ಬೆಂಗಳೂರು : ಮಾಟ-ಮಂತ್ರದ ಹೆಸರಿನಲ್ಲಿ, ಪೂಜೆಯ ನೆಪದಲ್ಲಿ ಮಹಿಳೆಯ ಬೆತ್ತಲೆ ವೀಡಿಯೋ ಮಾಡಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಅರ್ಚಕನೋರ್ವನನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಕೇರಳದ ಕೇರಳದ ತ್ರಿಶೂರ್ನ ಪೆರಿಗೊಟ್ಟುಕ್ಕಾರ ದೇವಾಲಯದ ಅರ್ಚಕ ಅರುಣ್ ಎಂದು ಗುರುತಿಸಲಾಗಿದೆ. ಇನ್ನು ಮುಖ್ಯ ಅರ್ಚಕ ಉನ್ನಿ ದಾಮೋದರನ್ ಪರಾರಿಯಾಗಿದ್ದಾನೆ. ಬೆಳ್ಳಂದೂರು ಪೊಲೀಸರು ಕಾಮುಕ ಅರ್ಚಕನನ್ನು ಬಂಧಿಸಿದ್ದಾರೆ.
ಇನ್ಸ್ಟಾಗ್ರಾಂ ನೋಡಿ ‘ನಮ್ಮ ಕುಟುಂಬಕ್ಕೆ ಮಾಟ ಮಂತ್ರ ಮಾಡಿಸಿದ್ದಾರೆ’ ಪರಿಹಾರ ಮಾಡಿಕೊಡಿ ಎಂದು ದೇವಾಲಯಕ್ಕೆ ಮಹಿಳೆಯೊಬ್ಬರು ತೆರಳಿದ್ದರು. 24 ಸಾವಿರ ಹಣ ಕಟ್ಟಿದ್ದರೆ ಪೂಜೆ ಮಾಡುವುದಾಗಿ ಹೇಳಿದ್ದ ಅರ್ಚಕ ಅರುಣ್, ಮಹಿಳೆಯ ಮೊಬೈಲ್ ನಂಬರ್ ಪಡೆದು ಸ್ವಲ್ಪ ದಿನ ಬಿಟ್ಟು ಬರಲು ಹೇಳಿದ್ದನು.
ತಡರಾತ್ರಿ ಮಹಿಳೆಯ ವಾಟ್ಸಾಪ್ ನಂಬರ್ಗೆ ಅರ್ಚಕ ಬೆತ್ತಲಾಗಿ ಕರೆ ಮಾಡಿದ್ದನು. ಮಾಟಮಂತ್ರ ಹೋಗಬೇಕು ಅಂದರೆ ನೀನು ಬೆತ್ತಲಾಗಬೇಕೆಂದು ಅರ್ಚಕ ಮಹಿಳೆಗೆ ಹೇಳಿದ್ದನು. ಇದಕ್ಕೆ ಮಹಿಳೆ ನಿರಾಕರಿಸಿದ್ದಾಳೆ. ಆದರೆ ನೀನು ಒಪ್ಪದಿದ್ದರೆ ನಿನ್ನ ಇಬ್ಬರು ಮಕ್ಕಳನ್ನು ಸಾಯಿಸುವ ಹಾಗೆ ಪೂಜೆ ಮಾಡುತ್ತೇನೆ ಎಂದು ಅರ್ಚಕ ಅರುಣ್ ಬೆದರಿಕೆಯೊಡ್ಡಿದ್ದಾನೆ. ಇದಕ್ಕೆ ಹೆದರಿದ ಮಹಿಳೆ, ಅರುಣ್ ಹೇಳಿದಂತೆ ವಿಡಿಯೋ ಕಾಲ್ನಲ್ಲಿ ಬೆತ್ತಲಾಗಿದ್ದಾಳೆ. ಇದಾದ ಬಳಿಕ ಕಾಮುಕ ಅರ್ಚಕ ಅರುಣ್ ಮಹಿಳೆಗೆ ತಡರಾತ್ರಿಯಲ್ಲಿ ಬೆತ್ತಲಾಗಿ ನಿರಂತರವಾಗಿ ವಾಟ್ಸಪ್ ಕರೆ ಮಾಡುತ್ತಿದ್ದ.
ನಂತರ ಅರುಣ್ ಅಶ್ಲೀಲ ವಿಡಿಯೋ ಮಾಡಿಟ್ಟುಕೊಂಡು ಮಹಿಳೆಗೆ ಕಿರುಕುಳ ನೀಡಿದ್ದಾನೆ. ಅಲ್ಲದೇ ಕೇರಳಕ್ಕೆ ಬರಲು ಒತ್ತಾಯಿಸಿದ್ದಾನೆ. ಅರ್ಚಕ ಅರುಣ್ ಒತ್ತಾಯಕ್ಕೆ ಕೇರಳಕ್ಕೆ ಹೋಗಿದ್ದ ಮಹಿಳೆಗೆ ಮುಖ್ಯ ಅರ್ಚಕ ಉನ್ನಿ ದಾಮೋದರ್, ಹಾಗೂ ಬಂಧಿತ ಅರ್ಚಕ ಅರುಣ್ ನಿರಂತರವಾಗಿ ಕಿರುಕುಳ ನೀಡಿದ್ದಾರೆ. ಅಲ್ಲದೇ ಕಾರಿನಲ್ಲಿ ಕರೆದುಕೊಂಡು ಹೋಗಿ ಅಸಭ್ಯವಾಗಿ ವರ್ತಿಸಿ ಅತ್ಯಾಚಾರಕ್ಕೆ ಕೂಡ ಯತ್ನಿಸಿದ್ದಾರೆ.
ಇಬ್ಬರ ಟಾರ್ಚರ್ಗೆ ಮನನೊಂದ ಮಹಿಳೆ ಬೆಳ್ಳಂದೂರು ಠಾಣೆಗೆ ದೂರು ನೀಡಿದ್ದಾರೆ. ಅರ್ಚಕ ಅರುಣ್ನನ್ನು ಸದ್ಯ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಮುಖ್ಯ ಅರ್ಚಕ ಉನ್ನಿ ದಾಮೋದರನ್ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ : ತುಮಕೂರಿಗೆ ತನ್ನದೇ ಆದ ಪರಂಪರೆ ಇದೆ – ಮರುನಾಮಕರಣಕ್ಕೆ ಸಿದ್ಧಗಂಗಾ ಶ್ರೀಗಳ ತೀವ್ರ ವಿರೋಧ!
