ಬೆಂಗಳೂರನ್ನೇ ಬೆಚ್ಚಿಬೀಳಿಸುವ ಸುದ್ದಿ – ಖಾಸಗಿ ಅಪಾರ್ಟ್​ಮೆಂಟ್​ನಲ್ಲಿ ಅಸ್ಥಿಪಂಜರ ಪತ್ತೆ!

ಬೆಂಗಳೂರು : ಸಿಲಿಕಾನ್​ ಸಿಟಿ ಬೆಂಗಳೂರಿನ ಅಪಾರ್ಟ್​ಮೆಂಟ್​ವೊಂದರಲ್ಲಿ ಅಸ್ಥಿಪಂಜರದ ಪೀಸ್​ಗಳು ಪತ್ತೆಯಾಗಿದೆ. ಹೌದು.. ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಅಪಾರ್ಟ್​ಮೆಂಟ್​ನ​ ಇಂಗುಗುಂಡಿಯಲ್ಲಿ ಅಸ್ಥಿಪಂಜರದ ನಾಲ್ಕೈದು ಪೀಸ್​ಗಳು ಪತ್ತೆಯಾಗಿದ್ದು, ಸದ್ಯ ಸ್ಥಳೀಯರು ಈ ಘಟನೆಯಿಂದ ಬೆಚ್ಚಿಬಿದ್ದಿದ್ದಾರೆ.

2 ದಿನದ ಹಿಂದೆ ಖಾಸಗಿ ಅಪಾರ್ಟ್​ಮೆಂಟ್ ಇಂಗುಗುಂಡಿ ಸ್ಚಚ್ಛ ಮಾಡುವಾಗ ಅಸ್ಥಿಪಂಜರ ಪತ್ತೆಯಾಗಿದ್ದು, ಸದ್ಯ ಪೊಲೀಸರು ಅಸ್ಥಿಪಂಜರದ ಪೀಸ್​ಗಳನ್ನು ವಶಕ್ಕೆ  ಪಡೆದಿದ್ದಾರೆ. ಪತ್ತೆಯಾದ ಅಸ್ಥಿಪಂಜರ ಪೀಸ್​ಗಳನ್ನು FSLಗೆ ರವಾನೆ ಮಾಡಲಾಗಿದ್ದು, ಅಸ್ಥಿಪಂಜರ ಮನುಷ್ಯರದ್ದಾ? ಪ್ರಾಣಿಯದ್ದ ಎಂದು ಪರಿಶೀಲನೆ ನಡೆಸಲಾಗುತ್ತಿದೆ. ಘಟನಾ ಸಂಬಂಧ ಬೇಗೂರು ಪೊಲೀಸರು ಯುಡಿಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಬೇಗೂರು ಪ್ರದೇಶದ ನಿವಾಸಿಗಳನ್ನು ಭಯದ ವಾತಾವರಣ : ಈ ಘಟನೆಯಿಂದಾಗಿ ಬೇಗೂರು ಪ್ರದೇಶದ ನಿವಾಸಿಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. “ಅಪಾರ್ಟ್‌ಮೆಂಟ್‌ನ ಸಂಪ್‌ನಲ್ಲಿ ಅಸ್ತಿಪಂಜರ ಸಿಕ್ಕಿದ್ದು ಆಘಾತಕಾರಿಯಾಗಿದೆ. ಇದು ಯಾರದ್ದು, ಯಾವಾಗಿನಿಂದ ಇದೆ ಎಂಬುದು ಗೊತ್ತಿಲ್ಲ. ಪೊಲೀಸರು ಶೀಘ್ರವೇ ಸತ್ಯವನ್ನು ಬಯಲಿಗೆಳೆಯಲಿ,” ಎಂದು ಸ್ಥಳೀಯ ನಿವಾಸಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ

ಇದನ್ನೂ ಓದಿ : ‘ಆಪರೇಷನ್ ಸಿಂಧು’ ಯಶಸ್ವಿ ಕಾರ್ಯಾಚರಣೆ – ಸಂಘರ್ಷ ಪೀಡಿತ ಇರಾನ್‌ನಿಂದ ಭಾರತಕ್ಕೆ ಮರಳಿದ 110 ವಿದ್ಯಾರ್ಥಿಗಳು!

Btv Kannada
Author: Btv Kannada

Read More