ಮೈಸೂರು : ನಗರದ ಹೊರ ವಲಯದಲ್ಲಿರುವ ಜ್ಞಾನಸರೋವರ ಇಂಟರ್ನ್ಯಾಷನಲ್ ಸ್ಕೂಲ್ಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದೆ. ಬನ್ನೂರು ರಸ್ತೆಯಲ್ಲಿರುವ ಐ.ಸಿ.ಎಸ್.ಇ. ಮಾನ್ಯತೆಯ ಜ್ಞಾನ ಸರೋವರ ಸ್ಕೂಲ್ಗೆ ಅಪರಿಚಿತ ವ್ಯಕ್ತಿ ಇಮೇಲ್ ಕಳಿಸಿದ್ದು, ಬಾಂಬ್ ಸ್ಫೋಟಿಸುವುದಾಗಿ ಇಮೇಲ್ನಲ್ಲಿ ಬರೆಯಲಾಗಿದೆ.
ಶಾಲೆಯಲ್ಲಿ ಬಾಂಬ್ ಇಟ್ಟಿದ್ದೇವೆ. ಅದು ಯಾವುದೇ ಕ್ಷಣ ಸ್ಫೋಟಗೊಳ್ಳಲಿದೆ ಎಂದು ಬೆದರಿಕೆ ಹಾಕಲಾಗಿದೆ. ಬಾಂಬ್ ಬೆದರಿಕೆ ಮೇಲ್ ಬಂದಿರುವುದನ್ನು ಶಾಲೆ ಅಧ್ಯಕ್ಷ ಸುಧಾಕರಶೆಟ್ಟಿ ಖಚಿಪಡಿಸಿದ್ದಾರೆ. ಇಮೇಲ್‌ನ ತಾಂತ್ರಿಕ ತನಿಖೆಗಾಗಿ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸದ್ಯ ಮೇಲ್ ಐಡಿ ಪತ್ತೆಹಚ್ಚುವ ಪ್ರಕ್ರಿಯೆ ನಡೆಯುತ್ತಿದೆ.
ಇದನ್ನೂ ಓದಿ ; ಲೋಕಾಯುಕ್ತ ಹೆಸರಲ್ಲಿ ಹಣ ವಸೂಲಿ ಪ್ರಕರಣ - ತನಿಖೆಗೆ ಹೈಕೋರ್ಟ್ ತಡೆ!

Author: Btv Kannada
Post Views: 173