ಡೇವಿಲ್ ಚಿತ್ರೀಕರಣದ ಬಿಡುವು ಮಾಡಿಕೊಂಡು ದೇವರ ಅನುಗ್ರಹ ಪಡೆಯಲು ನಟ ದರ್ಶನ್ ಟೆಂಪನ್ ರನ್ ಶುರು ಮಾಡಿದ್ದಾರೆ. ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಕೊಟ್ಟಿಯೂರು ಶಿವನ ದೇವಸ್ಥಾನಕ್ಕೆ ನಟ ದರ್ಶನ್ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದಾರೆ.
ಕೇರಳದ ಕಣ್ಣೂರು ಸಮೀಪದಲ್ಲಿರುವ ಕೊಟ್ಟಿಯೂರು ಶಿವ ದೇವಸ್ಥಾನಕ್ಕೆ ನಟ ದರ್ಶನ್, ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ ಕೂಡ ಸಾಥ್ ನೀಡಿದ್ದಾರೆ. ಈ ವೇಳೆ ಶಿವನಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ.
ನಟ ದರ್ಶನ್ ಕೆಲ ತಿಂಗಳ ಹಿಂದೆ ಕಣ್ಣೂರು ಬಳಿಯ ಶ್ರೀಕ್ಷೇತ್ರ ಮಡಾಯಿ ಕಾವು ಶ್ರೀಭಗವತೀ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಕುಟುಂಬ ಸಮೇತರಾಗಿ ಶತ್ರು ಸಂಹಾರ ಯಾಗ ಮಾಡಿಸಿ, ಪೂಜೆ ಸಲ್ಲಿಸಿದ್ದರು.
ಕೇರಳದ ಕೊಟ್ಟಿಯೂರು ಶಿವ ದೇವಾಲಯವು ಭಾರತದ ಅತ್ಯಂತ ಪ್ರಾಚೀನ ಮತ್ತು ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಒಂದಾಗಿದೆ. ಪ್ರತಿವರ್ಷವೂ ವೈಶಾಖ ಮಾಹೋತ್ಸವದ ಸಂದರ್ಭದಲ್ಲಿ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ. ಈ ದೇವಸ್ಥಾನವು ದಕ್ಷಿಣ ಕಾಶಿ ಎಂದು ಕರೆಯಲ್ಪಡುವುದರಿಂದ ಅದರ ಧಾರ್ಮಿಕ ಮಹತ್ವವು ಅಪಾರವಾಗಿದೆ.
ಇಲ್ಲಿ ನಡೆಯುವ ಜಾತ್ರೆ “ಕೊಟ್ಟಿಯೂರು ಉತ್ಸವ” ಎಂಬ ಹೆಸರಿನಿಂದ ಪ್ರಸಿದ್ಧವಾಗಿದ್ದು, ಇದು ದಕ್ಷಿಣ ಭಾರತದ ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಯುವ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿದೆ. ಪಾರ್ವತಿಯ ತಪಸ್ಸು, ದಕ್ಷಿಣ ಯಾಗ ಮತ್ತು ಶೈವ ಪರಂಪರೆಯ ಕಥೆಗಳ ಸ್ಮರಣಾರ್ಥವಾಗಿ ಈ ಉತ್ಸವ ಆಚರಿಸಲಾಗುತ್ತದೆ.
ಇದನ್ನೂ ಓದಿ : ಉದ್ಯಮಿಗಳಿಗೆ ED ಶಾಕ್ – ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ರೇಡ್!
