ಯಾದಗಿರಿ : ಯಾದಗಿರಿ ಪಿಎಸ್ಐ ಪರಶುರಾಮ್ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದ್ದು, ಸಾವಿನ ಬಗ್ಗೆ ಸೂಕ್ತ ತನಿಖೆ ಆಗಬೇಕೆಂದು ಪರಶುರಾಮ್ ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ. ಪಿಎಸ್ಐ ಸಾವು ಕ್ಷಣಕ್ಷಣಕ್ಕೂ ರೋಚಕತೆ ಪಡೆಯುತ್ತಿದ್ದು, ಪಿಎಸ್ಐ ಸಾವಿಗೆ ಸ್ಥಳೀಯ ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಹಾಗೂ ಅವರ ಪುತ್ರ ಸನ್ನಿ ಕಾರಣ ಎಂದು ಗಂಭೀರ ಆರೋಪ ಕೇಳಿ ಬಂದಿದೆ.
![ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಹಾಗೂ ಆತನ ಪುತ್ರ ಸನ್ನಿ](https://btvkannada.com/wp-content/uploads/2024/08/WhatsApp-Image-2024-08-03-at-10.16.47-AM-300x169.jpeg)
ಶಾಸಕ ಚನ್ನಾರೆಡ್ಡಿ ಹಾಗೂ ಆತನ ಪುತ್ರ ಸನ್ನಿ ಮೇಲೆ PSI ಪತ್ನಿ ಗಂಭೀರ ಆರೋಪ ಮಾಡಿದ್ದು, ಶಾಸಕ ಹಾಗೂ ಪುತ್ರನ ಮೇಲೆ ಕಂಪ್ಲೇಂಟ್ ಮಾಡುವೆ, ನನ್ನ ಗಂಡನ ಸಾವಿಗೆ ಶಾಸಕರೇ ಕಾರಣ ಎಂದು ಆಕ್ರೋಶ ಹೊರಹಾಕಿದ್ದಾರೆ. ನಾನು ನನ್ನ ಮಕ್ಕಳಿಗೆ ಯಾರು ದಿಕ್ಕು ಎಂದು PSI ಪತ್ನಿ ಕಣ್ಣೀರು ಹಾಕಿದ್ದು, ನನ್ನ ಪತಿ ಪರಶುರಾಮ ಸಾವಿಗೆ ನ್ಯಾಯ ಸೀಗಬೇಕಾದ್ರೆ ಸ್ಥಳೀಯ ಶಾಸಕ ಚನ್ನರೆಡ್ಡಿಯನ್ನು ಸ್ಥಳಕ್ಕೆ ಕರೆಯವಂತೆ ಪಟ್ಟು ಹಿಡಿದ್ದಾರೆ.
ಸದ್ಯ ಯಾದಗಿರಿ ಪಿಎಸ್ಐ ಸಾವಿಗೆ MLA ಚನ್ನಾರೆಡ್ಡಿಯ ಕಿರುಕುಳವೇ ಕಾರಣ ಎಂದು ಹೇಳಲಾಗುತ್ತಿದೆ. ಟ್ರಾನ್ಸ್ಫರ್ಗೆ ಶಾಸಕರು ಲಕ್ಷ ಲಕ್ಷ ಡಿಮ್ಯಾಂಡ್ ಮಾಡಿದ್ದರು. ಚನ್ನಾರೆಡ್ಡಿ 30 ಲಕ್ಷಕ್ಕೂ ಹೆಚ್ಚು ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಇನ್ನು ಅವಧಿಗಿಂತ ಮುನ್ನವೇ MLA ಚನ್ನಾರೆಡ್ಡಿ ಪರಶುರಾಮ್ಗೆ ಟ್ರಾನ್ಸ್ಫರ್ಗೆ ಕಿರುಕುಳ ಕೊಟ್ಟಿದ್ದರು ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಎಸ್ಪಿಗೆ ಕೊಟ್ಟಿರೋ ದೂರಿನ ಪ್ರತಿಯಲ್ಲಿ PSI ಪತ್ನಿ ಉಲ್ಲೇಖಿಸಿದ್ದಾರೆ.
ಇನ್ನು ನಿಯಮಬಾಹಿರವಾಗಿ ಪರಶುರಾಮ್ ರನ್ನು ವರ್ಗಾವಣೆ ಮಾಡಿದ್ದರಿಂದ ಅವರು ತೀವ್ರ ಒತ್ತಡಕ್ಕೆ ಒಳಗಾಗಿದ್ದರು. ಭಾರೀ ಒತ್ತಡದಿಂದ ಅವರಿಗೆ ಹೃದಯಾಘಾತವಾಗಿದೆ. ಯಾದಗಿರಿ ಶಾಸಕರಿಗೆ ಹಣದ ಆಸೆ ಬಹಳಷ್ಟಿದೆ. ಪರಶುರಾಮ್ ಅವರ ಜಾಗಕ್ಕೆ ಬೇರೊಬ್ಬರು ಬಂದರೂ ವರ್ಗಾವಣೆ ಪಟ್ಟಿಯಲ್ಲಿ ಪರಶುರಾಮ್ ಹೆಸರೇ ಇರಲಿಲ್ಲ. ಈಗ ಹೊಸದಾಗಿ ಬಂದವರು ಹಣ ನೀಡಿಯೇ ಬಂದಿದ್ದಾರೆ ಎಂದು ಮಾವ ವೆಂಕಟಸ್ವಾಮಿ ಕೂಡ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ : ಕೋಲಾರದಲ್ಲಿ ಭೀಕರ ಕಾರು ಅಪಘಾತ – ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು, ಓರ್ವ ಪಾರು..!