಲಕ್ಷ ಲಕ್ಷ ವಸೂಲಿ – ಡೀಲಿಂಗ್ ಸ್ಟೇಷನ್ ಆಯ್ತಾ ಸೋಲದೇವನಹಳ್ಳಿ ಪೊಲೀಸ್ ಠಾಣೆ?

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯದ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರ ಅನ್ನೋದು ಹಾಸು ಹೊದ್ದಾಗಿದೆ. ಅಬಕಾರಿ, ಸಾರಿಗೆ ಇಲಾಖೆ, ಪೊಲೀಸ್ ಸೇರಿ ಹಲವು ಇಲಾಖೆಗಳಲ್ಲಿ ಲಂಚಾವತಾರ ಖುಲ್ಲಾಂಖುಲ್ಲಾ ನಡೆಯುತ್ತಿದೆ. ಭ್ರಷ್ಟ ಅಧಿಕಾರಿಗಳಿಗೆ ಸರ್ಕಾರ ಹಾಗೂ ಲೋಕಾಯುಕ್ತದ ಭಯವೇ ಇಲ್ಲ. ಇದೀಗ ಸೋಲದೇವನಹಳ್ಳಿ ಪೊಲೀಸ್ ಇನ್ಸ್​​ಪೆಕ್ಟರ್​​ಗಳ ಭ್ರಷ್ಟಾಚಾರದ ಕರ್ಮಕಾಂಡ ಬಯಲಾಗಿದೆ.

ಹೌದು.. ಸೋಲದೇವನಹಳ್ಳಿ ಪೊಲೀಸ್​ ಠಾಣೆ ಇನ್ಸ್​​ಪೆಕ್ಟರ್​​ ಕೆ.ಕೆ ರಘು, PSI ಗೋಪಾಲಕೃಷ್ಣ, PSI ಶ್ರೀಶೈಲ ಅವರು ಪ್ರತಿದಿನ ಸುಲಿಗೆಗೆ ಇಳಿದಿದ್ದಾರೆ. ಈ ಪೊಲೀಸ್​ ಇನ್ಸ್​​ಪೆಕ್ಟರ್​ಗಳಿಗೆ ಹೇಳುವವರಿಲ್ಲ, ಕೇಳುವವರಿಲ್ಲ. ಇವರು ಯಾವುದೇ ಕೇಸ್ ಬಂದ್ರೂ ಲಕ್ಷ ಲಕ್ಷ ಲಂಚ ಪಿಕ್ತಾರೆ. ಇಬ್ಬರು ಸಬ್​ ಇನ್ಸ್​ಪೆಕ್ಟರ್​​ಗಳು ಮೊದಲು ಲಕ್ಷ ಲಕ್ಷ ಲಂಚ ತಗೋತಾರೆ.
ಆಮೇಲೆ ನಮ್ಮ ಸಾಹೇಬ ಇನ್ಸ್​ಪೆಕ್ಟರ್ ಕೆ.ಕೆ ರಘುಗೆ ಕೊಡಬೇಕು ಅಂತ ಕೇಳ್ತಾರೆ. ಯಾವ ಗಾಡಿ ಇದ್ರೂ ಅದರಲ್ಲಿ ಸಖತ್ ಎಂಜಾಯ್ ಮಾಡುತ್ತಾರೆ. ಈ ಇನ್ಸ್​ಪೆಕ್ಟರ್​ಗಳನ್ನು ಯಾರೂ ಮುಟ್ಟಲು ಸಾಧ್ಯವಿಲ್ಲವಂತೆ. ಈ ಮೂವರು ​ಇನ್ಸ್​ಪೆಕ್ಟರ್​ಗಳ ಮೇಲೊಬ್ಬರು ಬಿಗ್ ಬಾಸ್ ಇದ್ದಾರಂತೆ. ಬಿಗ್ ಬಾಸ್ ಈ ​ಇನ್ಸ್​ಪೆಕ್ಟರ್​ಗಳನ್ನು ಏನು ಆಗಲು ಬಿಡುವುದಿಲ್ಲವಂತೆ.

ಇನ್ಸ್​​ಪೆಕ್ಟರ್​​ ಕೆ.ಕೆ ರಘು
                ಇನ್ಸ್​​ಪೆಕ್ಟರ್​​ ಕೆ.ಕೆ ರಘು

ಈ ಇನ್ಸ್​ಪೆಕ್ಟರ್​ಗಳು ನಾವು ಇಲ್ಲಿ ಲಕ್ಷ, ಲಕ್ಷ, ಕೋಟಿ ಕೊಟ್ಟು ಬಂದಿದ್ದೇವೆ ಎನ್ನುತ್ತಾರೆ. ಲಕ್ಷ, ಲಕ್ಷ ಕೊಟ್ಟು ಬಂದಿದ್ದೇವೆ ಅಂತ ಭ್ರಷ್ಟ ಇನ್ಸ್​ಪೆಕ್ಟರ್​ಗಳು ಓಪನ್ ಆಗಿ ಎಲ್ಲರ ಬಳಿ ಹೇಳ್ತಾರೆ. ಗೃಹ ಮಂತ್ರಿಗಳೇ, ಈ ಭ್ರಷ್ಟಾತೀಭ್ರಷ್ಟ ​ಇನ್ಸ್​ಪೆಕ್ಟರ್​ಗಳನ್ನು ಸಸ್ಪೆಂಡ್ ಮಾಡಿ ಜೈಲಿಗೆ ಹಾಕಿಸಿ. ಕರ್ನಾಟಕದಲ್ಲಿ ಭ್ರಷ್ಟಾಚಾರ ಸಹಿಸುವುದಿಲ್ಲ ಎಂಬ ಮೆಸೇಜ್ ಕೊಡಿ.
ಇತ್ತ ಲೋಕಾಯುಕ್ತ ಪೊಲೀಸರು ಸೆಟಲ್ ಆಗಿಬಿಟ್ಟಿದ್ದಾರೆ ಈ ಕಡೆ ಬರುವುದಿಲ್ಲವಂತೆ. ಏಕೆಂದರೆ ತಿಂಗಳಿಗೆ 5 ಲಕ್ಷ ಮಾಮೂಲಿ ಈ ಸ್ಟೇಷನ್​ನಿಂದ ಹೋಗುತ್ತಂತೆ.

PSI ಶ್ರೀಶೈಲ
        PSI ಶ್ರೀಶೈಲ

ಸೋಲದೇವನಹಳ್ಳಿ ಪೊಲೀಸ್ ಠಾಣೆ ಡೀಲಿಂಗ್ ಸ್ಟೇಷನ್ ಆಗ್ಬಿಡ್ತಾ? ಈ ಹಿಂದೆ PSI ಗೋಪಾಲಕೃಷ್ಣನ ಡೀಲಿಂಗ್ ದುನಿಯಾವನ್ನು BTV ಬಯಲು ಮಾಡಿತ್ತು. ಕಿರುಕುಳದಿಂದ ಯುವತಿ ಆತ್ಮಹತ್ಯೆ ಮಾಡಿಕೊಂಡ ಕೇಸ್​ ದಾಖಲಾಗಿತ್ತು. ಈ ಕೇಸಲ್ಲಿ PSI ಗೋಪಾಲಕೃಷ್ಣ ಆರೋಪಿಗೆ ಸಹಾಯ ಮಾಡೋಕೆ ಹೊರಟಿದ್ದ. ಆರೋಪಿ ಬಳಿ ಡೀಲಿಂಗ್ ಮಾತಾಡೋದು ಬಿಟ್ಟು ದೂರುದಾರರಿಗೆ ಫೋನ್ ಮಾಡಿದ್ದ. ನಂಬರ್​​​ ಮಿಸ್ಸಾಗಿ PSI ಗೋಪಾಲಕೃಷ್ಣ ದೂರುದಾರರಿಗೆ ಕಾಲ್ ಮಾಡಿದ್ದ. ಕೇಸನ್ನು ಕ್ಲೋಸ್ ಮಾಡಿಸ್ತೀನಿ ನನ್ನನ್ನ ಹಾಗೂ ಸಾಹೇಬ್ರನ್ನ ನೋಡ್ಕೋಬೇಕು ಎಂದು ಸೋಲದೇವನಹಳ್ಳಿ PSI ಗೋಪಾಲಕೃಷ್ಣ ದೂರುದಾರರ ಬಳಿ ಮಾತನಾಡಿದ್ದ.

PSI ಗೋಪಾಲಕೃಷ್ಣ
PSI ಗೋಪಾಲಕೃಷ್ಣ

PSI ಗೋಪಾಲನ ಭ್ರಷ್ಟಾಚಾರದ ಮುಖವಾಡವನ್ನು BTV ಕಳಚಿಟ್ಟಿತ್ತು. ಗೋಪಾಲ ಡೀಲಿಂಗ್ ಮಾಡ್ತಾನಂದ್ರೆ ಅದಕ್ಕೆ ನೇರ ಕಾರಣ ಠಾಣಾಧಿಕಾರಿ ರಘು. PSI ಗೋಪಾಲಕೃಷ್ಣ ಕೇಸ್‌ನಲ್ಲಿ ಸಾಹೇಬ್ರನ್ನ ನೋಡ್ಕೊಳ್ಳಿ ಅಂದಿದ್ದ. ಗೋಪಾಲನ ಬಾಸು-ಕೊಡುವ ಕಾಸು ಎಲ್ಲ ಇನ್ಸ್​ಪೆಕ್ಟರ್ ರಘುಗೇ ಸೇರುತ್ತೆ. ಹಾಗಾಗಿ ಗೃಹ ಮಂತ್ರಿಗಳೇ ಗೋಪಾಲನ ಜೊತೆ ಇನ್ಸ್ ಪೆಕ್ಟರ್ ಕೆ‌.ಕೆ ರಘುವನ್ನು ಈಗ್ಲೇ ಸಸ್ಪೆಂಡ್ ಮಾಡಿ. ಭ್ರಷ್ಟರ ಕೂಪವಾಗಿರೋ ಸೋಲದೇವನಹಳ್ಳಿ ಠಾಣೆಯನ್ನು ಬಚಾವ್ ಮಾಡಿ. ಬೆಂಗಳೂರು ಪೊಲೀಸ್ ಆಯುಕ್ತರೇ ಕೆ.ಕೆ ರಘುಗೆ ತನ್ನ ಮನೆದಾರಿ ತೋರಿಸಿ. ಇಲ್ದೇ ಹೋದ್ರೆ ಸೋಲದೇವನಹಳ್ಳಿ ಭ್ರಷ್ಟರಿಂದ ಸೋತುಸುಣ್ಣವಾಗಿ ಬಿಡುತ್ತೆ. ಜನಸಾಮಾನ್ಯರ ಗೋಳಿಗೆ ಸ್ಪಂದಿಸದ ಭ್ರಷ್ಟರನ್ನ ಈಗ್ಲೇ ಅಮಾನತು ಮಾಡಿ.

ಇಷ್ಟೇ ಅಲ್ಲ ಸೋಲದೇವನಹಳ್ಳಿ ಠಾಣೆ ಥಾರ್ ಕಾರ್​​​ ಕೀ ಬಾತ್ ರಿವೀಲ್ ಆಗಿದೆ. ಸೋಲದೇವನಹಳ್ಳಿ ಪೊಲೀಸರು ಥಾರ್ ಕಾರನ್ನು ಸೀಜ್ ಮಾಡಿದ್ದರು. ಆರೋಪಿಯೊಬ್ಬನ ಕಳ್ಳತನ ಕೇಸಿನಲ್ಲಿ ಥಾರ್ ಕಾರು ವಶಕ್ಕೆ ಪಡೆದಿದ್ರು. ಜಾಮೀನು ಪಡೆದು ಬಂದ ಆರೋಪಿ ತನ್ನ ಕಾರು ಬಿಡಿಸಿಕೊಳ್ಳೋಕೆ ಬಂದಿದ್ದ. ಕೋರ್ಟ್ ಕಾರನ್ನು ರಿಲೀಸ್ ಮಾಡುವಂತೆ ತಾಕೀತು‌ ಮಾಡಿತ್ತು. ಆದ್ರೆ ಸೋಲದೇವನಹಳ್ಳಿ PSI ಶ್ರೀಶೈಲ ಕಾರು ನಾನೇ ಯೂಸ್ ಮಾಡ್ತೀನಿ, ನೀನು ಕೇಳೋಹಾಗಿಲ್ಲ ಅಂತ ತಿಂಗಳಾನುಗಟ್ಟಲೆ ಕಾರ್​ ಇಟ್ಟುಕೊಂಡಿದ್ದನಂತೆ.
ಇತ್ತೀಚೆಗೆ ಸ್ಥಳೀಯ ಮುಖಂಡರು ಜಡಾಯಿಸಿದ್ರಿಂದ ಥಾರ್ ಕಾರ್​ ರಿಟರ್ನ್​ ಮಾಡಿದ್ನಂತೆ. ಸೋಲದೇವನಹಳ್ಳಿ PSI ಶ್ರೀಶೈಲ ಥಾರ್​ ಕಾರನ್ನು ಆರೋಪಿಗೆ ಕೊಟ್ಟಿದ್ನಂತೆ. ಹಾಗಾಗಿ ಕಳ್ಳರು ಕಳ್ಳರಿಗಾಗಿ ಕಳ್ಳರಿಗೋಸ್ಕರ ಇರೋ ಪೊಲೀಸ್ ಠಾಣೆ ಸೋಲದೇವನಹಳ್ಳಿ.

ಇದನ್ನೂ ಓದಿ : ಪ್ಯಾರಿಸ್‌ ಡೈಮಂಡ್‌ ಲೀಗ್‌ನಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ನೀರಜ್‌ ಚೋಪ್ರಾ!

Btv Kannada
Author: Btv Kannada

Read More