ಒಂದು ತಿಂಗಳಾದ್ರೂ ಹೈಕೋರ್ಟ್ ಸೂಚನೆಗೆ ಸೋನು ನಿಗಮ್‌ ಡೋಂಟ್‌ ಕೇರ್‌ – ಪೊಲೀಸರನ್ನೇ ಸತಾಯಿಸ್ತಿರೋ ಗಾಯಕ!

ಬೆಂಗಳೂರು : ಕನ್ನಡ ಭಾಷೆಗೆ ಅವಹೇಳನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸೂಚನೆಗೂ ಗಾಯಕ ಸೋನು ನಿಗಮ್​​ ಕೇರ್ ಮಾಡದೇ ಇರುವಂತಹ ಸ್ಥಿತಿ ನಿರ್ಮಾಣವಾಗಿದೆ. ಘಟನೆಯಾಗಿ ಒಂದು ತಿಂಗಳು ಕಳೆಯುತ್ತಾ ಬಂದರು ಇನ್ನೂ ಕೂಡ ಸೋನು ನಿಗಮ್‌ ಹೇಳಿಕೆ ಕೊಟ್ಟಿಲ್ಲ.
ಈ ಪ್ರಕರಣದಲ್ಲಿ ಗಾಯಕನ ವಿರುದ್ದ ಕೋರ್ಟ್‌ ಬಲವಂತದ ಕ್ರಮ ಬೇಡ ತನಿಖೆಗೆ ಸಹಕರಿಸಿ ಎಂದಿತ್ತು. ಆದ್ರೆ ಇದುವರೆಗೂ ಪೊಲೀಸರ ಸಂಪರ್ಕಕ್ಕೆ ಸೋನು ನಿಗಮ್‌ ಸಿಕ್ಕಿಲ್ಲ. ಸೋನು ಬಳಿಯೇ ತೆರಳಿ ಹೇಳಿಕೆ ದಾಖಲಿಸಿಕೊಳ್ಳಲು ಹೈಕೋರ್ಟ್‌ ಸೂಚಿಸಿತ್ತು. ಆದರೆ ಭೇಟಿಗೆ ಸಮಯ ಕೊಡದೇ ಪೊಲೀಸರನ್ನು ಸೋನು ನಿಗಮ್‌ ಸತಾಯಿಸುತ್ತಿದ್ದಾರೆ ಎನ್ನಲಾಗಿದೆ.

ಯಾವಾಗ ಕರೆ ಮಾಡಿದರೂ ಸಮಯ ಕೋಡೊದಾಗಿ ಗಾಯಕ ಸೋನು ನಿಗಮ್​ ಸತಾಯಿಸುತ್ತಿದ್ದಾರೆ. ಸದ್ಯ ಇನ್ನೆರೆಡು ದಿನ ಕಾದು ನೋಡಲು ಪೊಲೀಸರ ಚಿಂತನೆ ಮಾಡುತ್ತಿದ್ದು, ಸಮಯ ಕೊಟ್ಟಿಲ್ಲ ಅಂದ್ರೆ ಈ ಬಗ್ಗೆ ಕೋರ್ಟ್ ಗಮನಕ್ಕೆ ತರಲು ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಪ್ರಕರಣದ ಹಿನ್ನೆಲೆ : ಬೆಂಗಳೂರಿನಲ್ಲಿ ಸಂಗೀತ ಕಾರ್ಯಕ್ರಮ ನಡೆಸುವಾಗ ಗಾಯಕ ಸೋನು ನಿಗಮ್​ ಬಳಿ ಕನ್ನಡ ಹಾಡು ಹಾಡುವಂತೆ ಅಭಿಮಾನಿಗಳು ಒತ್ತಾಯಿಸಿದ್ರು. ಅದಕ್ಕೆ ಸೋನು ನಿಗಮ್ ಅವರು. ‘ಕನ್ನಡ ಕನ್ನಡ ಎನ್ನುವುದಕ್ಕೇ ಪಹಲ್ಗಾಮ್ ಘಟನೆ ನಡೆದಿದ್ದು’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆ ಸೋನು ನಿಗಮ್ ಕ್ಷಮೆಯಾಚಿಸಿದ್ರು. ಸದ್ಯ ಈ ಪ್ರಕರಣ ಕೋರ್ಟ್​ ಕಟಕಟೆಯಲ್ಲಿದೆ.

ಗಾಯಕರು, ಕಾರ್ಯಕ್ರಮ ನಿಯೋಜಿಸುವವರಿಗೆ ಇನ್ಮುಂದೆ ಖಡಕ್ ಕಂಡೀಷನ್ ಅಪ್ಲೈ : ಇನ್ಮುಂದೆ ಕರ್ನಾಟಕಕ್ಕೆ ಬರುವ ಗಾಯಕರು, ಕಾರ್ಯಕ್ರಮ ನಿಯೋಜಿಸುವವರಿಗೆ ಬೆಂಗಳೂರು ಪೊಲೀಸರು ಖಡಕ್ ಸೂಚನೆ ನೀಡಲು ಮುಂದಾಗಿದ್ದು, ಖಡಕ್ ಕಂಡೀಷನ್ ಅಪ್ಲೈ ಎಂದಿದ್ದಾರೆ. ಯಾವುದೇ ರಾಜ್ಯದ ಗಾಯಕರು ಬಂದ್ರೂ, ಜನರು ಕನ್ನಡ ಹಾಡು ಕೇಳಿದರೆ ಹಾಡಲೇಬೇಕು. ಅನಗತ್ಯವಾಗಿ ಪ್ರೇಕ್ಷಕರೊಂದಿಗೆ ಕಿರಿಕ್ ಮಾಡುವಂತಿಲ್ಲ. ಕನ್ನಡ ಗೀತೆ ಕೇಳಿದರೆ ಕಡ್ಡಾಯವಾಗಿ ಹಾಡಲೇಬೇಕು. ಒಂದು ವೇಳೆ ಕನ್ನಡ ಗಾಯಕರು ಇಲ್ಲದಿದ್ದರೆ, ಅದಕ್ಕಾಗಿ ಬೇಕಾದ ವ್ಯವಸ್ಥೆ ಮಾಡಿಕೊಳ್ಳಬೇಕು ಎಂಬ ಷರತ್ತು ಜಾರಿಗೆ ತರಲು ಚಿಂತನೆ ನಡೆಸಿದ್ದಾರೆ.

ಇದನ್ನೂ ಓದಿ : ಬ್ಯಾಲೆನ್ಸ್ ತಪ್ಪಿ ಸೈಕಲ್​ನಿಂದ​ ಬಿದ್ದ ಡಿಕೆಶಿ.. ವಿಡಿಯೋ ವೈರಲ್​!

Btv Kannada
Author: Btv Kannada

Read More