ಸೋಲದೇವನಹಳ್ಳಿ ಠಾಣೆಯ ಆರೋಪಿ ಜೊತೆ ಫೋನ್​​ನಲ್ಲಿ ಡೀಲ್ – ದೂರುದಾರನಿಗೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದ PSI ಗೋಪಾಲಕೃಷ್ಣ!

ಬೆಂಗಳೂರು : ಸೋಲದೇವನಹಳ್ಳಿ PSI ಗೋಪಾಲ ಕೃಷ್ಣನ ಭ್ರಷ್ಟಾಚಾರದ ಕರ್ಮಕಾಂಡ ಬಟಾಬಯಲಾಗಿದೆ. ಆರೋಪಿಗೆ ಕಾಲ್ ಮಾಡೋಕೆ ಹೋಗಿ ದೂರುದಾರನಿಗೆ ಫೋನ್ ಕಾಲ್ ಮಾಡಿದ್ದ PSI ಗೋಪಾಲ ಕೃಷ್ಣ, ಡೀಲ್ ವಿಚಾರ ಮಾತಾಡೋಕೆ ಹೋಗಿ ಇದೀಗ ತನ್ನ ಕಾಲ ಮೇಲೆ ತಾನೇ ಕಲ್ಲಾಕ್ಕೊಂಡಿದ್ದಾನೆ.

ಘಟನೆ ಏನು? ಕಳೆದ 8 ತಿಂಗಳ ಹಿಂದೆ ಸೋಲದೇವನಹಳ್ಳಿಯ 23ರ ಹರೆಯದ ಪ್ರವಳಿಕ ಎಂಬ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಪ್ರವಳಿಕ ಆತ್ಮಹತ್ಯೆಗೆ ಆಕೆಯ ಪ್ರಿಯಕರ ವಿಕ್ಯಾತ್​ಯೇ ಕಾರಣ. ವಿಕ್ಯಾತ್​ನ ಟಾರ್ಚರ್​ಗೆ ಅಕ್ಕ ಸತ್ಲು ಎಂದು ಆಕೆಯ ಸಹೋದರ ಪ್ರಣಯ್ ದೂರು ಕೊಟ್ಟಿದ್ದ. ಆದ್ರೆ, ಸೋಲದೇವನಹಳ್ಳಿ ಪೊಲೀಸರು FIR ಮಾಡಿಕೊಳ್ಳದೆ ತಣ್ಣಗಾಗಿದ್ದರು.

ಆದ್ರೆ, ಕಳೆದ ನಾಲ್ಕೈದು ದಿನದ ಹಿಂದೆ PSI ಗೋಪಾಲ ಯಾವುದೋ ಜ್ಞಾನದಲ್ಲಿ ಕೃತ್ಯ ಕೇಸ್​ನ ಹಾದಿ ತಪ್ಪಿಸೋಕೆ ದೂರುದಾರ ಪ್ರಣಯ್​ಗೆ ಕಾಲ್ ಮಾಡಿದ್ದ. ಆದ್ರೆ, ಗೋಪಾಲಕೃಷ್ಣ ಆರೋಪಿ ವಿಕ್ಯಾತ್​​ಗೆ ಕಾಲ್ ಮಾಡಿದ್ದೀನಿ ಅಂದ್ಕೊಂಡೇ ಮಾತಿಗಿಳಿದಿದ್ದ.

ನಿನ್ನನ್ನ ಈ ಕೇಸ್​ನಿಂದ ಪಾರು ಮಾಡ್ತೀನಿ. ಸಾಹೇಬ್ರು ನಿನ್ನನ್ನ ಎಲ್ಲಿಯಂತ ಕೇಳ್ತಿದ್ದಾರೆ. ಸಾಹೇಬ್ರು ಕೇಳಿದ್ರೆ ನೀನು 3 ವರ್ಷದಿಂದ ಮೊಬೈಲ್ ಫೋನೇ ಬಳಸಿಲ್ಲವೆಂದು ಹೇಳು. FSL ರಿಪೋರ್ಟನ್​ನ ನಾನು ಹ್ಯಾಂಡಲ್ ಮಾಡ್ತೀನಿ. ಆದ್ರೆ, ನನ್ನನ್ನ ಹಾಗೆಯೇ ಸಾಹೇಬ್ರನ್ನ ಈ ಕೇಸಲ್ಲಿ ನೀನು ನೋಡ್ಕೋಬೇಕು ಎಂದು ಹೇಳಿ ಮಹಾನುಭಾವ PSI ಗೋಪಾಲಕೃಷ್ಣ ಕಾಲ್ ಕಟ್ ಮಾಡಿದ್ದ.

ಮರುದಿನ ದೂರುದಾರ ಪ್ರಣಯ್ PSI ಗೋಪಾಲಕೃಷ್ಣನ ಬಳಿ ಹೋಗಿ ಬರೋಕೆ ಹೇಳಿದ್ರಿ ಅಂದ್ರೆ, ಫೋನ್ ತೆಗ್ದು ಕಾಲ್ ಹಿಸ್ಟರಿ ನೋಡಿ ಗಾಬರಿಬಿದ್ದಿದ್ದಾನಂತೆ. ತಕ್ಷಣ ಪ್ರಣಯ್ ನ ಮೊಬೈನ ಚೆಕ್ ಮಾಡಿ ಯಾರಿಗೂ ತಿಳಿಸದಂತೆ ವಾರ್ನಿಂಗ್ ಕೊಟ್ಟಿದ್ದಾನಂತೆ. ಈ ಮೂಲಕ ಕಾನೂನು ಕಾಪಾಡೋ ಖಾಕಿಧಾರಿ ಗೋಪಾಲನ ಲೀಲಾವಳಿ ಬಟಾಬಯಲಾಗಿದೆ.  ಆರೋಪಿಯನ್ನು ಡೀಲ್​ ಮಾಡಲು ಹೋಗಿ ದೂರುದಾರನಿಗೆ PSI ಸಿಕ್ಕಿಬಿದ್ದಿದ್ದು, ಇಂಥ ಭ್ರಷ್ಟ PSI ಅನ್ನು ಸಸ್ಪೆಂಡ್ ಮಾಡಿ ಎಂದು ಬೆಂಗಳೂರು ನಗರ ಪೊಲೀಸ್​ ಕಮಿಷನರ್​​ ಸೀಮಂತ್​​​ ಕುಮಾರ್​​ ಸಿಂಗ್​ ಅವ್ರಿಗೆ ದೂರುದಾರ ಪ್ರಣಯ್ ಕುಟುಂಬಸ್ಥರು ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಕರ್ನಾಟಕದ ಧರ್ಮಾಧಾರಿತ ವಸತಿ ಮೀಸಲಾತಿ ವಿರುದ್ಧ ಕಾನೂನು ಕ್ರಮ – ಪ್ರಹ್ಲಾದ ಜೋಶಿ ಎಚ್ಚರಿಕೆ!

Btv Kannada
Author: Btv Kannada

Read More