ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ಸಂಸಾರದಲ್ಲಿ ಬಿರುಗಾಳಿ ಬೀಸಿದೆ. ಪತ್ನಿ ಸೈರಾ ಬಾನು ಜೊತೆಗಿನ ದಾಂಪತ್ಯಕ್ಕೆ ಅವರು ಅಂತ್ಯ ಹಾಡಿದ್ದಾರೆ. ಎ.ಆರ್. ರೆಹಮಾನ್ ಮತ್ತು ಸೈರಾ ಬಾನು ಅವರು 29 ವರ್ಷಗಳ ಕಾಲ ಸಂಸಾರ ನಡೆಸಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅವರಿಬ್ಬರ ನಡುವೆ ವೈಮನಸ್ಸು ಮೂಡಿತ್ತು. ಆ ವಿಚಾರವನ್ನು ಸೈರಾ ಬಾನು ಖಚಿತಪಡಿಸಿದ್ದಾರೆ.
ಒಬ್ಬರಿಗೊಬ್ಬರ ನಡುವೆ ಪ್ರೀತಿ ಇದ್ದರೂ, ತಮ್ಮ ನಡುವೆ ಆಗುವ ಮನಸ್ತಾಪಗಳು ಹಾಗೂ ಸಮಸ್ಯೆಗಳು ದೊಡ್ಡ ಅಂತರವನ್ನು ಸೃಷ್ಟಿಸಿದೆ ಎಂದು ದಂಪತಿಗಳು ಕಂಡುಕೊಂಡಿದ್ದಾರೆ. ಈ ಹಂತದಲ್ಲಿ ಯಾರೂ ಕೂಡ ತಮ್ಮ ನಡುವೆ ಸೇತುವೆಯಾಗಲು ಸಾಧ್ಯವಿಲ್ಲ ಎಂದು ಅವರು ಭಾವಿಸಿದ್ದಾರೆ. ಈ ಕಾರಣದಿಂದಾ ಸಾಯಿರಾ ಅವರು ನೋವು ಹಾಗೂ ಸಂಕಟದಿಂದಲೇ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಸಾಯಿರಾ ಅವರ ಈ ಸವಾಲಿನ ಸಮಯದಲ್ಲಿ ಅಭಿಮಾನಿಗಳು ತಮ್ಮ ಪ್ರೈವಸಿಯನ್ನು ಗೌರಿಸವೇಕು ಎಂದು ಬಯಸುತ್ತಾರೆ. ಏಕೆಂದರೆ, ಅವರೀಗ ತಮ್ಮ ಜೀವನದ ಅತ್ಯಂತ ಕಷ್ಟಕರ ಅಧ್ಯಾಯದಲ್ಲಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ. ಸಾಯಿರಾ ಗುಜರಾತಿ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಉತ್ತರ ಭಾರತದ ಸಂಪ್ರದಾಯಗಳು ಮತ್ತು ಸಂಸ್ಕೃತಿಯಲ್ಲಿ ಬೆಳೆದವರಾಗಿದ್ದಾರೆ. ಇವರಿಬ್ಬರು ಖತೀಜಾ, ರಹೀಮಾ ಮತ್ತು ಅಮೀನ್ ಎನ್ನುವ ಮೂರು ಮಕ್ಕಳಿಗೆ ತಂದೆ-ತಾಯಿ ಆಗಿದ್ದಾರೆ.
1995ರ ಮಾರ್ಚ್ 12 ರಂದು ಎ.ಆರ್. ರೆಹಮಾನ್ ಮತ್ತು ಸೈರಾ ಬಾನು ವಿವಾಹ ನೆರವೇರಿತ್ತು. ಎಆರ್ ರೆಹಮಾನ್ ಪತ್ನಿ ಸಾಯಿರಾ ಬಾನು ಅವರೊಂದಿಗೆ ಕಾಣಿಸಿಕೊಳ್ಳುವುದು ಬಹಳ ಅಪರೂಪವಾಗಿತ್ತು. ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಸಾಮಾನ್ಯವಾಗಿ ಅವರು ಏಕಾಂಗಿಯಾಗಿ ಭಾಗವಹಿಸುತ್ತಿದ್ದರು. 2024ರ ಜುಲೈನಲ್ಲಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹದ ವೇಳೆ ಇಬ್ಬರೂ ಜೊತೆಯಾಗಿ ಇರುವ ಫೋಟೋವನ್ನು ಎಆರ್ ರೆಹಮಾನ್ ತಮ್ಮ ಇನ್ಸ್‌ಟಾಗ್ರಾಮ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದರು.