ರಗಡ್ ಅವತಾರದಲ್ಲಿ ಕಾಣಿಸಿಕೊಂಡ ನಟ ಅಜಯ್​​ ರಾವ್ – ಜೂ.21ಕ್ಕೆ ನೂತನ ಚಿತ್ರದ ಮುಹೂರ್ತ ಸಮಾರಂಭ! 

ಯುದ್ದಕಾಂಡ ಚಿತ್ರದ ಯಶಸ್ಸಿನ ನಂತರ ನಟ, ನಿರ್ಮಾಪಕ ಅಜಯ್ ರಾವ್ ಅವರು ಇದೀಗ ಮತ್ತೊಂದು ಇಂಟರೆಸ್ಟಿಂಗ್ ಕ್ಯಾರೆಕ್ಟರ್ ಮೂಲಕ ಸಿನಿ ರಸಿಕರ ಮುಂದೆ ಬರುತ್ತಿದ್ದಾರೆ.

ಇದುವರೆಗೂ ಲವರ್ ಬಾಯ್, ಆಕ್ಷನ್ ಹೀರೋ, ಭಗ್ನ ಪ್ರೇಮಿಯಾಗಿ ತೆರೆಮೇಲೆ ಕಾಣಿಸಿಕೊಂಡಿದ್ದ ಅಜಯ್ ರಾವ್ ಅವರು ವಿಭಿನ್ನವಾದ ರಗಡ್ ಗೆಟಪ್ ಮೂಲಕ ನೋಡುಗರ ಗಮನ ಸೆಳೆಯುತ್ತಿದ್ದಾರೆ.

ಬೋಳು ತಲೆಯಲ್ಲಿ, ಅರ್ಧ ಕೂಲಿಂಗ್ ಗ್ಲಾಸ್ ಹಾಕಿ ವಿಲನ್ ಗಳಿಗೆ ಸಿಂಹಸ್ವಪ್ನ ಎನ್ನುವಂತೆ ಕಾಣಿಸಿಕೊಂಡಿದ್ದಾರೆ. ನನ್ ಮಗಳೇ ಹೀರೋಯಿನ್ ಖ್ಯಾತಿಯ ನಿರ್ದೇಶಕ ಎಸ್.ಕೆ.ಬಾಹುಬಲಿ ಅವರು ಈ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಪಿಕೆ ಪ್ರೊಡಕ್ಷನ್ಸ್ ಮೂಲಕ ಕಿರಣ್ ಅವರು ನಿರ್ಮಿಸುತ್ತಿರುವ ಈ ಚಿತ್ರದ ಹಾಡುಗಳಿಗೆ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆಯಿದ್ದು, ಸುಜ್ಞಾನ್ ಅವರು ಕ್ಯಾಮೆರಾ ವರ್ಕ್ ನಿಭಾಯಿಸುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದ ಮುಹೂರ್ತ ಸಮಾರಂಭ  ಜೂನ್​​.21 ಶನಿವಾರ ಶ್ರೀ ಬಂಡೆ ಮಹಾಕಾಳಮ್ಮ ದೇವಸ್ಥಾನದಲ್ಲಿ ನೆರವೇರುತ್ತಿದೆ.

ಇದನ್ನೂ ಓದಿ : ಮತ್ತೆ ಒಂದಾದ ಶಿವಣ್ಣ, ಡಾಲಿ ಧನಂಜಯ್​ – ಸದ್ದಿಲ್ಲದೇ ಅನೌನ್ಸ್ ಆಯ್ತು ಹೇಮಂತ್‌‌ ರಾವ್​​ ಹೊಸ ಸಿನಿಮಾ!

Btv Kannada
Author: Btv Kannada

Read More