ಖ್ಯಾತ ಗಾಯಕಿ ಮಂಜುಳಾ ಗುರುರಾಜ್​ ಅವರಿಂದ ಮಧುರ ಗಾನ ತರಬೇತಿ!

ಖ್ಯಾತ ಗಾಯಕಿ ಮಂಜುಳಾ ಗುರುರಾಜ್ ಅವರ ಸಾಧನಾ ಸಂಗೀತ ಶಾಲೆ ಮತ್ತು ಶುಕ್ರ ಸಭಾಂಗಣ ವತಿಯಿಂದ ಮಧುರ ಗಾನ ಒಂದರಿಂದ 12 ಸರಣಿಗಳಂತೆ ಪ್ರತಿ ತಿಂಗಳು ಗಾಯನ ವೇದಿಕೆ ನಡೆಸುತ್ತಿದೆ. ಖುದ್ದಾಗಿ ಮಂಜುಳಾ ಗುರುರಾಜ್ ಅವರು ತರಬೇತಿ ನೀಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ನಡೆಸಿಕೊಡುತ್ತಾರೆ.

ಇತ್ತೀಚೆಗೆ ಮಧುರ ಗಾನ ಎರಡು ಕಾರ್ಯಕ್ರಮದಲ್ಲಿ ಕವಿ ಡಾಕ್ಟರ್ ಎಚ್ಎಸ್ ವೆಂಕಟೇಶ್ ಮೂರ್ತಿ ಅವರಿಗೆ ಅರ್ಪಿಸಿದ ಕಾರ್ಯಕ್ರಮದಲ್ಲಿ ಮಂಜುಳಾ ಗುರುರಾಜ್​ರ ವಿಶೇಷ ಹೆಸರಲ್ಲಿ ಅವರು ಸಂಯೋಜಿಸಿರುವ ಭಾವ ಭಕ್ತಿ ಗೀತೆಗಳು ಹಾಗೂ ಅವರು ಹಾಡಿರುವ ಚಿತ್ರಗೀತೆಗಳನ್ನು ಪ್ರಸ್ತುತಪಡಿಸಲಾಯಿತು. ಶಾಲೆಯ ವಿದ್ಯಾರ್ಥಿಗಳಲ್ಲದೆ ಇತರ ಗಾಯಕರುಗಳಿಗೂ ಅವಕಾಶ ಕಲ್ಪಿಸಿ ತರಬೇತಿ ನೀಡಿ ಅರ್ಹತಾ ಪತ್ರ ವಿತರಿಸಲಾಯಿತು.

ಸುಮಾರು 43 ಗಾಯಕರು ಈ ವೇದಿಕೆಯಲ್ಲಿ ಸಂಭ್ರಮದಿಂದ ಹಾಡಿದರು ಇದೇ ರೀತಿ ಮಧುರ ಗಾನ ಸರಣಿ 3 ಮುಂದಿನ ತಿಂಗಳು ಜುಲೈ 13ರಂದು ನಡೆಯಲಿದೆ. ಆಸಕ್ತರು  ಹೆಸರನ್ನು ನೋಂದಾಯಿಸಿಕೊಳ್ಳಬಹುದು, ಶೇಖರ್ 9480425603 ಈ ದೂರವಾಣಿಗೆ ಸಂಪರ್ಕಿಸಬಹುದು. 12 ಸರಣಿಗಳ ನಂತರ ವಿಶೇಷ ಕಾರ್ಯಕ್ರಮದಲ್ಲಿ ಸಾಧಕ ಪ್ರಶಸ್ತಿಯನ್ನು ನೀಡಲು ಮಂಜುಳಾ ಗುರುರಾಜ್ ಅವರು ಯೋಜಿಸಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನ ರೀ ಅರ್ಬಿಟೇಷನ್ ಸೆಂಟರ್​ಗಳಲ್ಲಿ ಅವ್ಯವಸ್ಥೆ ಆರೋಪ – DySP ಸುಧೀರ್ ಹೆಗಡೆ ನೇತೃತ್ವದಲ್ಲಿ ಮಾನವ ಹಕ್ಕುಗಳ ಆಯೋಗ ರೇಡ್!

Btv Kannada
Author: Btv Kannada

Read More