ಬಿಗ್​ಬಾಸ್ ರಜತ್ ಮೇಲೆ ಸಿಟ್ಟಾದ್ರಾ ಸಾನ್ವಿ ಸುದೀಪ್?

ಬಿಗ್ ಬಾಸ್ ಸೀಸನ್ 11ರ ವೈಲ್ಡ್‌ ಕಾರ್ಡ್‌ ಸ್ಪರ್ಧಿ ರಜತ್ ಕಿಶನ್ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಸುದೀಪ್‌ ಅವರ ಮಗಳು ಸಾನ್ವಿ ಜೊತೆ ರಜತ್ ಕಿರಿಕ್‌ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸಖತ್‌ ವೈರಲ್‌ ಆಗುತ್ತಿದೆ.

ಈ ವರ್ಷ ಸಿಸಿಎಲ್‌ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದೆ. ಹೀಗಾಗಿ ಸುದೀಪ್ ಪುತ್ರಿ ಸಾನ್ವಿ ಸೇರಿದಂತೆ ಹಲವು ಸೆಲೆಬ್ರಿಟಿಯರು ಭಾಗಿಯಾಗಿದ್ದಾರೆ. ಆಗ ಬಿಗ್ ಬಾಸ್ ರಜತ್ ಕಿಶನ್ ಕೂಡ ಇದ್ದರು. ನಟಿ ದೀಪಿಕಾ ದಾಸ್, ಅದ್ವಿತಿ ಶೆಟ್ಟಿ, ಅಶ್ವಿತಿ ಶೆಟ್ಟಿ ಮತ್ತು ಸಾನ್ವಿ ಫೋಟೋ ಕ್ಲಿಕ್ ಮಾಡಿಕೊಳ್ಳುತ್ತಿದ್ದರು. ಆಗ ಹಿಂದಿನಿಂತ ರಜತ್ ‘V’ ಚಿನ್ನೆ ಹಿಡಿದು ಪೋಸ್ ಕೊಡುತ್ತಾರೆ. ಆಗ ಸಾನ್ವಿ ಅವರು ಸ್ವಲ್ಪ ಗರಂ ಆಗಿರುವುದು ವಿಡಿಯೋದಲ್ಲಿದೆ.

ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿರುವಾಗ ತಮಾಷೆ ಮಾಡಲು ಹೋಗಿ ಸಾನ್ವಿ ಕೆಂಗಣ್ಣಿಗೆ ಗುರಿಯಾದರು ಎಂದು ಟ್ರೋಲ್‌ ಕೂಡ ಆಗುತ್ತಿದೆ.

ವೈರಲ್ ಆಗುತ್ತಿರುವ ಫೋಟೋ ಒಂದಕ್ಕೆ ನಟಿ ಅದ್ವಿತಿ ಶೆಟ್ಟಿ ಕಾಮೆಂಟ್ ಮಾಡಿದ್ದಾರೆ. ‘ಎಲ್ಲರೂ ಚಿಲ್ ಮಾಡಿ ಇದು ತಮಾಷೆ ಮಾಡಿರುವುದು. ಸಾನ್ವಿ ಅವರು ಸುಮ್ಮನೆ ರಜತ್‌ಗೆ ರೇಗಿಸುತ್ತಾ ಇದ್ದರು ಅಷ್ಟೇ. ಏಕೆಂದರೆ ರಜತ್ ಕೂಡ ಅಷ್ಟೇ ತಮಾಷೆ ಮಾಡುತ್ತಾರೆ. ವಿಡಿಯೋ ನೋಡಿ ಒಬ್ಬ ವ್ಯಕ್ತಿಯನ್ನು ಅಳಿಯಬೇಡಿ. ಅವರೆಲ್ಲಾ ಒಂದು ಫ್ಯಾಮಿಲಿ ರೀತಿ ಇದ್ದಾರೆ. ಸಾನ್ವಿ ಮತ್ತು ರಜತ್ ಇಬ್ರು ತುಂಬಾ ಸ್ವೀಟ್’ ಎಂದು ಕಾಮೆಂಟ್ ಮಾಡಿದ್ದಾರೆ. 

ಇದನ್ನೂ ಓದಿ : http://ಮಲೈಕಾ ಬರ್ತ್​ಡೇಗೆ ‘ವಿದ್ಯಾಪತಿ’ ಫಸ್ಟ್ ಝಲಕ್ ರಿಲೀಸ್.. ಸೂಪರ್ ಸ್ಟಾರ್ ವಿದ್ಯಾ ನಾಗಭೂಷಣ್​ಗೆ ಜೋಡಿ!

Btv Kannada
Author: Btv Kannada

Read More