ಇಸ್ರೇಲ್​ನಲ್ಲಿ ಸಿಲುಕಿದ್ದ 18 ಮಂದಿ ಕನ್ನಡಿಗರು ಭಾರತಕ್ಕೆ ವಾಪಸ್ – ಇಂದು ಸಂಜೆ ಬೆಂಗಳೂರಿಗೆ ಲ್ಯಾಂಡ್​!

ಬೆಂಗಳೂರು : ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಲ್ಲಿ ಸಿಲುಕಿ ಕನ್ನಡಿಗರು ಪರಿತಪಿಸುತ್ತಾ ಇದ್ದರು. ಕೊನೆಗೂ ಇಸ್ರೇಲ್​​​ನಲ್ಲಿರುವ ಕನ್ನಡಿಗರು ಇಂದು ತಮ್ಮ ತಾಯ್ನಾಡಿಗೆ ಸೇಫ್​ ಆಗಿ ಮರಳಿದ್ದಾರೆ. ಇರಾನ್​ ಮತ್ತು ಇಸ್ರೇಲ್​ ನಡುವಿನ ತೀವ್ರಗೊಂಡ ಯುದ್ಧದಿಂದಾಗಿ ಇಸ್ರೇಲ್‌ನ ಟೆಲ್ ಅವೀವ್‌ನಲ್ಲಿ ಕಳೆದ ಆರು ದಿನಗಳಿಂದ ಸಿಲುಕಿದ್ದ 18 ಕನ್ನಡಿಗರ ತಂಡ ಇಂದು ಬೆಳಗ್ಗೆ ಮುಂಬೈಗೆ ಬಂದಿಳಿದೆ.

18 ಕನ್ನಡಿಗರ ತಂಡ ಬೆಳಗ್ಗೆಯ ಪ್ಲೈಟ್ ಕ್ಯಾನ್ಸಲ್ ಆದ ಹಿನ್ನೆಲೆ ಮುಂಬೈನಿಂದ ಮಧ್ಯಾಹ್ನ 3:30ರ ವಿಮಾನದಲ್ಲಿ ಬೆಂಗಳೂರಿನ ಪ್ರಯಾಣ ಬೆಳೆಸಿ ಸಂಜೆ 5 ಗಂಟೆಗೆ ಸುಮಾರಿಗೆ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಲಿದ್ದಾರೆ.

ಅಧ್ಯಯನ ಪ್ರವಾಸಕ್ಕಾಗಿ ಇಸ್ರೇಲ್‌ಗೆ ತೆರಳಿದ್ದ ಬಿಪ್ಯಾಕ್ (B-PAC) ಸಂಸ್ಥೆಯ 18 ಕನ್ನಡಿಗರ ನಿಯೋಗ, ಯುದ್ಧದ ಆತಂಕದ ನಡುವೆ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಇದೀಗ ಭಾರತೀಯ ರಾಯಭಾರ ಕಚೇರಿ ಮತ್ತು ಇಸ್ರೇಲ್ ಸರ್ಕಾರದ ಸಹಕಾರದಿಂದ ಈ ತಂಡವನ್ನು ಸುರಕ್ಷಿತವಾಗಿ ವಾಪಸ್ ಕರೆತರಲಾಗಿದೆ.

ಇಸ್ರೇಲ್​ ಮತ್ತು ಇರಾನ್​ ನಡುವಿನ ಯುದ್ಧದಲ್ಲಿ ಸಿಲುಕಿಕೊಂಡು ಕನ್ನಡಿಗರು ಆತಂಕದಲ್ಲಿದ್ದರು. ತಮ್ಮ ತಾಯ್ನಾಡಿಗೆ ಮರಳಲು ಸಾಧ್ಯವಾ? ಎಂದು ಚಿಂತೆಗೀಡಾಗಿದ್ದರು. ಇದೀಗ ಅವರನ್ನು ಸೇಫ್​ ಆಗಿ ತಾಯ್ನಾಡಿಗೆ ಕರೆತರುವಲ್ಲಿ ಯಶಸ್ಸು ಸಾಧಿಸಲಾಗಿದೆ.

ಇದನ್ನೂ ಓದಿ : ಮಂಗಳೂರು ಪೊಲೀಸ್‌ ಇಲಾಖೆಗೆ ಭರ್ಜರಿ ಸರ್ಜರಿ – ಬಜ್ಪೆ ಠಾಣೆ ಹೆಡ್​​ ಕಾನ್ಸ್‌ಟೇಬಲ್ ರಶೀದ್ ಸೇರಿ 56 ಸಿಬ್ಬಂದಿ ವರ್ಗಾವಣೆ!

Btv Kannada
Author: Btv Kannada

Read More