ರಾಜ್ಯದಲ್ಲಿ ಮುಂಗಾರು ಚುರುಕು – KRS ಡ್ಯಾಂ ಒಳಹರಿವಿನಲ್ಲಿ‌ ಭಾರೀ ಹೆಚ್ಚಳ.. ಈಗ ಎಷ್ಟಿದೆ ನೀರಿನ ಮಟ್ಟ?

ಮಂಡ್ಯ : ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಅಬ್ಬರ ಜೋರಾಗಿರುವ ಹಿನ್ನೆಲೆ ಕೆಆರ್‌ಎಸ್ (KRS) ಆಣೆಕಟ್ಟೆಯಲ್ಲಿ ಒಳಹರಿವು ಹೆಚ್ಚಾಗಿದೆ. ಹೌದು.. ಮಂಡ್ಯದ ಕೆಲವು ಭಾಗಗಳಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಹಳೆ ಮೈಸೂರು ಭಾಗದ ಜೀವನಾಡಿಯಾಗಿರುವ ಮಂಡ್ಯ  ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂನಲ್ಲಿ ಒಳಹರಿವು ಹೆಚ್ಚಳವಾಗಿದೆ.

ಕಳೆದ ಹತ್ತು ದಿನಗಳಿಂದ ಕೆಆರ್‌ಎಸ್ ಡ್ಯಾಂಗೆ 2 ಸಾವಿರ ಕ್ಯೂಸೆಕ್ ನೀರು ಬರುತ್ತಿತ್ತು. ಸೋಮವಾರದಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾಗಿದೆ. ಹೀಗಾಗಿ ಕೆಆರ್‌ಎಸ್ ಒಳ ಹರಿವಿನ ಪ್ರಮಾಣ 30 ಸಾವಿರ ಕ್ಯೂಸೆಕ್​ಗೆ ಏರಿಕೆಯಾಗಿದೆ.

ಈ ಮೂಲಕ KRS ಡ್ಯಾಂ ನೀರಿನ ಮಟ್ಟ ಕೂಡ 114 ಅಡಿಗೆ ಏರಿಕೆಯಾಗಿದೆ.  KRS ಜಲಾಶಯ ಭರ್ತಿಗೆ ಇನ್ನು ಕೇವಲ 10 ಅಡಿ ಬಾಕಿ ಉಳಿದಿದೆ.  ಮಳೆಯಿಂದಾಗಿ ಒಳ ಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

KRS ಡ್ಯಾಂ‌ನ ಇಂದಿನ ನೀರಿನ‌ ಮಟ್ಟದ ವಿವರ

ಗರಿಷ್ಟ ನೀರಿನ ಮಟ್ಟ: 124 80 ಅಡಿ
ಇಂದಿನ ನೀರಿನ ಮಟ್ಟ: 113.25 ಅಡಿ
ಡ್ಯಾಂ ನ ಒಳಹರಿವು : 31368 ಕ್ಯೂಸೆಕ್.
ಡ್ಯಾಂನ ಹೊರ ಹರಿವು : 1024 ಕ್ಯೂಸೆಕ್.
ಪ್ರಸ್ತುತ ಸಂಗ್ರಹ:35.118 TMC
ಗರಿಷ್ಟ ನೀರಿನ‌ ಸಂಗ್ರಹ: 49.50 TMC

ಇದನ್ನೂ ಓದಿ : 1 ಲಕ್ಷ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ‘ಲೋಕಾ’ ಬಲೆಗೆ ಬಿದ್ದ ಕಾಳಗಿ SDA ಶರಣಪ್ಪ!

Btv Kannada
Author: Btv Kannada

Read More