ಅಡ್ವಾನ್ಸ್ ವಾಪಾಸ್ ಕೊಡದೆ ನಿರ್ಮಾಪಕಿಗೆ ವಂಚಿಸಿದ ಆರೋಪ – ನಟಿ ರಚಿತಾ ರಾಮ್‌ ವಿರುದ್ಧ ಮತ್ತೊಂದು ದೂರು!

ಬೆಂಗಳೂರು : ಸಂಜು ವೆಡ್ಸ್ ಗೀತಾ-2 ಸಿನಿಮಾ ಪ್ರಚಾರಕ್ಕೆ ನಟಿ ರಚಿತಾ ರಾಮ್ ಬಂದಿರಲಿಲ್ಲ ಎಂದು ಅವರ ವಿರುದ್ಧ ನಿರ್ದೇಶಕ ನಾಗಶೇಖರ್, ನಟ ಶ್ರೀನಗರ ಕಿಟ್ಟಿ ನಿನ್ನೆ ಫಿಲ್ಮ್‌ ಚೇಂಬರ್‌ಗೆ ದೂರು ದಾಖಲಿಸಿದ್ದರು. ಇದೀಗ ಮತ್ತೆ ಡಿಂಪಲ್ ಕ್ವೀನ್ ವಿರುದ್ಧ ಫಿಲ್ಮ್ ಚೇಂಬರ್​ನಲ್ಲಿ ಮತ್ತೊಂದು ದೂರು ದಾಖಲಾಗಿದೆ. ರಚಿತಾ ರಾಮ್ ಅಡ್ವಾನ್ಸ್ ವಾಪಾಸ್ ಕೊಡದೆ ನಿರ್ಮಾಪಕಿಗೆ ವಂಚಿಸಿರುವ ಆರೋಪ ಕೇಳಿ ಬಂದಿದೆ.

ಉಪ್ಪಿ ರುಪ್ಪಿ ಸಿನಿಮಾಗಾಗಿ ನೀಡಿದ್ದ ಅಡ್ವಾನ್ಸ್​ನ್ನು ಡಿಂಪಲ್ ಕ್ವೀನ್ ವಾಪಸ್‌ ನೀಡಿಲ್ಲ ಎಂಬ ಆರೋಪವಿದೆ. 8 ವರ್ಷಗಳ ಹಿಂದೆ ಉಪ್ಪಿ ಮತ್ತು ರಚಿತಾ ನಟನೆಯಲ್ಲಿ ಮೂಡಿ ಬರಬೇಕಿದ್ದ ಸಿನಿಮಾ ಇದಾಗಿತ್ತು. ಉಪ್ಪಿ ರುಪ್ಪಿ ಸಿನಿಮಾದಲ್ಲಿ ಉಪೇಂದ್ರ ಜೊತೆ ನಟಿಸಲು ನಟಿ ಒಪ್ಪಿಕೊಂಡಿದ್ದರು. ವಿಜಯಲಕ್ಷ್ಮಿ ಅರಸ್ ನಿರ್ಮಾಣದ ಈ ಸಿನಿಮಾಗೆ ಕೆ. ಮಾದೇಶ್ ನಿರ್ದೇಶನ ಮಾಡಬೇಕಿತ್ತು.

23 ಲಕ್ಷ ಸಂಭಾವನೆಗೆ ಕಮಿಟ್ ಆಗಿದ್ದ ರಚಿತಾ ರಾಮ್ ಮುಂಗಡವಾಗಿ 13 ಲಕ್ಷ ಅಡ್ವಾನ್ಸ್ ರೂಪದಲ್ಲಿ ಹಣ ಪಡೆದಿದ್ದರು. 2017 ರಲ್ಲಿ ಬ್ಯಾಂಕಾಕ್​ನಲ್ಲಿ ಶೂಟಿಂಗ್ ಪ್ಲಾನ್ ಕೂಡ ಚಿತ್ರತಂಡ ಮಾಡಿಕೊಂಡಿತ್ತು. ಬರುವುದಾಗಿ ಒಪ್ಪಿಕೊಂಡು ರಚಿತಾ ರಾಮ್​ಗೆ ಟಿಕೆಟ್ ಬುಕ್ ಮಾಡಿದ್ರು. ಆದರೆ ರಚಿತಾ ರಾಮ್‌ ಬರಲೇ ಇಲ್ಲ. 15 ದಿನಗಳ ಕಾಲ ಈಗ ಬರ್ತೀನಿ ಆಗ ಬರ್ತೀನಿ ಅಂತ ರಚಿತಾ ಆಟ ಆಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. 15 ದಿನ ಪ್ರತಿ ದಿನ ಟಿಕೆಟ್ ಬುಕ್ ಮಾಡಿ ಸೂಟ್ ರೂಮ್ ಬುಕ್ ಮಾಡಿಕೊಂಡು ನಿರ್ಮಾಪಕಿ ವಿಜಯಲಕ್ಷ್ಮಿ ಅರಸ್ ಕಾದಿದ್ದರು ಎನ್ನಲಾಗಿದೆ.

ಬಂದ ಜಾಗ ಸುಂಕ ವಿಲ್ಲ ಅಂತ ಹೀರೋ ಪೋರ್ಷನ್ ಶೂಟ್ ಮಾಡಿಕೊಂಡು ಚಿತ್ರತಂಡ ವಾಪಸ್‌ ಕೂಡ ಆಗಿತ್ತಂತೆ. ರಚಿತಾ ರಾಮ್ ನಿಂದ ಒಂದು ವರೆ ಕೋಟಿ ರೂ.ಯನ್ನ ನಿರ್ಮಾಪಕಿ ಕಳೆದುಕೊಂಡಿದ್ದಾರೆ. ಒಂದು ದಿನ ಮಾತ್ರ ಮೈಸೂರ್‌ನಲ್ಲಿ ಶೂಟಿಂಗ್‌ಗೆ ರಚಿತಾ ರಾಮ್‌ ಭಾಗಿಯಾಗಿದ್ದರು. ರಚಿತಾ ಕಾರಣದಿಂದ ಸಿನಿಮಾ ಅರ್ಧಕ್ಕೆ ನಿಂತು ಹೋಗಿದೆ ಎನ್ನಲಾಗಿದೆ. 35 ಪರ್ಸೆಂಟ್ ಕಂಪ್ಲೀಟ್ ಆಗಿ ಸಿನಿಮಾ ನಿಂತು ಹೋಗಿದೆ. ಹಣವು ಇಲ್ಲ ಸಿನಿಮಾನು ಕಂಪ್ಲೀಟ್ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಅವತ್ತಿನಿಂದ ಸಂಪರ್ಕಕ್ಕೆ ಸಿಗದೇ ನಟಿ ಸತಾಯಿಸುತ್ತಿದ್ದಾರೆ.

ಕೊನೆಯದಾಗಿ ಫಿಲ್ಮ್ ಚೇಂಬರ್​ಗೆ ನಿರ್ಮಾಪಕಿ ದೂರು ನೀಡಿದ್ದಾರೆ. ಈಗಲಾದ್ರೂ ರಚಿತಾ ಹಣ ಹಿಂದಿರುಗಿಸುತ್ತಾರ ಅನ್ನೋದನ್ನು ಕಾದು ನೋಡ್ಬೇಕು. 2 ತಿಂಗಳ ಹಿಂದೆ ಫಿಲ್ಮ್ ಚೇಂಬರ್​ನಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ : ಶಾಲೆಯ 2ನೇ ಮಹಡಿಯಿಂದ ತಲೆ ತಿರುಗಿ ಬಿದ್ದ 10ನೇ ತರಗತಿ ವಿದ್ಯಾರ್ಥಿನಿ – ಆಸ್ಪತ್ರೆಗೆ ದಾಖಲು!

Btv Kannada
Author: Btv Kannada

Read More