ರಾಜ್ಯ ಗುಪ್ತಚರ ಇಲಾಖೆಯ ನೂತನ ಡಿಐಜಿಯಾಗಿ IPS ಅಧಿಕಾರಿ ಆರ್. ಚೇತನ್ ನೇಮಕ!

ಬೆಂಗಳೂರು : ರಾಜ್ಯ ಸರ್ಕಾರದಲ್ಲಿ IPS ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರೆದಿದೆ. ಇದೀಗ ರಾಜ್ಯ ಗುಪ್ತಚರ ಇಲಾಖೆಗೆ ಹೊಸ ಡಿಐಜಿ ಅವರನ್ನು ನೇಮಕ ಮಾಡಲಾಗಿದೆ.

ರಾಜ್ಯ ಗುಪ್ತಚರ ಇಲಾಖೆಯ ನೂತನ ಡಿಐಜಿಯಾಗಿ IPS ಅಧಿಕಾರಿ R. ಚೇತನ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. R. ಚೇತನ್ ಅವರು 2010ರ ಬ್ಯಾಚ್​ನ ಕರ್ನಾಟಕ ಕೇಡರ್​ನ IPS ಅಧಿಕಾರಿಯಾಗಿದ್ದು, ಅವರನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ದಿಢೀರ್ ವರ್ಗಾವಣೆ ಮಾಡಲಾಗಿದೆ.

ಈ ಹಿಂದೆ ಆರ್. ಚೇತನ್ ಅವರು ಮೈಸೂರು ಹಾಗೂ ಕಲಬುರಗಿ ನಗರದ ಪೊಲೀಸ್ ಆಯುಕ್ತರಾಗಿಯೂ ಕಾರ್ಯ ನಿರ್ವಹಿಸಿದ್ದರು. 

ಇದನ್ನೂ ಓದಿ : ಬಾಂಬ್ ಬೆದರಿಕೆ : ಕೊಚ್ಚಿಯಿಂದ ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನ ಎಮರ್ಜೆನ್ಸಿ ಲ್ಯಾಂಡಿಂಗ್!

Btv Kannada
Author: Btv Kannada

Read More