ಕಲಬುರಗಿ : ಕಲಬುರಗಿ ಜಿಲ್ಲಾ ಕೋರ್ಟ್‌ನಲ್ಲಿ ಹಿರಿಯ ನ್ಯಾಯಾಧೀಶರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ ಎಂದಿನಂತೆ ನ್ಯಾಯಾಧೀಶ ವಿಶ್ವನಾಥ್ ವಿ ಮೂಗತಿ (44) ಅವರು ಕೋರ್ಟ್‌ಗೆ ಬಂದಿದ್ದರು.
ವಿಶ್ವನಾಥ್ ವಿ ಮೂಗತಿ ಅವರು ಕಲಬುರಗಿ ಜಿಲ್ಲಾ 3 ನೇ ಹಿರಿಯ ಶ್ರೇಣಿ ನ್ಯಾಯಾಧೀಶರಾಗಿದ್ದರು. ಕಳೆದ ವಾರವಷ್ಟೇ ಕಲಬುರಗಿಗೆ ವರ್ಗಾವಣೆಯಾಗಿ ಬಂದಿದ್ದರು.
ಇಂದು ಬೆಳಗ್ಗೆ ಕೋರ್ಟ್‌ಗೆ ಬಂದಿದ್ದ ನ್ಯಾಯಾಧೀಶರಿಗೆ ಕೋರ್ಟ್ ಹಾಲ್‌ಗೆ ಬರುವುದಕ್ಕೆ ಮುಂಚೆಯೇ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ : ಲೋಕಾ ಹೆಸರಲ್ಲಿ ಕೋಟಿ ಕೋಟಿ ವಸೂಲಿ – ನಿಂಗಪ್ಪ ಅರೆಸ್ಟ್ ಆಗ್ತಿದ್ದಂತೆ ಲೋಕಾ ವಸೂಲಿಯ 3 ಸ್ಫೋಟಕ ದಾಖಲೆ ಬಯಲು!

Author: Btv Kannada
Post Views: 258