ರಾಜ್ಯದಲ್ಲಿ ನಾಲ್ವರು IAS ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ!

ಬೆಂಗಳೂರು : ರಾಜ್ಯದಲ್ಲಿ ನಾಲ್ವರು IAS ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. IAS ಅಧಿಕಾರಿ ಜಗದೀಶ್. ಜಿ ಅವರನ್ನು ಬೆಂಗಳೂರು ನಗರ ಡಿಸಿ ಹುದ್ದೆಯಿಂದ ಮುಖ್ಯ ಸಹಾಯಕ ಅಧಿಕಾರಿ, ಜಿಲ್ಲಾ ಪಂಚಾಯತ್, ಬೆಂಗಳೂರು ನಗರಕ್ಕೆ ವರ್ಗಾವಣೆ ಮಾಡಿದ್ದಾರೆ.

IAS ಅಧಿಕಾರಿ ಜಗದೀಶ್. ಜಿ
  IAS ಅಧಿಕಾರಿ ಜಗದೀಶ್. ಜಿ

IAS ಅಧಿಕಾರಿ ಚಂದ್ರಶೇಖರ ನಾಯಕ. ಎಲ್ ಅವರನ್ನು ಕಮರ್ಷಿಲ್ ಟ್ಯಾಕ್ಸ್ ವಿಭಾಗ ಹೆಚ್ಚುವರಿ ಆಯುಕ್ತರು (ಸೇವಾ ವಿಶ್ಲೇಷಣಾ ವಿಭಾಗ)ಕ್ಕೆ ವರ್ಗಾವಣೆ ಮಾಡಿ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ನೀಡಿದ್ದಾರೆ.

IAS ಅಧಿಕಾರಿ ಚಂದ್ರಶೇಖರ ನಾಯಕ. ಎಲ್
      IAS ಅಧಿಕಾರಿ ಚಂದ್ರಶೇಖರ ನಾಯಕ. ಎಲ್

ಇನ್ನು IAS ಅಧಿಕಾರಿ ಸಂಗಪ್ಪ ಅವರನ್ನು ಬಾಗಲಕೋಟೆ ಜಿಲ್ಲಾಧಿಕಾರಿ ಹುದ್ದೆಯಿಂದ ಜನರಲ್ ಮ್ಯಾನೇಜರ್(ರೀ ಸೆಟ್ಲ್ ಮೆಂಟ್ & ರಿಹ್ಯಾಬಿಲಿಟೇಷನ್‍) ಬಾಗಲಕೋಟೆಗೆ ವರ್ಗಾವಣೆ ಮಾಡಿದ್ದು, ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ಸಹಾಯಕ ನಿರ್ದೇಶಕರಾಗಿದ್ದ ರಾಹುಲ್ ರತ್ನಂ ಪಾಂಡೆ ಅವರನ್ನು ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್​ನ ನಿರ್ದೇಶಕರಾಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಇದನ್ನೂ ಓದಿ : ಮಂಗಳೂರು ಪೊಲೀಸ್‌ ಇಲಾಖೆಗೆ ಭರ್ಜರಿ ಸರ್ಜರಿ – ಬಜ್ಪೆ ಠಾಣೆ ಹೆಡ್​​ ಕಾನ್ಸ್‌ಟೇಬಲ್ ರಶೀದ್ ಸೇರಿ 56 ಸಿಬ್ಬಂದಿ ವರ್ಗಾವಣೆ!

Btv Kannada
Author: Btv Kannada

Read More