ದೇವನಹಳ್ಳಿ : ಮಹಿಳೆಯೊಬ್ಬರು ಲಗೇಜ್ ವಿಚಾರಕ್ಕೆ ವಿಮಾನದಲ್ಲಿ ರಂಪಾಟ ಮಾಡಿರುವ ಘಟನೆ ನಡೆದಿದೆ. ಇದೀಗ ವಿಮಾನದಲ್ಲಿ ಮಹಿಳೆ ಕಿರಿಕ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ವಿಮಾನದ ಸಿಬ್ಬಂದಿ-ಪೊಲೀಸರ ಜೊತೆ ಕಿರಿಕ್ ಮಾಡಿ ಗಲಾಟೆ ಮಾಡಿದ ಮಹಿಳೆ ವಿರುದ್ದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ವ್ಯಾಸ್ ಹಿರಲ್ ಮೋಹನ್ ಬಾಯಿ ಎಂಬ ಮಹಿಳೆ ವಿರುದ್ದ ಪ್ರಕರಣ ದಾಖಲಾಗಿದ್ದು, ಜೂನ್ KIABಯಿಂದ ಸೂರತ್‌ಗೆ AI 2749 F ವಿಮಾನದಲ್ಲಿ ಮಹಿಳೆ ತೆರಳುತ್ತಿದ್ದರು. ಈ ವೇಳೆ ಫ್ಲೈಟ್ನಲ್ಲಿ ಬೋರ್ಡಿಂಗ್ ಆಗಿ ಲಗೇಜ್ ಅನ್ನು ಸೀಟ್ ಬಳಿ ಮಹಿಳೆ ಬಿಟ್ಟಿದ್ದರು. ಲಗೇಜ್ ಬಗ್ಗೆ ಪ್ರಶ್ನಿಸಿದಕ್ಕೆ ಪ್ಲೈಟ್ ಕ್ರ್ಯೂ ಸಿಬ್ಬಂದಿ ಜೊತೆ ಮಹಿಳೆ ಅನುಚಿತವಾಗಿ ನಡೆದುಕೊಂಡಿದ್ದಾರೆ.
ಇದೇ ವೇಳೆ ಸಹ ಪ್ರಯಾಣಿಕರ ಜೊತೆಯು ರಂಪಾಟ ಮಾಡಿದ್ದರು. ಈ ವೇಳೆ ವಿಮಾನ ಸಿಬ್ಬಂದಿ ಮಹಿಳೆಯನ್ನ ಪ್ಲೈಟ್ ನಿಂದ ಇಳಿಸಿ ಏರ್ಪೋಟ್ ಪೊಲೀಸರ ವಶಕ್ಕೆ ನೀಡಿದ್ದಾರೆ. ಮಹಿಳೆ ಪೊಲೀಸ್ ಠಾಣೆಯಲ್ಲೂ ಕಿರಿಕ್ ಮಾಡಿ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಮಹಿಳೆಯನ್ನ ಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ : ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿಬಂದಿದೆ “ಮತ್ತೆ ಮೊದಲಿಂದ” ಆಲ್ಬಂ!
