ಚಿಕ್ಕಮಗಳೂರು : ಮಲೆನಾಡಲ್ಲಿ ಗಾಳಿ-ಮಳೆ ಮುಂದುವರೆದಿದ್ದು, ಕಲ್ಲತ್ತಗಿರಿ ಫಾಲ್ಸ್‌ಗೆ ಬಂದಿದ್ದ ಪ್ರವಾಸಿಗರ ಕಾರಿನ ಮೇಲೆ ಬೃಹತ್ ಮರವೊಂದು ಬಿದ್ದಿದ್ದು, ಕಾರು ಸಂಪೂರ್ಣ ಜಖಂ ಆಗಿದೆ.
ತರೀಕೆರೆ ತಾಲೂಕಿನ ಕಲ್ಲತ್ತಿಗಿರಿ ಫಾಲ್ಸ್‌ಗೆ ಪ್ರವಾಸಿಗರು ಬಂದಿದ್ದರು. ಈ ವೇಳೆ ಕಾರು ನಿಲ್ಲಿಸಿ ಫಾಲ್ಸ್ ನೋಡಲು ತೆರಳಿದ್ದಾಗ ಗಾಳಿ ಮಳೆಗೆ ಮರ ಕಾರಿನ ಮೇಲೆ ಬಿದ್ದಿದೆ. ಕಾರಿನಲ್ಲಿ ಯಾರೂ ಇಲ್ಲದೇ ಇದ್ದಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಸ್ಥಳಕ್ಕೆ ಲಿಂಗದಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : “ಪೆದರಾಯುಡು” ಚಿತ್ರಕ್ಕೆ 30 ವರ್ಷದ ಸಂಭ್ರಮ – ವಿಷ್ಣು ಮಂಚು ಅಭಿನಯದ “ಕಣ್ಣಪ್ಪ” ಸಿನಿಮಾ ವೀಕ್ಷಿಸಿದ ಸೂಪರ್ ಸ್ಟಾರ್ ರಜನಿಕಾಂತ್!

Author: Btv Kannada
Post Views: 227