‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಕವಲುದಾರಿ’, ಹಾಗೂ ‘ಸಪ್ತಸಾಗರದಾಚೆ ಎಲ್ಲೋ’ ಚಿತ್ರದ ಡೈರೆಕ್ಟರ್ ಹೇಮಂತ್ ರಾವ್ ಮತ್ತೊಂದು ಚಿತ್ರ ಮಾಡುತ್ತಿದ್ದಾರೆ. ಅದೂ ಕೂಡ ಕುರುನಾಡ ಚಕ್ರವರ್ತಿ ಶಿವಣ್ಣ ಹಾಗೂ ಡಾಲಿ ಧನಂಜಯ್ ಜೊತೆ. ಇದೀಗ ಈ ಹೊಸ ಸಿನಿಮಾದ ಟೈಟಲ್ ಅನೌನ್ಸ್ ಆಗಿದ್ದು, ಟೈಟಲ್ ಆನಿಮೇಷನ್ ಮೋಷನ್ ಟೀಸರ್ ಸಮೇತ ಸಿನಿಮಾ ಘೋಷಣೆ ಆಗಿದೆ.
ಹೇಮಂತ್ ರಾವ್ ತಮ್ಮ ಮುಂದಿನ ಚಿತ್ರಕ್ಕೆ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಎಂಬ ಹೆಸರಿಟ್ಟಿದ್ದಾರೆ. ಈಗಾಗಲೇ ‘ಟಗರು’ ಹಾಗೂ ‘ಬೈರಾಗಿ’ ಸಿನಿಮಾಗಳಲ್ಲಿ ಶಿವಣ್ಣ ಹಾಗೂ ಧನಂಜಯ್ ಒಟ್ಟಿಗೆ ನಟಿಸಿದ್ದರು. ಇಬ್ಬರೂ ಎದುರಾಳಿಗಾಗಿಯೇ ಅಬ್ಬರಿಸಿದ್ದರು. ಇದೀಗ 70ರ ದಶಕದ ಶೈಲಿಯಲ್ಲಿ ಮೂಡಿಬರುತ್ತಿರುವ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರದಲ್ಲಿ ಅವರಿಬ್ಬರ ಪಾತ್ರಗಳು ಹೇಗಿರುತ್ತದೆ ಎನ್ನುವ ಕುತೂಹಲ ಫ್ಯಾನ್ಸ್‌ಗೆ ಮೂಡಿದೆ.
ಶಿವಣ್ಣ, ಧನಂಜಯ್ ಹಾಗೂ ವೈಶಾಕ್ ಜೆ ಫಿಲ್ಮ್ಸ್ ಜೊತೆ ನನ್ನ ಮುಂದಿನ ಸಿನಿಮಾ ‘666 ಆಪರೇಷನ್ ಡ್ರೀಮ್ ಥಿಯೇಟರ್’. ಶೀಘ್ರದಲ್ಲೇ ಶೂಟಿಂಗ್ ಪ್ರಾರಂಭವಾಗುತ್ತದೆ. ಬಹಳ ಉತ್ಸುಕನಾಗಿದ್ದೇನೆ” ಎಂದು ನಿರ್ದೇಶಕ ಹೇಮಂತ್ ರಾವ್ ಟ್ವೀಟ್ ಮಾಡಿದ್ದಾರೆ. ಟೈಟಲ್ ಟೀಸರ್ ಲಿಂಕ್ ಹಂಚಿಕೊಂಡಿದ್ದಾರೆ.
666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರಕ್ಕೆ ಚರಣ್ ರಾಜ್ ಟ್ಯೂನ್ ಹಾಕಲಿದ್ದಾರೆ. ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಸಿನಿಮಾ ನಿರ್ಮಾಣವಾಗಲಿದೆ. ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ ಮಾಡಲಿದ್ದಾರೆ. ವಿಶ್ವಾಸ್ ಕಾಶ್ಯಪ್ ಕಲಾ ನಿರ್ದೇಶನವನ್ನು ನಿರ್ವಹಿಸುತ್ತಿದ್ದು, ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ. ಮುಂದಿನ ವರ್ಷವೇ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.
ಇದನ್ನೂ ಓದಿ : ನಾಗರಾಜಪ್ಪ, ಲಕ್ಷ್ಮೀನಾರಾಯಣನ ದುಡ್ಡಿನ ಕೋಟೆ – ‘ಲೋಕಾ’ ಲಂಚಾವತಾರದಲ್ಲಿ ಸಿಕ್ಕ ಅಬಕಾರಿ ಇಲಾಖೆಯ ಡೀಲಿಂಗ್ ಹೇಗಿರುತ್ತೆ ಗೊತ್ತಾ?
