‘ಲೋಕಾ’ ಹೆಸರಲ್ಲಿ ನೂರಾರು ಕೋಟಿ ವಸೂಲಿ – ED ತನಿಖೆ ಉರುಳು.. ಮಂತ್ರಿ, ಬಿಡಿಎ, ಅಬಕಾರಿ ಅಧಿಕಾರಿಗಳು ಜೈಲು ಸೇರುವ ಸಾಧ್ಯತೆ!

ಬೆಂಗಳೂರು : ಲೋಕಾಯುಕ್ತ ಪೊಲೀಸರ ಹೆಸರಿನಲ್ಲಿ ನೂರಾರು ಕೋಟಿ ವಸೂಲಿ ಮಾಡಿರುವ ಪ್ರಕರಣದ ತನಿಖೆಗೆ ಜಾರಿ ನಿರ್ದೇಶನಾಲಯ (ED) ಎಂಟ್ರಿ ಕೊಟ್ಟಿದೆ. ಸರ್ಕಾರಿ ಅಧಿಕಾರಿಗಳಿಂದ ಹಣ ವಸೂಲಿ ಮಾಡಿ ಸಿಕ್ಕಿ ಬಿದ್ದಿರುವ ಹೆಡ್‌ಕಾನ್‌ಸ್ಟೆಬಲ್ ನಿಂಗಪ್ಪ ಜತೆಗೆ ಲೋಕಾಯುಕ್ತ SP ಶ್ರೀನಾಥ್ ಜೋಶಿಗೂ ಭಾರೀ ಸಂಕಷ್ಟದ ಉರುಳು ಬಿದ್ದಿದೆ.

ಲೋಕಾಯುಕ್ತ SP ಶ್ರೀನಾಥ್, ಹೆಡ್‌ಕಾನ್‌ಸ್ಟೆಬಲ್ ನಿಂಗಪ್ಪ
ಲೋಕಾಯುಕ್ತ SP ಶ್ರೀನಾಥ್, ಹೆಡ್‌ಕಾನ್‌ಸ್ಟೆಬಲ್ ನಿಂಗಪ್ಪ

ಇನ್ನು, ಈ ಪ್ರಕರಣದಲ್ಲಿ ನಿಂಗಪ್ಪನ್ನನು ಖೆಡ್ಡಾಗೆ ಕೆಡವಿದ ಬಳಿಕ ಅಬಕಾರಿ ಇಲಾಖೆಯ ಲಂಚಾವತಾರವೂ ಬಟಾಬಯಲಾಗಿದೆ. ಲೋಕಾಯುಕ್ತ ಲಂಚಾವತಾರದಲ್ಲಿ ಸಿಕ್ಕ ಅಬಕಾರಿ ಇಲಾಖೆಯ ಡೀಲಿಂಗ್ ಹೇಗಿರುತ್ತೆ ಅನ್ನೋದ್ರ ಕಹಾನಿ ಈಗ ಇಂಚಿಂಚೂ ಬಹಿರಂಗವಾಗಿದ್ದು, ಯಾವ ಮಾರ್ಗದಲ್ಲಿ ಅಬಕಾರಿ ಇಲಾಖೆಯಲ್ಲಿ ಲಂಚದ ಹುಂಡಿ ಇಟ್ಟಿರ್ತಾರೆ ಅನ್ನೋದು ಗೊತ್ತಾಗಿದೆ.

ಅಬಕಾರಿ ಮಂತ್ರಿ ಆರ್​ ಬಿ ತಿಮ್ಮಾಪುರ್​
ಅಬಕಾರಿ ಮಂತ್ರಿ ಆರ್​ ಬಿ ತಿಮ್ಮಾಪುರ್​

ಇದೀಗ ಈ ಪ್ರಕರಣದಲ್ಲಿ ಅಬಕಾರಿ ಮಂತ್ರಿ ಆರ್​.ಬಿ ತಿಮ್ಮಾಪುರ್​​, ಅಬಕಾರಿ ಅಧಿಕಾರಿಗಳು, ಲೋಕಾಯುಕ್ತ ಪೊಲೀಸರು ಹಾಗೂ ಬಿಡಿಎ ಅಧಿಕಾರಿಗಳು ಜೈಲು ಸೇರುವ ಸಾಧ್ಯತೆಯಿದೆ. ಪ್ರಕರಣ CBIಗೂ ವರ್ಗಾವಣೆ ಆಗೋದು ಶತಸಿದ್ಧವಾಗಿದ್ದು, ಲೋಕಾಯುಕ್ತ SP ಶ್ರೀನಾಥ್ ಜೋಶಿಗೆ ಸಿಬಿಐ ಸಂಕಷ್ಟ ಶುರುವಾಗಿದೆ. ಹಾಗೆಯೇ ಲೋಕಾಯುಕ್ತದ ಹೆಸರು ಹೇಳಿಕೊಂಡು ವಸೂಲಿಗಿಳಿಯುತ್ತಿ ಕಂದಾಯ, ಅಬಕಾರಿ, ಬಿಡಿಎ, ಬಿಬಿಎಂಪಿ ಎಲ್ಲಾ ಇಲಾಖೆ ಲಂಚಬಾಕರಿಗೆ ಆಪತ್ತು ಕಾದಿದೆ.

ಪ್ರಕರಣದಲ್ಲಿ ಹವಾಲ ಹಣಕಾಸು ನಡೆದ ಹಿನ್ನೆಲೆ ED ಎಂಟ್ರಿಯಾಗಿದ್ದು, ಅಬಕಾರಿ ಸಚಿವ R.B ತಿಮ್ಮಾಪುರ್​ ಆ್ಯಂಡ್ ಟೀಂಗೆ ನಡುಕ ಶುರುವಾಗಿದೆ. ಇತ್ತ ಸಚಿವ ಸ್ಥಾನ ಖೋತಾ, ಅತ್ತ ಕೇಂದ್ರದ ತನಿಖಾ ತಂಡದ ನೋಟ ಈ ಕೇಸ್​ ಮೇಲೆ ಬಿದ್ದಿದೆ.  ಸಿಬಿಐ, ಐಟಿ, ಇಡಿ ಈ ಕೇಸಲ್ಲಿ ಎಂಟ್ರಿಯಾಯ್ತಂದ್ರೆ‌ ಅದೆಷ್ಟು ಸಚಿವ ಸ್ಥಾನ ಎಗರೋಗುತ್ತೋ ಎಂದು ಕಾದು ನೋಡಬೇಕು. ಸುಮೋಟೋ ಕೇಸ್ ದಾಖಲಿಸಿಕೊಂಡು ED, IT ತನಿಖೆಯನ್ನು ಕೈಗೆತ್ತಿಕೊಳ್ಳಲು ಸಿದ್ದತೆ ನಡೆಸಿದೆ ಎಂಬ ಮಾಹಿತಿಗಳು ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಇನ್ನು ಅಬಕಾರಿಯ ಹೆಚ್ಚುವರಿ ಆಯುಕ್ತ ನಾಗರಾಜಪ್ಪ ಆ್ಯಂಡ್ ಟೀಂಗೆ ಕೈಕೋಳವೂ ಬೀಳಬಹುದು. ಇನ್ನು ಈ ಪ್ರಕರಣದಲ್ಲಿ ಮೆಲುಕು ಹಾಕಿಕೊಂಡಿರುವ ಮೂವರು ಸಚಿವರ PAಗಳ ಗಂಟಲಲ್ಲಿ ನೀರೂ ಇಳೀತಿಲ್ವಂತೆ.

ಕೇಸಿನ ಉರುಳು ಲೋಕಾದಿಂದ ತಪ್ಪಿಹೋದ್ರೂ EDಯಿಂದ ತಪ್ಪಿಹೋಗಲ್ಲ. ಈಗಾಗ್ಲೇ ಲೋಕಾ ಅಧಿಕಾರಿಗಳನ್ನ ED ಅಧಿಕಾರಿಗಳು ಸಂಪರ್ಕಿಸಿದ್ದಾರೆ. ಸಾಕಷ್ಟು ಮಾಹಿತಿಗಳನ್ನ ಕೇಳಿರುವ ED ಟೀಂ, ಪ್ರಕರಣ ಫ್ಲಾಫ್ ಆಗುತ್ತೆ ಅಂದ್ಕೊಂಡವ್ರಿಗೆ ಎದೆಬಡಿತ ಮತ್ತೆ ಜೋರಾಗಿದೆ. ಫೆಮಾ ಆ್ಯಕ್ಟ್ ನಡಿ ಪ್ರಕರಣ ದಾಖಲಾಗುವ ಸಾಧ್ಯತೆಯಿದ್ದು, ಈ ವಾರದ ಒಳಗಾಗಿ ED ‘ಲೋಕಾ’ ಕೇಸಲ್ಲಿ ಫುಲ್ ಆ್ಯಕ್ಟಿವ್ ಆಗುತ್ತೆ. ಬೇಡಾ ಅಂದ್ರೂ ಬೇಡಿಯ ಭಾಗ್ಯ ಲೋಕಾ, ಸಚಿವರು, ಭ್ರಷ್ಟ ಅಧಿಕಾರಿಗಳ ಕೈಗೆ ಬೀಳಲಿದೆ.

ಇದನ್ನೂ ಓದಿ : ಕಾಲ್ತುಳಿತ ತಡೆಗೆ ಹೊಸ ಕಾನೂನು – ಆಯೋಜಕರಿಗೆ 3 ವರ್ಷ ಜೈಲು, 5 ಲಕ್ಷ ದಂಡ.. ಮಸೂದೆಯಲ್ಲಿ ಏನೇನಿದೆ?

Btv Kannada
Author: Btv Kannada

Read More