ಕನ್ನಡ ಕೋಗಿಲೆ ಖ್ಯಾತಿಯ ಗಾಯಕಿ ಅಖಿಲಾ ಪಜಿಮಣ್ಣು ಸಂಸಾರದಲ್ಲಿ ಬಿರುಕು ಮೂಡಿದ್ದು, ಅಖಿಲಾ ಪಜಿಮಣ್ಣು- ಧನಂಜಯ್ ಶರ್ಮ ದಂಪತಿ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದಾರೆ.

ಅಮೆರಿಕದಲ್ಲಿ ಇಂಜಿನಿಯರ್ ಆಗಿದ್ದ ಧನಂಜಯ್ ಅವರನ್ನು ಮೂರು ವರ್ಷಗಳ ಹಿಂದೆ ಅಖಿಲಾ ವಿವಾಹವಾಗಿದ್ದರು. ಜೂನ್ 12 ರಂದು ಪುತ್ತೂರು ನ್ಯಾಯಾಲಯದಲ್ಲಿ ಈ ಜೋಡಿ ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿದೆ.

ಕನ್ನಡ ಕೋಗಿಲೆ ಬಳಿಕ ಹಲವು ಗಾಯನ ರಿಯಾಲಿಟಿ ಶೋ ಹಾಗೂ ಇತರ ವೇದಿಕೆಗಳಲ್ಲೂ ಅಖಿಲಾ ಪಜಿಮಣ್ಣು ಕಾಣಿಸಿಕೊಂಡಿದ್ದಾರೆ. ಅಖಿಲಾ ಪಜಿಮಣ್ಣು ಹಾಗೂ ಧನಂಜಯ್ ಶರ್ಮಾ ಇಬ್ಬರು ಒಪ್ಪಿಗೆ ಮೇರೆಗೆ ಬೇರೆ ಬೇರೆಯಾಗಲು ನಿರ್ಧರಿಸಿದ ಬೆನ್ನಲ್ಲೇ ಅಖಿಲಾ ಪಜಿಮಣ್ಣು ಸೋಶಿಯಲ್ ಮೀಡಿಯಾ ಖಾತೆಗಳಿಂದ ದಾಂಪತ್ಯ ಜೀವನದ ಫೋಟೋಗಳು ಡಿಲೀಟ್ ಆಗಿದೆ.

ಮದುವೆಯಾದ ಕೆಲ ಸಮಯ ಭಾರತದಲ್ಲಿದ್ದ ಈ ಜೋಡಿ ಆ ಬಳಿಕ ಅಮೆರಿಕಕ್ಕೆ ಶಿಫ್ಟ್ ಆಗಿತ್ತು. ಅಮೆರಿಕ ದಕ್ಷಿಣ ಕ್ಯಾಲಿಫೋರ್ನಿಯಾದ ಸ್ಯಾನ್ ಹೋಸ್‌ನಲ್ಲಿ ಇವರು ವಾಸವಿದ್ದರು. ಮೈಸೂರಿನ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರಿಂಗ್‌ನಲ್ಲಿ 2011 ರಿಂದ 2015ರವರೆಗೆ ವಿದ್ಯಾಭ್ಯಾಸ ಮಾಡಿದ್ದ ಧನಂಜಯ್, ಆ ಬಳಿಕ ನಾರ್ತ್ ಕ್ಯಾರೋಲಿನಾ ಸ್ಟೇಟ್ ಯುನಿವರ್ಸಿಟಿಯಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್‌ನಲ್ಲಿ ಮಾಸ್ಟರ್ಸ್ ಡಿಗ್ರಿ ಮಾಡಿದ್ದರು.
ಇದನ್ನೂ ಓದಿ : ಲಗೇಜ್ ವಿಚಾರಕ್ಕೆ ವಿಮಾನದಲ್ಲಿ ಮಹಿಳೆ ರಂಪಾಟ – ಕಿರಿಕ್ ಲೇಡಿ ವಿರುದ್ದ ಕೇಸ್ ದಾಖಲು!
Author: Btv Kannada
Post Views: 1,882







