ಕೊಚ್ಚಿ : ಕೊಚ್ಚಿಯಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನವೊಂದಕ್ಕೆ ಬಾಂಬ್ ಬೆದರಿಕೆಯ ಕರೆ ಬಂದ ಹಿನ್ನೆಲೆಯಲ್ಲಿ, ವಿಮಾನವನ್ನು ನಾಗ್ಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ.
6E2706 ವಿಮಾನವು ಬೆಳಗ್ಗೆ 9.20ಕ್ಕೆ ಕೊಚ್ಚಿ ವಿಮಾನ ನಿಲ್ದಾಣದಿಂದ ಹೊರಟು ಮಧ್ಯಾಹ್ನ 12.35ಕ್ಕೆ ದೆಹಲಿಯಲ್ಲಿ ಇಳಿಯಬೇಕಿತ್ತು. ಬಾಂಬ್ ಕರೆ ಬಂದ ಹಿನ್ನೆಲೆ ಪ್ರಯಾಣಿಕರನ್ನು ನಾಗ್ಪುರದಲ್ಲಿ ಸುರಕ್ಷಿತವಾಗಿ ಇಳಿಸಲಾಗಿದ್ದು ತನಿಖೆ ನಡೆಯುತ್ತಿದೆ.
ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನವು ಮಂಗಳವಾರ ಬೆಳಗ್ಗೆ ಬಾಂಬ್ ಬೆದರಿಕೆ ಕರೆ ಸ್ವೀಕರಿಸಿತ್ತು. ವಿಮಾನ ಸಂಖ್ಯೆಯನ್ನು ಕೂಡ ಉಲ್ಲೇಖಿಸಲಾಗಿದೆ. ಈ ಬೆದರಿಕೆಯು ನಿರ್ದಿಷ್ಟ ವಿವರಗಳನ್ನು ಒಳಗೊಂಡಿದ್ದರಿಂದ ಗಂಭೀರವಾಗಿ ಪರಿಗಣಿಸಿ, ತಕ್ಷಣವೇ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು (SOP) ಅನುಸರಿಸಿ ಸಭೆ ಕರೆಯಲಾಯಿತು. ವಿಮಾನವನ್ನು ನಾಗ್ಪುರಕ್ಕೆ ತಿರುಗಿಸಲು ನಿರ್ಧರಿಸಲಾಯಿತು, ಮತ್ತು ಅದು ಸುರಕ್ಷಿತವಾಗಿ ಇಳಿಯಿತು. ಪೊಲೀಸ್ ಮತ್ತು ಅಗ್ನಿಶಾಮಕ ದಳದ ತಂಡಗಳು ವಿಮಾನದ ತಪಾಸಣೆಗೆ ಧಾವಿಸಿ ಪರಿಶೀಲನೆ ಮಾಡಿದರು. ಇದುವರೆಗೆ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಪರಪ್ಪನ ಅಗ್ರಹಾರ ಜೈಲಿನ ಮೇಲೆ CCB ರೇಡ್ – ನಿಷೇಧಿತ ವಸ್ತುಗಳು ಪತ್ತೆ!
