ಮಂಗಳೂರು : ತೀವ್ರ ಆರೋಗ್ಯದ ತೊಂದರೆ ಅನುಭವಿಸುತ್ತಿದ್ದ ತಮಿಳಿನ ಖ್ಯಾತ ನಟ ವಿಶಾಲ್ ತುಳುನಾಡಿನ ದೈವದ ಮೊರೆ ಹೋಗಿದ್ದಾರೆ.

ಮಂಗಳೂರಿನ ಮುಲ್ಕಿ ಸಮೀಪದ ಪಕ್ಷಿಕೆರೆಯ ಹರಿಪಾದದಲ್ಲಿನ ಜಾರಂದಾಯ ದೈವದ ವಾರ್ಷಿಕ ನೇಮೋತ್ಸವಕ್ಕೆ ನಟ ವಿಶಾಲ್ ಕುಟುಂಬ ಸಮೇತ ಭೇಟಿ ನೀಡಿದ್ದಾರೆ. ಈ ವೇಳೆ ವಿಶಾಲ್ ದೈವಕ್ಕೆ ಮಲ್ಲಿಗೆ ಹೂವು ಅರ್ಪಿಸಿ ಬೇಡಿಕೊಂಡರು.

ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ವಿಶಾಲ್ ಜಾರಂದಾಯ ದೈವದ ಬಳಿ ಸಮಸ್ಯೆಯಿಂದ ಪಾರು ಮಾಡುವಂತೆ ತಲೆ ಭಾಗಿ ಬೇಡಿಕೊಂಡಿದ್ದಾರೆ. ನನ್ನ ಸಮಸ್ಯೆ ಬಗೆ ಹರಿದರೆ ಬರುವ ವರ್ಷದ ನೇಮೋತ್ಸವದ ವೇಳೆ ಕ್ಷೇತ್ರದಲ್ಲಿ ತುಲಾಭಾರ ಸೇವೆ ನೀಡುತ್ತೇನೆ ಎಂದು ಪ್ರಾರ್ಥಿಸಿದ್ದಾರೆ. ಇದಕ್ಕೆ ಕೈ ಸನ್ನೆ ಮೂಲಕ ಉತ್ತರಿಸಿದ ಜಾರಂದಾಯ ದೈವ ಕಣ್ಣೀರು ಹಾಕಬೇಡ, ನಾನಿದ್ದೇನೆ. ನಿನ್ನ ಆರೋಗ್ಯ ಸರಿಯಾಗಲಿದೆ ಎಂದು ದೈವ ಅಭಯ ನೀಡಿದೆ. ಮೂರು ಗಂಟೆಗಳ ಕಾಲ ನಟಿ ಜಾರಾಂದಾಯ ದೈವದ ನೇಮೋತ್ಸವ ನೋಡಿದ್ದಾರೆ.
ಇದನ್ನೂ ಓದಿ : http://ನೆಲಮಂಗಲದಲ್ಲಿ ಮಣ್ಣು ಮಾಫಿಯಾ ಸದ್ದು – PDO ಗಪ್ಚುಪ್.. ಗ್ರಾಮಸ್ಥರ ಆಕ್ರೋಶ!
Author: Btv Kannada
Post Views: 582







