ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯದ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರ ಅನ್ನೋದು ಹಾಸು ಹೊದ್ದಾಗಿದೆ. ಅಬಕಾರಿ, ಸಾರಿಗೆ ಇಲಾಖೆ, ಪೊಲೀಸ್ ಸೇರಿ ಹಲವು ಇಲಾಖೆಗಳಲ್ಲಿ ಲಂಚಾವತಾರ ಖುಲ್ಲಾಂಖುಲ್ಲಾ ನಡೆಯುತ್ತಿದೆ. ಭ್ರಷ್ಟ ಅಧಿಕಾರಿಗಳಿಗೆ ಸರ್ಕಾರ ಹಾಗೂ ಲೋಕಾಯುಕ್ತದ ಭಯವೇ ಇಲ್ಲ. ಅದರಲ್ಲೂ ಸಾವಿರಾರು ಕೋಟಿ ವ್ಯವಹಾರ ನಡೆಸುವ ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದೀಗ ಮೊನ್ನೆಯಷ್ಟೇ ನಡೆದ ನಿವೃತ್ತ ಹೆಡ್ಕಾನ್ಸ್ಟೇಬಲ್ ನಿಂಗಪ್ಪ ಎಂಬುವವನನ್ನು ಖೆಡ್ಡಾಗೆ ಕೆಡವಿದ ಬಳಿಕ ಅಬಕಾರಿ ಇಲಾಖೆಯ ಲಂಚಾವತಾರ ಬಟಾಬಯಲಾಗಿದೆ.
ಲೋಕಾಯುಕ್ತ ಲಂಚಾವತಾರದಲ್ಲಿ ಸಿಕ್ಕ ಅಬಕಾರಿ ಇಲಾಖೆಯ ಡೀಲಿಂಗ್ ಹೇಗಿರುತ್ತೆ ಅನ್ನೋದ್ರ ಕಹಾನಿ ಈಗ ಇಂಚಿಂಚೂ ಬಯಲಾಗಿದೆ. ಯಾವ ವಾಮ ಮಾರ್ಗದಲ್ಲಿ ಅಬಕಾರಿ ಇಲಾಖೆಯಲ್ಲಿ ಲಂಚದ ಹುಂಡಿ ಇಟ್ಟಿರ್ತಾರೆ ಅನ್ನೋದು ಗೊತ್ತಾಗಿದೆ. 2004ರ ಬ್ಯಾಚ್ನ ಕೆಲ ಅಬಕಾರಿ ಸಬ್ ಇನ್ಸ್ ಪೆಕ್ಟರ್ಗಳ ಆಟವೇ ಅಂತಿಮವಾಗಿದ್ದು ಇದೀಗ ಸೂಪರಿಂಟೆಂಡೆಂಟ್ ಪೋಸ್ಟ್ನಿಂದ ಡೆಪ್ಯುಟಿ ಕಮಿಷನರ್ ಆಗೋಕೆ ತುದಿಗಾಲಲ್ಲಿ ನಿಂತಿದ್ದಾರೆ.
ಫೈನಾನ್ಸ್ ಡಿಪಾರ್ಟ್ಮೆಂಟ್ ಅನ್ನು ತಮ್ಮ ಕೈಗೊಂಬೆಯಾಗಿಸಿಕೊಂಡು ಪೋಸ್ಟಿಂಗ್ ಹಾಕಿಸಿಕೊಳ್ಳುತ್ತಿದ್ದಾರೆ. ಅದರಲ್ಲಿ ಸೂಪರಿಂಟೆಂಡೆಂಟ್ ಲಕ್ಷ್ಮೀನಾರಾಯಣ ಕೂಡ ಪ್ರಮುಖ. ಸೂಪರಿಂಟೆಂಡೆಂಟ್ ಲಕ್ಷ್ಮೀನಾರಾಯಣ 2004ರ ಬ್ಯಾಚ್ನವನಾಗಿದ್ದು, ಅಡಿಷನಲ್ ಕಮಿಷನರ್ ನಾಗರಾಜಪ್ಪನ ಬಲಗೈ ಬಂಟನಾಗಿದ್ದಾನೆ. ಅಬಕಾರಿ ಡೀಲಿಂಗ್ನಲ್ಲಿ ನಾಗರಾಜಪ್ಪನ ಎಲ್ಲಾ ವ್ಯವಹಾರದ ಹಿಂದೆ ಈ ಲಕ್ಷ್ಮೀನಾರಾಯಣನ ಕೈವಾಡ ಇದ್ದೇ ಇದೆ.
ಹಾಗಾದ್ರೆ ಅಬಕಾರಿ ಅಧಿಕಾರಿಗಳು ಹೇಗೆ ಲಂಚ ಪೀಕ್ತಾರೆ ಗೊತ್ತಾ? CL 7 ಲೈಸೆನ್ಸ್ (ಲೈಸೆನ್ಸ್ ಕಂಡೀಷನ್) ಹೆಸರಲ್ಲಿ ಸನ್ನದುದಾರರಿಂದ ವಸೂಲಿ ಮಾಡಲಾಗುತ್ತದೆ. CL7ರಲ್ಲಿ ಒಟ್ಟು 10 ರೂಂ ಹಾಗೂ ಲಾಡ್ಜಿಂಗ್ ಆಂಡ್ ಬೋರ್ಡಿಂಗ್ನಲ್ಲಿ ಇರಬೇಕು. 18 ನಿಯಮಗಳಲ್ಲಿ ಏನೇ ಉಲ್ಲಂಘನೆ ಇದ್ರೂ ಲೈಸೆನ್ಸ್ ಸಿಗುತ್ತೆ. ಅದಕ್ಕೆ 1 ಲಕ್ಷದಿಂದ 2 ಲಕ್ಷ ಲಂಚ ಕೊಡಲೇಬೇಕು. ಇನ್ನು ಅಬಕಾರಿ ಅಧಿಕಾರಿಗಳು ನಿಯಮ ಉಲ್ಲಂಘನೆ ಅಂತ ಅದೇ CL 7ಗೆ ಖಾಸಗಿ ವ್ಯಕ್ತಿಯಿಂದ RTI ಹಾಕಿಸ್ತಾರೆ.
ನಂತರ ಖಾಸಗಿ ವ್ಯಕ್ತಿ ಹಾಗೂ ಬಾರ್ ಮಾಲೀಕರನ್ನ ನೇರಾನೇರಾ ಕೂರಿಸಿ ಡೀಲ್ ಮುಗಿಸ್ತಾರೆ. ಅಲ್ಲೂ ವ್ಯವಹಾರದಲ್ಲಿ ಲಕ್ಷ ಲಕ್ಷ ಬಾರ್ ಮಾಲೀಕರಿಂದ ಪೀಕ್ತಾರೆ. ಇನ್ನು CL 2 ಬಾರ್ ಮಾಲೀಕರು ಪ್ರತೀ ವರ್ಷ ಲೈಸೆನ್ಸ್ ರಿನೀವಲ್ ಮಾಡೋಕೆ 50 ಸಾವಿರದಿಂದ 1 ಲಕ್ಷ ಲಂಚ ಕೊಡ್ತಾರೆ. ಇಲ್ದೇ ಹೋದ್ರೆ ಫೈಲ್ ಮೂವೇ ಆಗಲ್ಲ.
ಅದೇ ರೀತಿ CL 9ನಲ್ಲೂ ಅಬಕಾರಿ ಅಧಿಕಾರಿಗಳು ರಿನೀವಲ್ ಹೆಸರಲ್ಲಿ ಲಕ್ಷ ಲಕ್ಷ ಕೀಳ್ತಾರೆ. ಇನ್ನು ಮಿಲಿಟರಿ ಎಣ್ಣೆ ತಂದು ಮಾರೋರಿಗೂ ಫುಲ್ ಪರ್ಮೀಷನ್ ಕೊಟ್ಟು ಲಂಚ ಪಡೀತಾರೆ. ಹಾಗೆಯೇ ಕಾರ್ಯಕ್ರಮಕ್ಕೆಂದು ಒನ್ ಡೇ ಲೈಸೆನ್ಸ್ ಪಡೆಯೋರ ಬಳಿಯೂ ಲಕ್ಷ ಲಕ್ಷ ವಸೂಲಿ ಮಾಡ್ತಾರೆ.
ಯಾವ್ಯಾವ ಬಾರ್ ಲೈಸೆನ್ಸ್ ಹೋಲ್ಡರ್ಸ್ ರಿನೀವಲ್ಗೆ ಎಷ್ಟು ಕಟ್ತಾರೆ?
- CL 7 ಗೆ ಪ್ರತೀ ವರ್ಷ 7 ಲಕ್ಷ
- ಪ್ರತೀ ವರ್ಷ ಸ್ಟಾರ್ ಹೋಟೆಲ್ಗೆ 23 ಲಕ್ಷ
CL 9ಗೆ ಪ್ರತೀ ವರ್ಷ 13 ಲಕ್ಷ - CL 2 ಗೆ ಪ್ರತೀ ವರ್ಷ 9 ಲಕ್ಷ ಕಟ್ಬೇಕಾಗುತ್ತೆ
ಹೀಗೆ 2007ರಿಂದ ಸರ್ಕಾರಿ ಎಣ್ಣೆ ಪ್ಯಾಕೇಟ್ ಬ್ಯಾನ್ ಆಯ್ತೋ ಆಗ್ಲಿಂದಲೇ ಲಂಚಾವತಾರ ಹೆಚ್ಚಾಗಿದೆ. ಎಲ್ಲಾ ಅಡ್ಜಸ್ಟ್ಮೆಂಟ್ ಹೆಸರಲ್ಲೇ ಬಾರ್ ಮಾಲೀಕರನ್ನ ಸುಲಿಗೆ ಮಾಡೋಕೆ ಅಬಕಾರಿ ಅಧಿಕಾರಿಗಳು ಮುಂದಾಗಿದ್ದಾರೆ.
ಇದನ್ನೂ ಓದಿ : ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವ ಕಥಾಹಂದರ ನಮ್ಮ ‘X&Y’ ಸಿನಿಮಾದಲ್ಲಿದೆ – ಡೈರೆಕ್ಟರ್ ಸತ್ಯಪ್ರಕಾಶ್!
