ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಪ್ಯಾರಿಸ್ ಡೈಮಂಡ್ ಲೀಗ್‌ನಲ್ಲಿ ಪ್ರಶಸ್ತಿಗೆ ಮುಡಿಗೇರಿಸಿಕೊಂಡಿದ್ದಾರೆ. ಅದು ಕೂಡ ಜರ್ಮನಿಯ ಚಾಂಪಿಯನ್ ಜಾವೆಲಿನ್ ಎಸೆತಗಾರ ಜೂಲಿಯನ್ ವೆಬರ್ ಅವರನ್ನು ಹಿಂದಿಕ್ಕುವ ಮೂಲಕ ಎಂಬುದು ವಿಶೇಷ. 2023ರಲ್ಲಿ ಲೌಸಾನ್ನೆ ನಂತರ ಡೈಮಂಡ್ ಲೀಗ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ನೀರಜ್ ಚೋಪ್ರಾ ಇದೀಗ ಮತ್ತೊಮ್ಮೆ ಡೈಮಂಡ್ ಲೀಗ್‌ನಲ್ಲಿ ಎಲ್ಲರನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಮೂಲಕ ನೀರಜ್ ಚೋಪ್ರಾ 2025ರ ಮೊದಲ ಪ್ರಶಸ್ತಿ ಗೆದ್ದುಕೊಂಡಂತಾಗಿದೆ. ವಿಶೇಷ ಎಂದರೆ ನೀರಜ್ ಪ್ಯಾರಿಸ್ ಡೈಮಂಡ್ ಲೀಗ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದು 8 ವರ್ಷಗಳ ಬಳಿಕ. ಅಂದರೆ ಕೊನೆಯ ಬಾರಿ ಅವರು ಪ್ಯಾರಿಸ್ನಲ್ಲಿ ನಡೆದ ಜೂನಿಯರ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಸ್ಪರ್ಧಿಸಿದ್ದರು.
ಇದೀಗ 8 ವರ್ಷಗಳ ಬಳಿಕ ಪ್ಯಾರಿಸ್ ಡೈಮಂಡ್ ಲೀಗ್ಗೆ ಮರಳಿದ ನೀರಜ್ ಚೋಪ್ರಾ ಅವರು ತಮ್ಮ ಮೊದಲ ಪ್ರಯತ್ನದಲ್ಲೇ 88.16 ಮೀಟರ್ ಎಸೆತದೊಂದಿಗೆ ಶುಭಾರಂಭ ಮಾಡಿದ್ದರು. ಈ ಎಸೆತವೇ ಇತರ ಸ್ಪರ್ಧಿಗಳಿಗೆ ಗುರಿಯಾಗಿ ಮಾರ್ಪಟ್ಟಿತ್ತು. ಕೊನೆಯ ಪ್ರಯತ್ನದವರೆಗೂ ಈ ಮಾರ್ಕ್ ಯಾರು ಮೀರಲಿಲ್ಲ. ಹೀಗಾಗಿ ನೀರಜ್ ಚೋಪ್ರಾ ಪ್ಯಾರಿಸ್ ಡ್ಯಾಮಂಡ್ ಲೀಗ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿ ಇತಿಹಾಸ ನಿರ್ಮಿಸಿದ್ದಾರೆ.
ಇದನ್ನೂ ಓದಿ : ಮಾಜಿ MLC ಕೆ.ಎಚ್.ಶ್ರೀನಿವಾಸ್ ಪಿಂಚಣಿ ಹಣದಲ್ಲಿ ಅವ್ಯವಹಾರ ಆರೋಪ – ಪರಿಷತ್ ಸಚಿವಾಲಯದ ಸಹಾಯಕಿ ಹೆಚ್.ಎಸ್.ಶಾರದಮ್ಮ ಸಸ್ಪೆಂಡ್!
