ಇಂದು ವಿಶ್ವ ಯೋಗ ದಿನಾಚರಣೆ – ವಿಶಾಖಪಟ್ಟಣಂನ ಕಡಲ ತೀರದಲ್ಲಿ 3 ಲಕ್ಷ ಜನರೊಂದಿಗೆ ಪ್ರಧಾನಿ ಮೋದಿ ಯೋಗಾಭ್ಯಾಸ!

ಆಂಧ್ರ ಪ್ರದೇಶ : ಇಂದು ಅಂತರಾಷ್ಟ್ರೀಯ ಯೋಗ ದಿನ. ಭಾರತ ಮಾತ್ರವಲ್ಲದೇ ಇಡೀ ವಿಶ್ವದಾದ್ಯಂತ ಬಹಳ ಅದ್ಧೂರಿಯಾಗಿ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಣೆ ಮಾಡಲಾಗ್ತಿದೆ.

ಈ ಪ್ರಯುಕ್ತ ಆಂಧ್ರ ಪ್ರದೇಶದ ವಿಶಾಖಪಟ್ಟಣಂನ ಭೋಗಪುರಂನ ಆರ್​ಕೆ ಸಮುದ್ರ ತೀರದಲ್ಲಿ ಆಯೋಜಿಸಿರುವ ಯೋಗ ದಿನಾಚರಣೆ ಬೃಹತ್ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಕೂಡ ಭಾಗಿಯಾಗಿದ್ದಾರೆ. ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಕೂಡ ಯೋಗ ದಿನದಲ್ಲಿ ಭಾಗಿಯಾಗಿದ್ದು, ಪ್ರಧಾನಿ , ಮೋದಿಗೆ ಸಾಥ್​​ ನೀಡಿದ್ದಾರೆ.

ಸುಮಾರು 3.19 ಲಕ್ಷ ಜನರು ಏಕಾಕಾಲಕ್ಕೆ ಯೋಗ ಮಾಡ್ತಿದ್ದು, ಸುಮಾರು 25 ಸಾವಿರ ವಿದ್ಯಾರ್ಥಿಗಳು 108 ನಿಮಿಷಗಳ ಕಾಲ ಸೂರ್ಯ ನಮಸ್ಕಾರ ಮಾಡಿ ಗಮನ ಸೆಳೆದಿದಿದ್ದಾರೆ. ಜೊತೆಗೆ ಈ ಅರ್ಥ ಪೂರ್ಣ ಕಾರ್ಯಕ್ರಮ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ಈ ವರ್ಷದ ಧ್ಯೇಯವಾಕ್ಯ ‘ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ’ ಆಗಿದೆ. ದೇಶಾದ್ಯಂತ 8 ಲಕ್ಷ ಸ್ಥಳಗಳಲ್ಲಿ ಯೋಗ ಕಾರ್ಯಕ್ರಮಗಳು ನಡೆಯುತ್ತಿವೆ.

ಇನ್ನು, ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಮಧ್ಯಪ್ರದೇಶದ ಉಜ್ಜೈನಿಯ ಶಿಪ್ರಾ ನದಿಯಲ್ಲಿ ವಿದ್ಯಾರ್ಥಿಗಳು ಜಲಯೋಗ ಮಾಡಿ ಗಮನ ಸೆಳೆದಿದ್ದಾರೆ.

ಬರೀ ಭಾರತ ಮಾತ್ರವಲ್ಲ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲೂ ಯೋಗ ದಿನ ಆಚರಣೆ ಮಾಡಲಾಗ್ತಿದೆ. ಕೊಲಂಬಿಯಾದ ನೈವಾದಲ್ಲೂ ಅಂತರಾಷ್ಟ್ರೀಯ ಯೋಗ ದಿನ ಆಚರಣೆ ಮಾಡಲಾಗಿದೆ. ಯೋಗ ಆಸ್ತಕರು ಹಾಗೂ ಲೋಕಲ್ ಕಮ್ಯೂನಿಟಿ ನಿವಾಸಿಗಳು ಸೇರಿದಂತೆ ಅನೇಕರು, ಪ್ರಾಣಾಯಾಮ, ಹಾಡು ಡ್ಯಾನ್ಸ್​ ಮಾಡೋ ಮೂಲಕ ಯೋಗ ದಿನವನ್ನ ಆಚರಣೆ ಮಾಡಿದ್ದಾರೆ.

ಇದನ್ನೂ ಓದಿ : ಪ್ರಯಾಣಿಕರೇ ಗಮನಿಸಿ – ಭಾನುವಾರ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಸಂಚಾರ ವ್ಯತ್ಯಯ!

Btv Kannada
Author: Btv Kannada

Read More