ನೆಲಮಂಗಲ : ಇತ್ತೀಚಿಗೆ ರಾಜ್ಯದಲ್ಲಿ ಮಣ್ಣು ಗಣಿಗಾರಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ನೆಲಮಂಗಲದ ಅರೇಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಣ್ಣು ಮಾಫಿಯಾ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಪಿಡಿಓ ಕೃಪಾಕಟಾಕ್ಷದಲ್ಲಿ ಮಣ್ಣು ಮಾಫಿಯಾ ನಡೆಯುತ್ತಿದೆ ಅನ್ನೋ ಅನುಮಾನ ಶುರುವಾಗಿದ್ದು, ದಾಸನಪುರ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ನಡೆಸಿದ್ದಾರೆ ಎನ್ನಲಾಗುತ್ತಿದೆ. ನಿರಾಶ್ರಿತರಿಗೆ ಹಕ್ಕು ಪತ್ರ ಹಂಚುವ ನೆಪದಲ್ಲಿ ಮಣ್ಣು ಲೂಟಿ ಮಾಡಿದ್ದಾರೆ.
ಈ ಅಕ್ರಮ ಸಂಬಂಧ ಸರ್ಕಾರದ ಆದೇಶಕ್ಕೂ ಕೇರ್ ಎನ್ನದ ತಾಲೂಕು ಪಂಚಾಯಿತಿ ಪಿಡಿಓ ರವೀಂದ್ರ ಅವರು ಕೂಡ ಸಹಕರಿಸಿದ್ದಾರೆ ಅನ್ನೋ ಅನುಮಾನ ಗ್ರಾಮಸ್ಥರಲ್ಲಿ ಹುಟ್ಟಿಕೊಂಡಿದೆ. ನೂರಾರು ಲೋಡು ಮಣ್ಣು ಅಕ್ರಮವಾಗಿ ಸಾಗಾಟ ಮಾಡಿದ್ರು ಅಧಿಕಾರಿಗಳು ಗಪ್ ಚುಪ್ ಆಗಿದ್ದಾರೆ. ಹಾಗಾಗಿ ಗ್ರಾಮಸ್ಥರು ಪಿಡಿಓ ರವೀಂದ್ರ ವಿರುದ್ದ ಧಿಕ್ಕಾರ ಕೂಗಿ ಪ್ರತಿಭಟಿಸಿದ್ದಾರೆ.
ಇದನ್ನೂ ಓದಿ : http://ಮಲೈಕಾ ಬರ್ತ್ಡೇಗೆ ‘ವಿದ್ಯಾಪತಿ’ ಫಸ್ಟ್ ಝಲಕ್ ರಿಲೀಸ್.. ಸೂಪರ್ ಸ್ಟಾರ್ ವಿದ್ಯಾ ನಾಗಭೂಷಣ್ಗೆ ಜೋಡಿ!







